ರೈತರು ತಾವು ಬೆಳೆದ ಉತ್ಪನ್ನವನ್ನು ತಾವೇ ಮಾರಾಟ ಮಾಡಿದಾಗ ಮಾತ್ರ ಆರ್ಥಿಕ ಸಭಲತೆ ಸಾದ್ಯ. – ನಜೀರ್.

????????????????????????????????????

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನ ಸಿರಿಗೇರಿ ಸಮೀಪದ ಹಾವಿನಾಳ್ ಗ್ರಾಮದ ರೈತರ ಜಮೀನಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಕೃಷಿ ಇಲಾಖೆಯ ವತಿಯಿಂದ ನಡೆದ ರಾಷ್ಟಿçÃಯ ಆಹಾರ ಭದ್ರತಾ ಯೋಜನೆ 2020-21ನೇ ಸಾಲಿನ ಕ್ಷೇತ್ರೋತ್ಸವ ಮತ್ತು ಆತ್ಮಯೋಜನಾ ಅಡಿಯಲ್ಲಿ ಹಿಂಗಾರು ಬೆಳೆಗಳ ಜಿಲ್ಲೆಯೊಳಗೆ ತರಬೇತಿ ಕಾರ್ಯಕ್ರಮವನ್ನು ಸಹಾಯಕ ಕೃಷಿ ಅಧಿಕಾರಿಗಳಾದ ನಜೀರ್ ಅಹಮದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರೈತರು ತಾವು ಬೆಳೆಯುವ ಬೆಳೆಯು ಮಿತಪ್ರಮಾಣದಲ್ಲಾದರೂ ಸರಿ ಉತ್ತಮ ಗುಣಮಟ್ಟತೆಯನ್ನು ಕಾಪಾಡಿ ಸಂಸ್ಕರಿಸಿದ ಉತ್ಪಾಧನೆಯನ್ನು ಪಾಕೆಟ್‌ಗಳಲ್ಲಿ ಶೇಖರಿಸಿ ಪಟ್ಟಣಗಳಲ್ಲಿನ ಸೂಪರ್ ಮಾರ್ಕೆಟ್ ನಂತಹ ಅಂಗಡಿಗಳಿಗೆ ಮಾರಿದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದರು.
ಈ ಸಲ ತಾಲೂಕಿನಲ್ಲಿ ಆಹಾರ ಪದಾರ್ಥಗಳಾದ ನವಣೆ ಮತ್ತು ತೊಗರಿ ಬೆಳೆಗಳನ್ನು ಬೆಳೆಯುವಂತೆ ಉತ್ತೇಜಿಸುವುದಕ್ಕಾಗಿ ತಾಲೂಕಿಗೆ 250 ಹೆಕ್ಟೇರ್ ಜಮೀನು ಆಯ್ಕೆಯಾಗಿದ್ದು ಅದರಲ್ಲಿ ತೆಕ್ಕಲಕೋಟೆ ಹೋಬಳಿಗೆ 98 ಹೆಕ್ಟೇರ್‌ನ 68 ರೈತರನ್ನು ನೊಂದಾಯಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ನವಣೆ ಬೆಳೆದ ರೈತರಿಗೆ ಹೆಕ್ಟೇರ್‌ಗೆ 6ಸಾವಿರ ರೂಗಳÀ ಹಾಗೂ ತೊಗರಿ ಬೆಳೆಗೆ 9ಸಾವಿರ ಮೌಲ್ಯದ ಬೀಜ ಔಷದಿ ಗೊಬ್ಬರಕ್ಕಾಗಿ ತಗಲುವ ವೆಚ್ಚವನ್ನು ನೀಡಿದ್ದು ಮುಂದಿನ ಐದು ವರ್ಷಗಳಾಗಷ್ಟು ಬೀಜಗಳನ್ನು ರೈತರು ಬೆಳೆದ ಉತ್ಪಾದನೆಯನ್ನು ಸಂಸ್ಕರಿಸಿ ಶೇಖರಿಸಿಕೊಂಡು ಅವುಗಳನ್ನು ಬಿತ್ತನೆ ಮಾಡಿದಾಗ ಮಾತ್ರ ಉತ್ತಮ ಲಾಭ ಪಡೆಯಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಡೆಸೂಗೂರು ಸಂಶೋಧನಾ ಕ್ಷೇತ್ರದ ಕೃಷಿ ವಿಜ್ಞಾನಿ ಚಂದ್ರನಾಯ್ಕ ಮಾತನಾಡಿ, ರೈತರಿಗಾಗಿ ಕೇಂದ್ರ ಸರಕಾರ 2020ರ ಹೊಸ ಕೃಷಿನೀತಿಯನ್ನು ಜಾರಿಗೆ ತಂದಿದ್ದು ಮದ್ಯವರ್ತಿಗಳನ್ನು ದೂರವಿಟ್ಟು ತಾವು ಬೆಳೆದ ಬೆಳೆಗೆ ಡಿಜಿಟಲೀಕರಣ ಮಾರುಕಟ್ಟೆಯಾಗಿ ತಾವೇ ನೇರವಾಗಿ ಉತ್ತಮ ಧರ ಸಿಗುವ ದೇಶದ ಯಾವುದೇ ರಾಜ್ಯಕ್ಕೆ ನೇರವಾಗಿ ಮಾರಾಟ ಮಾಡುವುದರಿಂದ ನೀರಿಕ್ಷಿತ ಲಾಭಗಳಿಸಬಹುದಾಗಿದೆಂದು ತಿಳಿಸಿದರು.
ಈ ವೇಳೆ ಕೃಷಿ ಅಧಿಕಾರಿಗಳಾದ ಸೌಮ್ಯ, ಪರಮೇಶ್ವರರೆಡ್ಡಿ, ಆತ್ಮಯೋಜನಾ ಸಿಬ್ಬಂದಿ ಶಿಲ್ಪಾ ಊರಿನ ಪ್ರಗತಿಪರ ರೈತರಾದ ಸಿದ್ದರಾಮಪ್ಪ, ಚಂದ್ರಪ್ಪ, ಮಲ್ಲಿಕಾರ್ಜುನ ಇನ್ನಿತರ ಗ್ರಾಮದ ರೈತಭಾಂದವರು ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap