ಅಕ್ಟೋಬರ್ ತಿಂಗಳಲ್ಲಿನ ಬ್ಯಾಂಕ್ ರಜಾ ದಿನಗಳ ವಿವರ

ನವದೆಹಲಿ: ಭಾರತ ದೇಶದಲ್ಲಿ ವರ್ಷದ ಹತ್ತನೆಯ ತಿಂಗಳಲ್ಲಿ ಹಲವಾರು ಸಾಂಪ್ರದಾಯಿಕ ಮತ್ತು ಧಾರ್ಮಿಕ ಉತ್ಸವಗಳು ನಡೆಯುತ್ತವೆ. ಆದಾಗ್ಯೂ, ಈ ತಿಂಗಳಲ್ಲಿ ಹಲವಾರು ಧಾರ್ಮಿಕ ಹಬ್ಬಗಳು ಇರುತ್ತವೆ ಕೂಡ. ಈ ವೇಳೆಯಲ್ಲಿ ಅಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಪ್ರಾದೇಶಿಕ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಾರ್ಗದರ್ಶಿ ಸೂತ್ರದ ಪ್ರಕಾರ, ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಲ್ಪಟ್ಟಿರುತ್ತವೆ, ಆದರೆ ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಉದಾಹರಣೆಗೆ, ನಾರಾಯಣ ಗುರು ಜಯಂತಿ, ಮಹಾಲಯ ಮುಂತಾದ ರಜಾ ದಿನಗಳಂದು ಈ ತಿಂಗಳು ಕೆಲವು ನಗರಗಳಲ್ಲಿ ಮಾತ್ರ ಬ್ಯಾಂಕ್ ಗಳು ಮುಚ್ಚಲಿವೆ.
ಇದಲ್ಲದೆ, ದುರ್ಗಾ ಪೂಜೆ, ಮಹಾಸಪ್ತಮಿ, ಮಹಾನವಮಿ, ದಸರಾ, ಮಿಲಾದ್-ಎ-ಶರೀಫ್, ಈದ್-ಎ-ಮಿಲಾದ್-ಉಲ್-ನಬಿ ಬಾರಾವತ್ / ಲಕ್ಷ್ಮೀ ಪೂಜೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ / ಮಹರ್ಷಿ ವಾಲ್ಮೀಕಿ ಜಯಂತಿ / ಕುಮಾರ್ ಪೂರ್ಣಿಮಾ ದಂದು ಕೂಡ ಕೆಲ ರಾಜ್ಯಗಳಲ್ಲಿ ಬ್ಯಾಂಕ್‌ ಮುಚ್ಚಿರುತ್ತದೆ.
ಅಕ್ಟೋಬರ್ ನಲ್ಲಿ ಬ್ಯಾಂಕ್ ರಜೆ ಬಗ್ಗೆ ಮಾತನಾಡಿದರೆ, ಭಾನುವಾರ, ಎರಡನೇ ಶನಿವಾರ ಮತ್ತು ಸ್ಥಳೀಯ ರಜಾ ದಿನಗಳು ಸೇರಿದಂತೆ ಸುಮಾರು 15 ದಿನಗಳ ಕಾಲ ಬ್ಯಾಂಕ್ ಮುಚ್ಚಲಾಗುತ್ತದೆ. ನೀವು ಈ ತಿಂಗಳು ಬ್ಯಾಂಕಿಗೆ ಸಂಬಂಧಿಸಿದ ಕೆಲಸವನ್ನು ನಿಭಾಯಿಸಬೇಕಿದ್ದರೆ, ರಜೆಗಳ ಪಟ್ಟಿಯನ್ನು ಮುಂಚಿತವಾಗಿ ಯೇ ಪರಿಶೀಲಿಸಿ, ಇದರಿಂದ ನಿಮಗೆ ಯಾವುದೇ ತೊಂದರೆ ಇರೋದಿಲ್ಲ.
ಹಾಗಾದ್ರೇ ಯಾವೆಲ್ಲ ದಿನ ರಜೆ ಇರಲಿದೆ ಅನ್ನೊಂದನ್ನು ನೋಡುವುದಾದ್ರೆ ಆ ಬಗೆಗಿನ ಮಾಹಿತಿ ಕೆಳಕಂಡತಿದೆ.
02 ಅಕ್ಟೋಬರ್ ಶುಕ್ರವಾರ ಮಹಾತ್ಮ ಗಾಂಧಿ ಜಯಂತಿ (ಗೆಜೆಟೆಡ್ ರಜೆ)
4 ಅಕ್ಟೋಬರ್ ಭಾನುವಾರ ಸಾಪ್ತಾಹಿಕ ಆಫ್
ವಾರದ ಆಫ್
08 ಅಕ್ಟೋಬರ್ ಗುರುವಾರ ಚೆಹಲುಮ್ ಸ್ಥಳೀಯ ರಜಾ
10 ಅಕ್ಟೋಬರ್ ಶನಿವಾರ ಎರಡನೇ ಶನಿವಾರ ರಜಾ
11 ಅಕ್ಟೋಬರ್ ಭಾನುವಾರ ವಾರದ ರಜೆ
17 ಅಕ್ಟೋಬರ್ ಶನಿವಾರ ಕಟಿ ಬಿಹು / ಮೇರಾ ಚೌರಾನ್ ಹೋಬಾ ಆಫ್ ಲ್ಯಾನಿಂಗ್ತೌ ಸನಾಮಾಹಿ ಸ್ಥಳೀಯ ರಜಾ
18 ಅಕ್ಟೋಬರ್ ಭಾನುವಾರ ವಾರದ ರಜೆ
23 ಅಕ್ಟೋಬರ್ ಶುಕ್ರವಾರ ದುರ್ಗಾ ಪೂಜೆ / ಮಹಾಸಪ್ತಮಿ ಸ್ಥಳೀಯ ರಜೆ
24 ಅಕ್ಟೋಬರ್ ಶನಿವಾರ ಮಹಾಷ್ಠಮಿ / ಮಹಾನವಮಿ ಸ್ಥಳೀಯ ರಜಾ
25 ಅಕ್ಟೋಬರ್ ಭಾನುವಾರ ವಾರದ ರಜೆ
26 ಅಕ್ಟೋಬರ್ ಸೋಮವಾರ ದುರ್ಗಾ ಪೂಜೆ (ವಿಜಯದಶಮಿ) / ಸೇರ್ಪಡೆ ದಿನ ಗೆಜೆಟೆಡ್ ರಜೆ
29 ಅಕ್ಟೋಬರ್ ಗುರುವಾರ ಮಿಲಾದ್-ಎ-ಶೇರಿಫ್ (ಪ್ರವಾದಿ ಮೊಹಮ್ಮದ್ ಜಯಂತಿ) ಸ್ಥಳೀಯ ರಜಾ
30 ಅಕ್ಟೋಬರ್ ಶುಕ್ರವಾರ ಬಾರಾವಫತ್ (ಈದ್-ಇ-ಮಿಲಾದ್) ಗೆಜೆಟೆಡ್ ರಜೆ
31 ಅಕ್ಟೋಬರ್ ಶನಿವಾರ ಮಹರ್ಷಿ ವಾಲ್ಮೀಕಿ ಮತ್ತು ಸರ್ದಾರ್ ಪಟೇಲ್ ಜಯಂತಿ // ಕುಮಾರ್ ಪೂರ್ಣಿಮಾ ಸ್ಥಳೀಯ ರಜಾ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap