ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ

ಇನ್ಮುಂದೆ ಪ್ರತಿಹುಣ್ಣಿಮೆಗೆ ತುಂಗಾಭದ್ರಾ ಆರತಿ ಮಹೋತ್ಸವ: ಸಚಿವ ಆನಂದಸಿಂಗ್
ಹಂಪಿ: ಪ್ರತಿ ಹುಣ್ಣಿಮೆಗೆ ತುಂಗಾಭದ್ರಾ ಆರತಿ ಮಹೋತ್ಸವವನ್ನು ಆಚರಿಸಲಾಗುವುದು.ಈ ಮೂಲಕ ಹಂಪಿಗೆ ಬರುವ ಪ್ರವಾಸಿಗರಿಗೆ,ಸುತ್ತಮುತ್ತಲಿನ ಜನರಿಗೆ ತಾಯಿ ಭುವನೇಶ್ವರಿ ದೇವಿಯ ಆಶೀರ್ವಾದ ಪಡೆಯುವಂತಾಗಲಿ ಎಂದು ಅರಣ್ಯ, ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ‌ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ಹಂಪಿ ಉತ್ಸವದ ‌ನಿಮಿತ್ತ ವಿರೂಪಾಕ್ಷೇಶ್ವರ ದೇವಸ್ಥಾನದ ದಡದ ತಟದಲ್ಲಿ ಏರ್ಪಡಿಸಿದ್ದ ತುಂಗಾಭದ್ರಾ ಆರತಿ ಮಹೋತ್ಸವ ನಂತರ ಅವರು ಮಾತನಾಡಿದರು.
ಹುಣ್ಣಿಮೆ ದಿನ ತುಂಗಾಭದ್ರಾ ಆರತಿಗೆ‌ ಆಗಮಿಸುವ ಜನರಿಗಾಗಿ ಬೆಳಕಿನ ವ್ಯವಸ್ಥೆ, ಕುಳಿತುಕೊಳ್ಳುವುದಕ್ಕೆ‌ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು ಎಂದರು.
ಎಲ್ಲಿಯವರೆಗೆ ಸೂರ್ಯಚಂದ್ರ ಇರುತ್ತದೆಯೋ ಅಲ್ಲಿಯವರೆಗೆ ಹಂಪಿ ಉತ್ಸವ ನಡೆಯುತ್ತದೆಯೋ ಅಲ್ಲಿಯವರೆಗೆ ತುಂಗಾಭದ್ರಾ ಆರತಿ ಮಹೋತ್ಸವ ನಡೆಯಲಿದೆ ಎಂದರು.
ಸಂಸದ ವೈ.ದೇವೇಂದ್ರಪ್ಪ ಮಾತನಾಡಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಎಸ್ಪಿ ಸೈದುಲು ಅಡಾವತ್,ಜಿಪಂ ಸಿಇಒ ‌ಕೆ.ಆರ್.ನಂದಿನಿ, ಎಸಿ ಶೇಖ್ ತನ್ವೀರ್ ಅಸೀಫ್ ಮತ್ತಿತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap