ಸ್ವಯಂ ಪ್ರೇರಿತ: ನೋಂದಾಣಿ ಕಾರ್ಯಾಲಯ ಸೀಲ್ ಡೌನ್.

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಕಾರ್ಯನಿರ್ವಹಿಸುವ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯಿಂದ 44 ಗಂಟೆಗಳ ಕಾಲ ಸ್ವಯಂ ಪ್ರೇರಿತದಿಂದ ಸೀಲ್ ಡೌನ್ ಮಾಡಿ ಕಚೇರಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಕಾರಣ: ಬಳ್ಳಾರಿ ನಿವಾಸದ ವ್ಯಕ್ತಿಯೊಬ್ಬ ಕಚೇರಿಗೆ ಕಂಪ್ಯೂಟರ್ ರಿಪೇರಿ ಮಾಡಲು ಬಂದು ಹೋಗಿದ್ದು, ಅ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢವಾಗಿರುವ ಹಿನ್ನಲೇಯಲ್ಲಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸ್ವಯಂ ಪ್ರೇರಿತದಿಂದ 44 ಗಂಟೆಗಳ ಕಾಲ ಸೀಲ್ ಡೌನ್ ಮಾಡಿದ್ದಾರೆ.
ಇನ್ನೂ ಕಚೇರಿಯ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಸ್ಯಾನಿಟೈಜರ್ ಸಿಂಪರಣೆ ಮಾಡಿದ್ದಾರೆ. ಕಚೇರಿ ಸೀಲ್ ಡೌನ್ ಮಾಡಿರುವ ಹಿನ್ನಲೇ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೆ ಕಚೇರಿಯ ಹೊರಗಡೆ ಇದ್ದು, ಮರಳಿದ್ದಾರೆ.
ಪಟ್ಟಣದ 7ನೇ ವಾರ್ಡಿನಲ್ಲಿ ಕೊರೊನಾ ಮೊದಲ ಪ್ರಕರಣ ಪತ್ತೆಯಾದ ಹಿನ್ನಲೇ ಕಚೇರಿ ಸೀಲ್ ಡೌನ್ ಅಗಿದ್ದು, ಪಟ್ಟಣದ ಸಾರ್ವಜನಿಕರಲ್ಲಿ ಆತಂಕದ ಮನೆ ಮಾಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap