80.35ಲಕ್ಷ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿ ಪೂಜೆೆ

ಸಿರಿನಾಡ ಸುದ್ದಿ ಕಂಪ್ಲಿ: ತಾಲೂಕಿನ ಕೆಲ ಗ್ರಾಮಗಳಲ್ಲಿ ಶಾಸಕ ಜೆ.ಎನ್.ಗಣೇಶ್ 80.35ಲಕ್ಷ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿ ಪೂಜೆÉ ನೆರವೇರಿಸಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿದರು.
ಈ ವೇಳೆ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಈ ಕ್ಷೇತ್ರದ ಜನರ ಸಮಸ್ಯೆ ಅರಿಯಲು ಕ್ಷೇತ್ರದಲ್ಲಿಯೇ ಮನೆ ಮಾಡಿರುವೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಎಲ್ಲ ಗ್ರಾಮೀಣ ಪ್ರದೇಶಗಳಲ್ಲ್ಲಿ ಹಂತ, ಹಂತವಾಗಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು. ತಾಲೂಕಿನ ದೇವಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣನಗರ ಕ್ಯಾಂಪ್‌ನಲ್ಲಿ 2019-20ನೇ ಸಾಲಿನ ಜಿಲ್ಲಾ ಖನಿಜ ನಿಧಿಯಡಿ 40ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಿಸುವುದು.
ಈ ಕ್ಯಾಂಪಿನಲ್ಲಿ 2019-20ನೇ ಸಾಲಿನ ಎನ್‌ಆರ್‌ಡಿಡಬ್ಲೂö್ಯಪಿ ಯೋಜನಡಿ, 18.35ಲಕ್ಷ ರೂ ವೆಚ್ಚದಲ್ಲಿ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣಕ್ಕೆ ಹಾಗೂ ಇದಕ್ಕೂ ಮುಂಚೆ ಶ್ರೀರಾಮರಂಗಾಪುರದಲ್ಲಿ ಪ್ರಸಕ್ತ ಸಾಲಿನ ಪಿಡಬ್ಲೂö್ಯಡಿ ಯೋಜನಡಿ 22ಲಕ್ಷ ರೂನಲ್ಲಿ ಎರಡು ಹೆಚ್ಚುವರಿ ಶಾಲೆ ಕೊಠಡಿ ನಿರ್ಮಿಸಲು ಭೂಮಿ ಪೂಜೆ ನೆರವೇರಸಿ, ಕಾಮಗಾರಿಗೆ ಚಾಲನೆ ನೀಡಿದರು. ಜಿ.ಪಂ.ಸದಸ್ಯ ಕೆ.ಶ್ರೀನಿವಾಸರಾವ್, ತಾ.ಪಂ.ಸದಸ್ಯರಾದ ಕೆ.ಉಮಾದೇವಿ, ಕೆ.ಶÀಣ್ಮುಕಪ್ಪ, ಎಚ್.ಈರಣ್ಣ, ಸುಗ್ಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಸಿ.ವಿರುಪಣ್ಣ, ಸದಸ್ಯೆ ಪಾರ್ವತ್ತಮ್ಮ, ನಾಗಭೂಷಣ, ದೇವಸಮುದ್ರ ಪಿಡಿಒ ಸಾವಿತ್ರಿ ಕೆ.ಗೌರೋಜಿ, ಮುಖಂಡರಾದ ಎಂ.ರಾಘವೇAದ್ರ, ಮಾರುತಿ, ಶ್ರೀನಾಥ, ವೆಂಕಟನಾಯ್ಡು, ಬಿ.ನಾರಾಯಣ, ವೆಂಕಟಪತಿ, ಪಾಪಾನಾಯ್ಡು, ಎಚ್.ಗುಂಡಪ್ಪ, ಶಿವರಾಂಕೃಷ್ಣ, ಶ್ರೀನಿವಾಸರಾವ್, ಎ.ಜಗದೀಶ್ವರರಾವ್, ಕೆ.ನರಸಿಂಹರಾವ್ ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap