ಜೋಳದರಾಶಿ ಗುಡ್ಡದ ಅಭಿವೃದ್ಧಿಗೆ 27 ಕೋಟಿ ರೂ.ಮೀಸಲು:ಸಚಿವ ಆನಂದಸಿ0ಗ್

ಸಿರಿನಾಡ ಸುದ್ದಿ, ಹೊಸಪೇಟೆ: ಜೋಳದರಾಶಿ ಗುಡ್ಡದ ಅಭಿವೃದ್ಧಿಗೆ 27 ಕೋಟಿ ರೂ.ಅನುದಾನವನ್ನು ಈಗಾಗಲೇ ಮೀಸಲಿರಿಸಲಾಗಿದ್ದು, ಆರಂಭಿಕವಾಗಿ 10 ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಬೀದಿದೀಪ,ನೀರಿನ ವ್ಯವಸ್ಥೆ ಹಾಗೂ ಇನ್ನೀತರ ಸೌಲಭ್ಯಗಳು ಒದಗಿಸುವುದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದು ಅರಣ್ಯ, ಜೀವಿ ಪರಿಸ್ಥಿತಿ ಸಚಿವ ಆನಂದ್ ಸಿಂಗ್ ತಿಳಿಸಿದರು.
ಅರಣ್ಯ ಇಲಾಖೆಯ ಬಳ್ಳಾರಿ ಪ್ರಾದೇಶಿಕ ವಿಭಾಗ ಹಾಗೂ ಹೊಸಪೇಟೆ ಪ್ರಾದೇಶಿಕ ವಲಯದ ಸಂಯುಕ್ತಾಶ್ರಯದಲ್ಲಿ ನಗರದ ಜೋಳದರಾಶಿ ಗುಡ್ಡ ಪ್ರದೇಶದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಸಿರೀಕರಣ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜೋಳದರಾಶಿ ಗುಡ್ಡ ಆಕರ್ಷಣೀಯ ತಾಣವನ್ನಾಗಿಸುವ ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ;ಇದರ ಜೊತೆಗೆ ಗುಡ್ಡದ ಮೇಲ್ಬಾಗದಲ್ಲಿ ಸ್ವಾಮಿ ವಿವೇಕಾನಂದರ ಬೃಹತ್ ಪ್ರತಿಮೆ ಕೂಡ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಭವಿಷ್ಯದಲ್ಲಿ ಪ್ರಕೃತಿಯನ್ನು ಕಾಪಾಡಲು ಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ವಿಶೇಷ ಶ್ರಮ ಪಡುತ್ತಿದೆ. ಅರಣ್ಯ ಇಲಾಖೆ ಜೊತೆ ಸಾರ್ವಜನಿಕರಿಗೂ ಪರಿಸರ ರಕ್ಷಣೆಯ ಜವಾಬ್ದಾರಿ ಇದೆ. ಇಂದಿನಿAದ ಜನವರಿ ಕಾಲದವರೆಗೂ ಸಸಿಗಳನ್ನು ಅತ್ಯಂತ ನಿಗಾದಲ್ಲಿ ಬೆಳೆಸಿದರೇ ದೊಡ್ಡ ಮರಗಳಾಗಿ ಇಡೀ ಕ್ಷೇತ್ರಕ್ಕೆ ಆಕರ್ಷಣೆ ಸಿಕ್ಕಂತಾಗುತ್ತದೆ ಎಂದು ಹೇಳಿದ ಸಚಿವ ಸಿಂಗ್ ಅವರು ಈ ಪ್ರದೇಶವನ್ನು ಪ್ರವಾಸಿತಾಣವನ್ನಾಗಿಸಲಾಗುವುದು ಎಂದರು.
ಅರಣ್ಯ ನಾಶ ಸಂಬAಧಿತ ಘಟನೆಗಳಾದರೂ ಎಲ್ಲಾದರೂ ಕಂಡುಬAದಲ್ಲಿ ತಕ್ಷಣ ದೂರು ನೀಡಬೇಕು ಎಂದು ಹೇಳಿದ ಅವರು ಗ್ರಾಮೀಣ ಪ್ರದೇಶಗಳ ಕೆಲ ಜನರಿಗೆ ಅರಣ್ಯ ಇಲಾಖೆಯಿಂದ ಪರಿಸರ ರಕ್ಷಣೆ ಕುರಿತಾಗಿ ಕಿರುಕುಳ ಎಂಬ ತಪ್ಪು ಭಾವನೆ ಇದೆ. ಇದನ್ನು ಹೋಗಲಾಡಿಸಲು ಅರಣ್ಯ ಇಲಾಖೆಗಳು ವಿವಿಧ ಕಾರ್ಯಕ್ರಮಗಳ ಮೂಲಕ ಅಂತವರ ಮನಪರಿವರ್ತನೆ ಮಾಡಬೇಕು ಎಂದರು.
ನಗರದ ಜನರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶ್ರಮಪಟ್ಟು ಗಿಡ-ಮರಗಳನ್ನು ಬೆಳೆಸುವುದರ ಜೊತೆ ಸಂರಕ್ಷಣೆ ಮಾಡುತ್ತಿದ್ದಾರೆ. ಗುಡ್ಡದ ಪ್ರದೇಶದಲ್ಲಿ ಏನಾದರೂ ನೀರಿನ ಕೊರತೆ ಇದ್ದಲ್ಲಿ ಹನಿ ನೀರಾವರಿ ಸೌಲಭ್ಯವನ್ನು ಇಲಾಖೆಯ ವತಿಯಿಂದ ಕಲ್ಪಿಸಿಕೊಡಲಾಗುತ್ತದೆ. ಅದೇ ರೀತಿಯಾಗಿ ಮಳೆಗಾಲವನ್ನು ಸದುಪಯೋಗ ಪಡಿಸಿಕೊಂಡು ಹಸಿರೀಕರಣ ಕಾರ್ಯಕ್ರಮವನ್ನು ಸಾರ್ಥಕಗೊಳಿಸಬೇಕು ಎಂದರು.
ಹುಡಾ ಅಧ್ಯಕ್ಷ ಅಶೋಕ್ ಜೀರೆ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್, ಉಪಅರಣ್ಯ ಸಂರಕ್ಷಣಾಧಿಕಾರಿ ಸಿದ್ಧರಾಮಪ್ಪ ಚಳಕಾಪುರೆ, ವಲಯ ಅರಣ್ಯಾಧಿಕಾರಿ ವಿನಯ್, ತಹಶೀಲ್ದಾರ್ ಹೆಚ್.ವಿಶ್ವನಾಥ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಇದ್ದರು. ಅರಣ್ಯ ರಕ್ಷಕ ನಾಗರಾಜ್ ಹೆಚ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap