‘ಕೊಂಚಿಗೇರಿಯಲ್ಲಿ ತಾಲೂಕಾಡಳಿತದಿಂದ ಬಚ್ಚಲು ಇಂಗುಗು0ಡಿಗಳ ನಿರ್ಮಾಣದ ಬಗ್ಗೆ ಪ್ರಚಾರ’

ಸಿರಿನಾಡ ಸುದ್ದಿ, ಸಿರಿಗೇರಿ: ಸಮೀಪದ ಕೊಂಚಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಚ್ಚಲು ಇಂಗುಗು0ಡಿಗಳನ್ನು ನಿರ್ಮಿಸಿಕೊಂಡು ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಪ್ರೇರೇಪಿಸಿ ತಾಲೂಕಾಡಳಿತದಿಂದ ರೋಜ್‌ಗಾರ್ ಪ್ರಚಾರದ ವಾಹನಕ್ಕೆ ಪಿಡಿಒ ಲೀಲಾವತಿಬಂಡೂರ್ ಚಾಲನೆ ನೀಡಿದರು.
ಪಿಡಿಒ ಲೀಲಾವತಿಬಂಡೂರ್ ಮಾತನಾಡಿ, ಗ್ರಾಮಗಳಲ್ಲಿನ ನೈರ್ಮಲ್ಯ ಕಾಪಾಡಲು, ಜನರಿಗೆ ನಾನಾ ರೋಗಗಳು ಹರಡದಂತೆ ತಡೆಯಲು, ರಸ್ತೆಯಲ್ಲಿ, ಬೀದಿಗಳಲ್ಲಿ ನೀರು ನಿಲ್ಲದಂತೆ ಮಾಡಿ ಗ್ರಾಮಗಳ ಶುಚಿತ್ವ ಕಾಪಾಡಿಕೊಳ್ಳುವುದು ಬಚ್ಚಲು ಇಂಗುಗುAಡಿಗಳ ನಿರ್ಮಾಣವು ಯೋಜನೆಯ ಉದ್ದೇಶವಾಗಿದೆ, ಪ್ರಾರಂಭದಲ್ಲಿ ಪಂಚಾಯಿತಿಯಿAದ ೫೦ ಫಲಾನುಭವಿಗಳ ಮನೆಗಳಲ್ಲಿ ಇಂಗುಗು0ಡಿ ನಿರ್ಮಿಸಲು ಅವಕಾಶವಿದ್ದು ಗ್ರಾಮದಲ್ಲಿನ ಅತಿಹೆಚ್ಚು ನೀರು ನಿಲ್ಲುವ ಓಣಿಗಳ, ರಸ್ತೆ ಪಕ್ಕದ ಮನೆಗಳವರಿಗೆ ಆದ್ಯತೆ ನೀಡಲಾಗುವುದೆಂದು ತಿಳಿಸಿದರು.
ತಾಂತ್ರಿಕ ಸಹಾಯಕ ಅಧಿಕಾರಿ ರಾಘವೇಂದ್ರ ಮಾತನಾಡಿ, ನರೇಗಾ ಅಡಿಯಲ್ಲಿ ಫಲಾನುಭವಿಗಳಿಗೆ ಕೂಲಿ ಹಣ 3೦೦೦ ರೂ. ಖಾತೆಗೆ ನೀಡಲಾಗಿದೆ, ಉಳಿದ ಹಣವನ್ನು ಕಾಮಗಾರಿ ಪರಿಶೀಲಿಸಿ ವರದಿಯೊಂದಿಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮಂಜೂರು ಮಾಡಿಸಲಾಗುವುದೆಂದು ತಿಳಿಸಿದರು.
ಬಿಎಫ್‌ಟಿ ಶಿವರಾಜ್ ಮತ್ತು ಮೇಟಿಗಳಾದ ವೀರೇಶ್, ಜಲಾಲಿ ವಿವರ ನೀಡಿ ಈಗಾಗಲೇ ಗ್ರಾಮದಲ್ಲಿ ೨೫ ಜಾಬ್‌ಕಾರ್ಡ್ ಹೊಂದಿರುವ ಕೂಲಿಕಾರ್ಮಿಕರ ಮನೆ ಮುಂದೆ ಬಚ್ಚಲು ಇಂಗುಗುAಡಿಗಳ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ, ಇನ್ನು ೨೫ ಫಲಾನುಭವಿಗಳಿಗೆ ನಿರ್ಮಿಸಲು ಪಂಚಾಯ್ತಿಯಿ0ದ ಅನುಮತಿ ನೀಡಬೇಕಿದೆ. ಗ್ರಾಮದಲ್ಲಿ ಜನರು ಸ್ವಚ್ಛತೆಯ ದೃಷ್ಠಿಯಿಂದ ಇಂಗುಗು0ಡಿ ನಿರ್ಮಿಸಿಕೊಳ್ಳಲು ಬೇಡಿಕೆಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಇದೇವೇಳೆ ಗ್ರಾಮದಲ್ಲಿ ನಿರ್ಮಿಸಿದ ಇಂಗುಗು0ಡಿಗಳನ್ನು ಪಿಡಿಒ ಲೀಲಾವತಿ ಬಂಡೂರ್ ವೀಕ್ಷಿಸಿ ಮಾಹಿತಿ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap