50 ಹಾಸಿಗೆಗಳ ಅಕ್ಸಿಜನ್ ಬೆಡ್ ಲೋಕಾರ್ಪಣೆ, ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಶಾಸಕರ ಸಲಹೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ಆಸ್ಪತ್ರೆಯಲ್ಲಿನ ವಾತಾವರಣ ಪರಿಶುದ್ಧವಾಗಿದ್ದಷ್ಠು ರೋಗಿಗಳು ಬೇಗನೆ ಗುಣಮುಖರಾಗಲು ಸಹಕಾರಿ, ಕಾರಣ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ರೋಗಿಗಳ ಆರೋಗ್ಯವನ್ನು ಕಾಪಾಡಿ ಎಂದು ಶಾಸಕ ಎಂ.ಎಸ್.ಸೋಮಲಿAಗಪ್ಪ ಸಲಹೆ ನೀಡದರು.
ನಗರದ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗಳ ಆರೈಕೆಗಾಗಿ ನೂತನವಾಗಿ ಸಿದ್ದಗೊಂಡಿರುವ 50 ಹಾಸಿಗೆಗಳ ವಿಶೇಷ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕೋವಿಡ್ ರೋಗವನ್ನು ಪ್ರಾರಂಭದಲ್ಲಿಯೇ ಎಚ್ಚೆತ್ತುಕೊಳ್ಳುವ ಮೂಲಕ ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗದ ಯಾವುದೇ ಭಯವಿಲ್ಲ,
ಈ ಕಾಯಿಲೆಯಿಂದ ಉಂಟಾಗುವ ಉಸಿರಾಟದ ತೊಂದರೆಯಿAದ ಉಂಟಾಗುವ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಹೊಸಪೇಟೆ ನಂತರ ಸಿರುಗುಪ್ಪದಲ್ಲಿಯೇ ಅಕ್ಸಿಜನ್ ಕೇಂದ್ರ ಪ್ರಾರಂಭವಾಗಿದ್ದು, ರೋಗದಿಂದ ಭಯಭೀತರಾಗಿ ಆಗಮಿಸುವ ಸಾರ್ವಜನಿಕರನ್ನು ಆಸ್ಪತ್ರೆಯಲ್ಲಿನ ವೈದ್ಯರು ಸಮರ್ಪಕ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡುವ ಮೂಲಕ ವೈದ್ಯೋ ನಾರಾಯಣ ಹರಿ ಎನ್ನುವ ಭಾವನೆಗೆ ನಿಜವಾದ ಆರ್ಥ ಬರುವಂತೆ ಕರ್ತವ್ಯ ನಿರ್ವಹಿಸಿ ಎಂದರು.
ಇದೇ ವೇಳೆ ಸ್ಥಳದಲ್ಲಿಯೇ ಇದ್ದ ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ ಹಾಗೂ ಆಸ್ಪತ್ರೆ ವೈದ್ಯಾಧಿಕಾರಿ ಡಾ.ದೇವರಾಜರಿಗೆ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರ ವರದಿ ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಇದೇ ವೇಳೆ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಯರೋಗ ಪರೀಕ್ಷೆ ಮಾಡುವ ಡಿಜಿಟಲ್ ಯಂತ್ರವನ್ನು ಸಹ ಶಾಸಕರು ಉದ್ಘಾಟಿಸಿದರು.
ಈ ವೇಳೆ ತಾಲೂಕ ವೈದ್ಯಾಧಿಕಾರಿ ಶಶಿಕುಮಾರ್, ತಾಲೂಕ ಬಿಜೆಪಿ ಅಧ್ಯಕ್ಷ ಆರ್.ಸಿ.ಪಂಪನಗೌಡ, ವೈದ್ಯರಾದ ಡಾ.ಪ್ರಶಾಂತ್‌ಕುಮಾರ್, ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಮಧುಸೂಧನ್‌ಕಾರಿಗನೂರು, ಡಾ.ಮೋಹನ್‌ಕುಮಾರಿ, ಡಾ.ಪವನ್‌ವರ್ಮ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ನಾನಾ ಮುಖಂಡರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap