ಹಬ್ಬದ ನೆಪದಲ್ಲಿ ಇಸ್ಪಿಟ್ ಆಡಿದರೆ ಕಠಿಣ ಕಾನೂನು ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ದೀಪಾವಳಿ ಹಬ್ಬದ ನೆಪದಲ್ಲಿ ಕಾನೂನು ಬಾಹಿರವಾಗಿರುವ ಇಸ್ಪಿಟ್ ಜೂಜಾಟದಲ್ಲಿ ತೊಡಗಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸುವ ಮೂಲಕ ಈ ಬಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಮೂದಾಗಿದೆ.
ದೀಪಾವಳಿ ಎಂದರೆ ಸಾಕು ಮೂರು ದಿನಗಳ ಕಾಲ ಲಕ್ಷಿö್ಮÃ ಪೂಜೆಯ ನೆಪದಲ್ಲಿ ಅಂಗಡಿಗಳ ಮುಂದೆ ಹಾಗೂ ಇತರಡೆ ರಾಜರೋಷವಾಗಿ ಇಸ್ಪಿಟ್ ಆಟ ಜೋರಾಗಿಯೇ ಇರುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆಸಕ್ತಿಯಿಂದ ಯಾವುದೇ ಕಾನೂನು ಭಯವಿಲ್ಲದೆ ನಡೆಯುತ್ತಿದ್ದ ಇಸ್ಪಿಟ್ ಆಟಕ್ಕೆ ಕಡಿವಾಣ ಬಿತ್ತು. ಆದಾಗ್ಯೂ ಸಹ ನಾಲ್ಕು ಗೋಡೆಗಳ ಮಧ್ಯ ಇಸ್ಪೀಟ್ ಆಟಕ್ಕೇ ಏನು ತೊಂದರೆ ಇಲ್ಲದಂತೆ ಕಣ್ಣು ಮುಚ್ಚಾಲೆಯಲ್ಲಿ ನಡೆಯುತ್ತಿತ್ತು.
ಆದರೆ ಇದೀಗಾ ಕರೋನಾ ಹಿನ್ನಲೆಯಲ್ಲಿ ಮತ್ತು ಕಾನೂನು ಬಾಹಿರವಾಗಿ ನಡೆಯುವ ಇಸ್ಪಿಟ್ ಆಟವನ್ನು ಈ ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜೂಜಾಟ ನಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಆಟೋ ಮೂಲಕ ಜಾಗೃತಿ ಹಮ್ಮಿಕೊಂಡಿರುವುದು ವಿಶೇಷ.
ನಗರದ ಪ್ರತಿ ವಾರ್ಡ್ಗಳಲ್ಲಿಯೂ ತೆರಳುವ ವಾಹನ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಅಚರಣೆಯ ನಿಯಮಗಳ ಜತೆಗೆ ತಮ್ಮ ಮನೆಯವರನ್ನು ಇಸ್ಪಿಟ್ ಆಟಕ್ಕೆ ಕಳುಹಿಸಬಾರದು, ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಲ್ಲಿ ಅಂತಹವರನ್ನು ಕಾನೂನು ರೀತಿಯಲ್ಲಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾವುದು ಎನ್ನುವ ಸಂದೇಶ ರವಾನಿಸಿದ್ದಾರೆ.
ತಂಡಗಳ ರಚನೆ: ಸಿರುಗುಪ್ಪ ನಗರ ಸೇರಿದಂತೆ ತಾಲೂಕಿನಲ್ಲಿ ಈಬಾರಿ ಇಸ್ಪಿಟ್ ಆಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಾಲ್ಕು ದಿಕ್ಕುಗಳಿಗೆ ಗಮನ ಹರಿಸಲು ನಾಲ್ಕು ಜನರ ಒಂದು ತಂಡದAತೆ ನಾಲ್ಕು ವಿಶೇಷ ತಂಡಗಳ ರಚನೆ ಮಾಡಿದ್ದು ಇನ್ನೂಳಿದಂತೆ ಅಗತ್ಯ ಸ್ಥಳದಲ್ಲಿ ಸಂಪೂರ್ಣ ನಿಘವಹಿಸಲು ಕ್ರಮ ವಹಿಸಲಾಗಿದೆ.
ಒಟ್ಟಿನಲ್ಲಿ ದೀಪಾವಳಿ ಹಬ್ಬದ ಸಡಗರವನ್ನು ಇಸ್ಪಿಟ್‌ನಿಂದ ಕಳೆಯುತ್ತಿದ್ದ ಕೆಲವರಿಗೆ ಪೊಲೀಸ್ ಇಲಾಖೆಯ ಈ ಕ್ರಮ ಸಂಕಟ ತಂದರೆ, ಕುಟುಂಬದವರಲ್ಲಿ ಈ ಬಾರಿ ಪೊಲೀಸರು ಕೈಗೊಂಡಿರುವ ಕ್ರಮದಿಂದ ಹಣ ಹಾಳು ಮಾಡದೆ ಇರುವಂತಾಗಿದೆ ಎನ್ನುವ ಸಂತಸದ ಮಾತುಗಳು ಕೇಳಿ ಬಂದಿದೆ.
ಕೋಟ್:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅದೇಶದಂತೆ ಈ ಬಾರಿ ದೀಪಾವಳಿ ಹಬ್ಬದಲ್ಲಿ ಇಸ್ಪಿಟ್ ಅಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಹಿಂದೆಯೂ ಜೂಜಾಟದಲ್ಲಿ ಭಾಗವಹಿಸವರ ಮೇಲೆ ಕಾನೂನು ಕ್ರಮ ಕೈಗೊಂಡ ಪ್ರಕರಣಗಳು ಇವೆ. ಕಾರಣ ಸಾರ್ವಜನಿಕರು ಕಾನೂನು ಬಾಹಿರವಾಗಿರುವ ಇಸ್ಪಿಟ್ ಜೂಜಾಟದಲ್ಲಿ ಯಾರೋಬ್ಬರು ಭಾಗವಹಿಸದೆ ತಮ್ಮ ಮನೆಗಳಲ್ಲಿ ಶ್ರದ್ಧ ಭಕ್ತಿಯಿಂದ ಹಬ್ಬವನ್ನು ಕುಟುಂಬದೊAದಿಗೆ ಅಚರಣೆ ಮಾಡುವಂತೆ ಮನವಿ ಮಾಡಿದ್ಧಾರೆ.
ಗಂಗಪ್ಪ.ಎಸ್.ಬುರ್ಲಿ. ಪಿಎಸ್‌ಐ, ಸಿರುಗುಪ್ಪ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap