*ಹಂಪಿ ಉತ್ಸವ: ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ವಿತರಣೆ* *ಬೇಡಿಕೆ ಆಧರಿಸಿ ‌ಪ್ರವಾಸಿಟ್ಯಾಕ್ಸಿಗಳ ವಿತರಣೆ: ಸಚಿವ ಸಿ.ಟಿ.ರವಿ

ಬಳ್ಳಾರಿ:ಮುಂದಿನ ದಿನಗಳಲ್ಲಿ ಬೇಡಿಕೆ ಆಧರಿಸಿ ಪ್ರವಾಸಿ ಟ್ಯಾಕ್ಸಿಗಳ ವಿತರಣೆಗೆ ಹಾಗೂ ಪ್ರವಾಸೋದ್ಯಮ ಪರಿಕರಗಳಿಗೆ ಸಬ್ಸಿಡಿ ವಿತರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ‌ ಸಿ.ಟಿ.ರವಿ‌ ಹೇಳಿದರು.
ಹಂಪಿ ಉತ್ಸವ ನಿಮಿತ್ತ ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ಸಬ್ಸಿಡಿ ಪ್ರವಾಸಿ ಟ್ಯಾಕ್ಸಿ ವಿತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 15 ಸಾವಿರಕ್ಕೂ‌ಹೆಚ್ಚು ಜನರಿಗೆ ಸ್ವಾವಲಂಬಿಯಾಗಿಸುವ‌ ನಿಟ್ಟಿನಲ್ಲಿ ಪ್ರವಾಸಿ ಟ್ಯಾಕ್ಸಿ ಯೋಜನೆ ನೆರವಾಗಿದೆ. 800ಜನರು ಇದೇ ಜಿಲ್ಲೆಯಲ್ಲಿ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಬೇಡಿಕೆ ಆದರಿಸಿ ಪ್ರವಾಸಿ ಟ್ಯಾಕ್ಸಿ ವಿತರಿಸಲು ಕ್ರಮಕೈಗೊಳ್ಳುವುದರ ಜತೆಗೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪರಿಕರಗಳಿಗೂ ಸಬ್ಸಿಡಿ ವಿತರಿಸಲು ಉದ್ದೇಶಿಸಲಾಗಿದೆ. ಈ ವರ್ಷ ಜಾರಿಗೆ ತರಲಾಗುವುದು ಎಂದರು.
ಜಲಕ್ರೀಡೆಗೆ ಸಂಬಂಧಿಸಿದ ಸಾಮಗ್ರಿಗಳು,ರಾಕ್ ಕ್ಲೈಂಬಿಂಗ್, ಪ್ಯಾರಾಗ್ಲೈಡಿಂಗ್, ಮೊಬೈಲ್ ‌ಕ್ಯಾಂಟಿನ್ ಸಬ್ಸಿಡಿ,‌ಮೊಬೈಲ್ ಶೌಚಾಲಯ ಪೇ ಆ್ಯಂಡ್ ಯ್ಯೂಸ್ ಸೇರಿದಂತೆ ‌ವಿವಿಧ ಪರಿಕರಗಳಿಗೆ ಸಬ್ಸಿಡಿ ವಿತರಿಸಲಾಗುವುದು ಎಂದರು.
ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತ ನಿರುದ್ಯೋಗ ‌ಯುವಜನರು ಇದರ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಿ ಎಂದರು.
ಎಲ್ಲ ಸಾಮ್ರಾಜ್ಯಗಳನ್ನು ಮೀರಿಸಿದ ಸಾಮ್ರಾಜ್ಯ ನಮ್ಮದು ಎಂಬ‌ ಹೆಮ್ಮೆ ವಿಜಯನಗರ ಸಾಮ್ರಾಜ್ಯಕ್ಕಿದ್ದು, ಇದರ ವೈಭವ ತಿಳಿಸಿಕೊಡುವ ಉದ್ದೇಶದಿಂದ ಹಂಪಿ ಉತ್ಸವ ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು 50ಕ್ಕೂ ಹೆಚ್ಚು ಜನರಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್ ಲಮಾಣಿ ಮತ್ತಿತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap