ಹದಗೆಟ್ಟ ರಸ್ತೆ ದುರಸ್ತಿಗೆ ಒತ್ತಾಯಿಸಿ ಸಂಚಾರ ತಡೆದು ಪ್ರತಿಭಟನೆ.

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿ ಕುಣಿಗಳಲ್ಲಿ ಚರಂಡಿ ನೀರು ನಿಂತು ಗಬ್ಬೂ ದುರ್ವಾಸನೆ ಹೊಡೆಯುತ್ತದೆ ಮತ್ತು ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ತಕ್ಷಣವೇ ಅಧಿಕಾರಿಗಳು ದುರಸ್ಥಿಗೊಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಮಂಗಳವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಖಂಡ ಚಾನಾಳ್ ಆನಂದ ಮಾತನಾಡಿ, ಈಗಾಗಲೇ ಬಾದನಹಟ್ಟಿ ರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿವೆ. ಇದರಿಂದ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಕುಣಿಗಳಲ್ಲಿ ನೀರು ನಿಂತು ಕೊಳೆತು ಗಬ್ಬೂನಾಥ ಬೀರುತ್ತದೆ. ರಸ್ತೆಯಲ್ಲಿ ಹೋಗುವ ವಾಹನ ಚಾಲಕರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ದುಸ್ಥಿತಿ ಎದುರಾಗಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸಾವರರು ಬಿದ್ದಿರುವ ಘಟನೆಗಳು ಜರುಗಿವೆ. ಆಗಾಗಿ ತಕ್ಷಣವೇ ದುರಸ್ಥಿ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ, ಇಲ್ಲಿಯವರಗೆ ಕಂಡು ಕಾಣದಂತೆ ಪುರಸಭೆ ಆಧಿಕಾರಿಗಳು ಮಾತ್ರ ನಿರ್ಲಕ್ಷö್ಯ ವಹಿಸಿರುವುದು ದುರಂತವಾಗಿದೆ. ಪ್ರತಿಭಟನೆ ಸ್ಥಳಕ್ಕೆ ಅಧಿಕಾರಿಗಳು ಬಂದು ಚರಂಡಿ ನೀರು ರಸ್ತೆಗೆ ಹರಿಯದಂತೆ ಹಾಗೂ ರಸ್ತೆ ದುರಸ್ಥಿ ಮಾಡಬೇಕು ಇಲ್ಲದಿದ್ದರೆ ಹೋರಾಟ ನಿರಂತರ ಮಾಡುತ್ತೇವೆ ಎಂದು ಆಕ್ರೋಶ್ ವ್ಯಕ್ತಪಡಿಸಿದರು.
ನಂತರ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಜಿಎಸ್.ಮೃತ್ಯುಂಜಯ್ಯ ಹಾಗೂ ಬಳಿಗೇರಿ ಶೀನಪ್ಪ ಮಾತನಾಡಿ, ಪಟ್ಟಣ ಅಭಿವೃದ್ಧಿಯ ವಿಚಾರದಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ನಿರ್ಲಕ್ಷö್ಯ ವಹಿಸಿದ್ದು, ೨೨ನೇ ವಾರ್ಡಿನ ಓಣಿಗಳಲ್ಲಿ ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಹಾಗೂ ಜಂಗಲ್ ಕಟ್ಟಿಂಗ್ ನಡೆಯದೆ ಓಣಿಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮತ್ತು ಬಾದನಹಟ್ಟಿ ರಸ್ತೆಯಲ್ಲಿ ಹೋಗಿರುವ ನೀರಿನ ಪೈಪುಗಳು ತುಂಬಾ ಹಳೆದಾಗಿರುವದರಿಂದ ಪೈಪ್ ಲೀಕ್ ಆಗಿ ನೀರು ರಸ್ತೆಯಲ್ಲಿ ಹರಿಯುತ್ತವೆ. ಇದರಿಂದ ವೈರಲ್ ಫೀವರ್ ಬರುವ ಸಾಧ್ಯತೆಗಳಿವೆ. ಪುರಸಭೆಗೆ ಈ ಕುರಿತು ಆನೇಕ ಬಾರಿ ಮನವಿ ನೀಡಿದ್ದೇವೆ ಆದರೂ ಪ್ರಯೋಜವಾಗಿಲ್ಲ.
ಈ ರಸ್ತೆಯಲ್ಲಿ ಬಾದನಹಟ್ಟಿ, ರ‍್ರಿಂಗಳಿಗೆ, ಸಿದ್ದಮ್ಮನಹಳ್ಳಿ, ಕುಡಿತಿನಿ, ಬಳ್ಳಾರಿಗೆ ಹೋಗುವ ಆನೇಕ ವಾಹನಗಳು ಸಂಚಾರಿಸುತ್ತವೆ. ಚರಂಡಿ ನೀರು ಹರಿದು ಗಬ್ಬೂನಾಥ ಹೊಡೆಯುತ್ತದೆ ಹಾಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸಾವರರಿಗೆ ಕಿರಿಕಿರಿಯಾಗುತ್ತದೆ. ಇಲ್ಲಿನ ನಿವಾಸಿಗಳಿಗೆ ರೋಗದ ಭಯ ಕಾಡುತ್ತಿದೆ. ಆದ್ದರಿಂದ ತಕ್ಷಣವೇ ಪುರಸಭೆ ಆಡಳಿತ ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಹೆಚ್.ಫಿರೋಜ್ ಖಾನ್ ಮಾತನಾಡಿ, ಈ ರಸ್ತೆಯಲ್ಲಿ ಹರಿಯುವ ಚರಂಡಿ ನೀರು ಹರಿಯದಂತೆ ಈಗಾಲೇ ದುರಸ್ಥಿ ಕಾರ್ಯ ಕೈಗೊಳ್ಳುತ್ತೇವೆ ಹಾಗೂ ರಸ್ತೆಯ ದುರಸ್ಥಿ ಕಾರ್ಯ ಇನ್ನೂ ಎರಡು ಮೂರು ದಿನದಲ್ಲಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕರರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ವಿಎಸ್.ಚಕ್ರವರ್ತಿ, ಜಿ.ಮಲ್ಲಿಕಾರ್ಜುನ್, ಶೀನಿವಾಸ್, ತಿಪ್ಪೇಸ್ವಾಮಿ, ಈಶ್ವರಗೌಡ, ಎಲೆಕ್ಟಿçಕಲ್ ರ‍್ರಿಸ್ವಾಮಿ, ಶಾಮಿಯಾನ್ ಮಲ್ಲಿಕಾರ್ಜುನ್, ಶೇಖರಯ್ಯಸ್ವಾಮಿ, ಹನುಮೇಶ್, ಮಹೇಶ್, ವಡ್ಡರ ನಾಗರಾಜ್, ಅಂಗಡಿ ಶಿವಪ್ಪ, ಚಾನಾಳ್ ಅಂಬರೇಶ್, ಜಗದೀಶ್ ಹಾಗೂ ಇತರ ನೂರಾರು ಜನ ಸಾರ್ವಜನಿಕರು ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap