ಬ್ಯಾಂಕ್ ಗಳಿಗೆ ಮೂರು ತಿಂಗಳಲ್ಲಿ 19,964 ಕೋಟಿ ವಂಚನೆ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ (PSB’s) ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ 2,867 ಪ್ರಕರಣಗಳಲ್ಲಿ 19,964 ಕೋಟಿ ರುಪಾಯಿ ವಂಚನೆ ಆಗಿದೆ ಎಂದು ಆರ್ ಟಿಐ ಅಡಿ ಹಾಕಿಕೊಂಡಿದ್ದ ಅರ್ಜಿಯಲ್ಲಿ ಪ್ರತಿಕ್ರಿಯೆ ಬಂದಿದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್ ಬಿಐ) ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಯಾಗಿವೆ. ಆದರೆ ಮೌಲ್ಯದ ದೃಷ್ಟಿಯಿಂದ ಬ್ಯಾಂಕ್ ಆಫ್ ಇಂಡಿಯಾಗೆ ಅತಿ ಹೆಚ್ಚು ವಂಚನೆಯಾಗಿದೆ.
ಆರ್ ಟಿಐ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಹಾಕಿಕೊಂಡಿದ್ದ ಅರ್ಜಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. 2020ರ ಏಪ್ರಿಲ್ ನಿಂದ ಜೂನ್ ಮಧ್ಯೆ ಒಟ್ಟು 12 ಸಾರ್ವಜನಿಕ ಬ್ಯಾಂಕ್ ನಲ್ಲಿ ಎಸ್ ಬಿಐನಲ್ಲಿ ಅತಿ ಹೆಚ್ಚು, ಅಂದರೆ 2050 ವಂಚನೆ ಪ್ರಕರಣಗಳು ದಾಖಲಾಗಿದ್ದು, 2,325.88 ಕೋಟಿ ರುಪಾಯಿ ವಂಚನೆಯಾಗಿದೆ.
ಯಾವ ಬ್ಯಾಂಕ್ ಗೆ ಎಷ್ಟು ವಂಚನೆ?
ಬ್ಯಾಂಕ್ ಆಫ್ ಇಂಡಿಯಾ 47 ಪ್ರಕರಣ, 5,124.87 ಕೋಟಿ
ಕೆನರಾ ಬ್ಯಾಂಕ್ 33 ಪ್ರಕರಣ, 3,885.26 ಕೋಟಿ
ಬ್ಯಾಂಕ್ ಆಫ್ ಬರೋಡಾ 60 ಪ್ರಕರಣ, 2842.94 ಕೋಟಿ
ಇಂಡಿಯನ್ ಬ್ಯಾಂಕ್ 45 ಪ್ರಕರಣ, 1469.79 ಕೋಟಿ
ಇಂಡಿಯನ್ ಓವರ್ ಸೀಸ್ ಬ್ಯಾಂಕ್ 37 ಪ್ರಕರಣ, 1207.65 ಕೋಟಿ
ಬ್ಯಾಂಕ್ ಆಫ್ ಮಹಾರಾಷ್ಟ್ರ 9 ಪ್ರಕರಣ, 1,140.37 ಕೋಟಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ 240 ಪ್ರಕರಣ, 270.65 ಕೋಟಿ
ಯುಕೋ ಬ್ಯಾಂಕ್ 130 ಪ್ರಕರಣ, 831.35 ಕೋಟಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 149 ಪ್ರಕರಣ, 655.84 ಕೋಟಿ
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 18 ಪ್ರಕರಣ, 163.3 ಕೋಟಿ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 49 ಪ್ರಕರಣ, 46.52 ಕೋಟಿ
ಈ ದತ್ತಾಂಶಗಳ ಪೈಕಿ ಕೆಲವು ಬದಲಾವಣೆ ಕೂಡ ಆಗಬಹುದು ಎಂದು ಆರ್ ಬಿಐ ಪ್ರತಿಕ್ರಿಯೆ ನೀಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap