ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ !

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ಎರಡನೇ ದಿನ ಇಳಿಕೆ ಕಂಡಿದೆ. ಮಂಗಳವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 658 ರೂಪಾಯಿ ಇಳಿಕೆ ಕಂಡು 50,683 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 640 ರೂಪಾಯಿ ಕಡಿಮೆಯಾಗಿ 48,960 ಆಗಿದೆ. 1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 4,182 ರೂಪಾಯಿ ಕಡಿಮೆಯಾಗಿ 59,959 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.
ಷೇರುಪೇಟೆ ವಿಚಾರಕ್ಕೆ ಬಂದ್ರೆ ನಿನ್ನೆ 812 ಅಂಕಗಳ ಭಾರಿ ಕುಸಿತ ಕಂಡ ಸಂವೇದಿ ಸೂಚ್ಯಂಕ ಇವತ್ತು ಮತ್ತೆ 300 ಅಂಕ ಕುಸಿದು 37,734ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 97 ಅಂಕ ಕುಸಿದು 11,154 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 20 ಪೈಸೆ ಕುಸಿತ ಕಂಡು 73 ರೂಪಾಯಿ 58 ಪೈಸೆ ಆಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap