ಎಸ್.ಟಿ. ಮೋರ್ಚಾದ ಪದಾಧಿಕಾರಿಗಳಿಂದ ಸ್ವಚ್ಛತಾ ಕಾರ್ಯ

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕಂಪ್ಲಿ ಕ್ಷೇತ್ರದ ಬಿಜೆಪಿ ಎಸ್.ಟಿ. ಮೋರ್ಚಾದ ಪದಾಧಿಕಾರಿಗಳ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಗುರುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಂಪ್ಲಿ ಕ್ಷೇತ್ರದ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಎನ್.ಕೊಮಾರೆಪ್ಪ ಮಾತನಾಡಿ, ಮನ್ ಕಿ ಬಾತ್ ಮೂಲಕ ಜನಮನ ಗೆದ್ದ ಭಾರತ ದೇಶದ ಹೆಮ್ಮೆಯ ನಾಯಕ ಮೋದಿಜೀಯವರು ಭಾರತ ದೇಶವನ್ನು ವಿಶ್ವಗುರು ದೇಶವನ್ನಾಗಿಸುವ ಪಣತೊಟ್ಟು, ಬಡವರಿಗೆ, ಯುವಕರಿಗೆ ಹಾಗೂ ದೇಶದ ಅಭಿವೃದ್ಧಿಗಾಗಿ ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಮಹನ್ ವ್ಯಕ್ತಿ. ಇಂತಹವರ ಆದರ್ಶಗಳನ್ನು ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ದೇಶಾಭಿಮಾನ ಮೆರೆದರೆ ಭಾರತ ದೇಶ ಪ್ರಪಂಚಕ್ಕೆ ವಿಶ್ವಗುರು ಆಗುತ್ತದೆ ಎಂದರು.
ನAತರ ಎಲ್ಲಾ ಪದಾಧಿಕಾರಿಗಳು ಸೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಾಗೂ ಕ್ರೀಡಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಕುರುಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಚಾನಾಳ್ ಆನಂದ, ಕಂಪ್ಲಿ ಯುವ ಮೋರ್ಚಾ ಅಧ್ಯಕ್ಷ ಎಸ್.ನಾಟರಾಜಗೌಡ, ಎಸ್.ಟಿ ಮೋರ್ಚಾದ ಕಾರ್ಯದರ್ಶಿ ಗೊವೀಂದಪ್ಪ, ಮಂಜುನಾಥ, ಹಂದ್ರಾಳ್ ಮಲ್ಲಿಕಾಜುನ್, ಉದಯ್, ಪುರುಷೋತ್ತಮ ಹಾಗೂ ಎಸ್.ಟಿ ಮೋರ್ಚಾದ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap