ಹೆಚ್ಚಿದ ಭ್ರಷ್ಟಾಚಾರ- ಸಿಂಧನೂರು ನಗರಸಭೆ ಕಚೇರಿಗೆ ಎಸಿಬಿ ದಾಳಿ

ಸಿರಿನಾಡ ಸುದ್ದಿ, ಸಿಂಧನೂರು: ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಇರುವ ಸಿಂಧನೂರು ನಗರಸಭೆ ಕಚೇರಿ ಮೇಲೆ ಮಂಗಳವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಎಸ್ಪಿ ಸಂತೋಷ ಬನಹಟ್ಟಿ, ಪಿಐ ಬಾಳನಗೌಡ ಎಸ್ ಎಮ್, ಹನುಮಂತ ಸಣ್ಣಮನಿ ಸೇರಿ 8 ಜನ ಇನ್ಸ್‌ಪೆಕ್ಟರ್, 40 ಜನ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪಾರಂ ನಂ.3, ಮುಟೇಷನ್ ಸೇರಿದಂತೆ ಅನುದಾನ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ತಪಾಸಣೆ ಮಾಡಲಾಗುತ್ತಿದೆ. ಪ್ರಕರಣ ಕುರಿತಂತೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ ವಿರುದ್ದ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap