40ನೇ ರೈತ ಹುತಾತ್ಮ ದಿನಾಚರಣೆ

ಸಿರಿನಾಡ ಸುದ್ದಿ, ಸಿರುಗುಪ್ಪ: 1940ರಲ್ಲಿ ನರಗುಂದ ನವಲಗುಂದಲ್ಲಿ ನೀರಿಗಾಗಿ ರೈತರು ಹೋರಾಟ ಮಾಡಿದ್ದು, ಇಂದಿಗೂ ಹೋರಾಟಗಾರರಿಗೆ ಸ್ಪೂರ್ತಿಯಾಗಿದೆ. ಆದರೆ ಈ ಭಾಗದ ರೈತರ ಬಹುದಿನದ ಕನಸಾದ ಕಳಸಾ ಬಂಡೂರಿ ಯೋಜನೆಯನ್ನು ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಅಲ್ಲಿನ ರೈತರ ಹೋರಾಟ ಇನ್ನೂ ಮುಂದುವರೆದಿದೆ, ಜತೆಗೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡುವಂತೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ: ನಂಜು0ಡಸ್ವಾಮಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ತಿಳಿಸಿದರು.
ತಾಲೂಕಿನ ಸಿರಿಗೇರಿ ಕ್ರಾಸ್‌ನಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ: ನಂಜುAಡಸ್ವಾಮಿ ಬಣ)ಯ ಬಳ್ಳಾರಿ ಜಿಲ್ಲಾ ಘಟಕದಿಂದ ಮಂಗಳವರ ಹಮ್ಮಿಕೊಂಡಿದ್ದ 40ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಮೇಲೆ ಮರಣ ಶಾಸನ ಬರೆಯುತ್ತಿದ್ದು, ಭೂಸ್ವಾಧೀನ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ, ಎ.ಪಿ.ಎಂ.ಸಿ. ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದ್ದು, ಈ ಮೂರು ಶಾಸನಗಳು ರೈತರ ಪಾಲಿಗೆ ಮರಣ ಶಾಸನಗಳಾಗಲಿವೆ. ಆದರೆ ಈ ಬಗ್ಗೆ ರೈತರೊಂದಿಗೆ ಚರ್ಚಿಸದೆ ಈ ಕಾಯ್ದೆಗಳ ಸಾಧಕ ಬಾದಕಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ರೈತರಿಗೆ ನೀಡದೆ ಏಕಪಕ್ಷಿಯವಾಗಿ ಜಾರಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ರೈತರ ಪಾಲಿಗೆ ಈ ಶಾಸನಗಳು ಕಂಠಕಗಳಾಗಿ ಪರಿಣಮಿಸಲಿವೆ. ಆದ್ದರಿಂದ ಈ ಶಾಸನಗಳ ವಿರುದ್ಧ ರೈತರು ದೊಡ್ಡಮಟ್ಟದ ಹೋರಾಟ ನಡೆಸಬೇಕಾಗಿದೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದರು. ಆಗ ರೈತ ಸಂಘಟನೆಗಳು ಮೀಟರ್ ಸುಡುವ ಮೂಲಕ ದೊಡ್ಡಮಟ್ಟದ ಚಳುವಳಿ ಮಾಡಿದ್ದರಿಂದ ಸರಕಾರ ವಿದ್ಯುತ್ ಖಾಸಗಿಕರಣ ಕಾಯ್ದೆಯನ್ನು ಕೈಬಿಟ್ಟಿತ್ತು. ಆದ್ದರಿಂದ ರೈತರು ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು.
ದೇಶದಲ್ಲಿ ಶೇಕಡ 70ರಷ್ಟು ರೈತರಿದ್ದಾರೆ. ಅದರೆ ಶೇ.2ರಷ್ಟಿರುವ ರಾಜಕೀಯ ಮುಖಂಡರು ನಮ್ಮನು ಆಳುತ್ತಾರೆ, ಅವರಿಗೆ ರೈತರ ಕಷ್ಟಸುಖಗಳ ಬಗ್ಗೆ ಯಾವುದೇ ಅರಿವಿಲ್ಲ, ಅವರಿಗೆ ರೈತರ ಸಂಕಷ್ಟಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ರೈತ ಮುಖಂಡ ಪ್ರೊ.ನಂಜುAಡಸ್ವಾಮಿ ಮಾಡಿದ್ದರು. ನಂಜುAಡಸ್ವಾಮಿಯAತಹ ರೈತ ನಾಯಕರು ಇಂದು ಅಗತ್ಯವಾಗಿ ಬೇಕಾಗಿದ್ದಾರೆ. ರೈತರು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಡಾ.ನಾಗರಾಜ, ಕರೆಪ್ಪ ಗುಡಿಮನಿ, ಗಂಗೀರೆಡ್ಡಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ತಿಮ್ಮನಗೌಡ, ತಾ.ಅಧ್ಯಕ್ಷರಾದ ವಾ.ಹುಲುಗಯ್ಯ, ಗೋವಿಂದಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap