ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸಾಲಮನ್ನಾಕ್ಕೆ ಆಗ್ರಹ. ಸಾಲವಸೂಲಿ ಕಿರುಕುಳ ತಪ್ಪಿಸಿ : ಸರ್ದಾರ್ ಹುಲಿಗೆಮ್ಮ ಒತ್ತಾಯ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ಸ್ತ್ರೀಶಕ್ತಿ ಸ್ವಸಹಾಯ ಸಂಘ ,ಮಹಿಳಾ ಗುಂಪುಗಳು ರಾಷ್ಟಿçಕೃತ, ಸಹಕಾರಿ ಬ್ಯಾಂಕ್ ಮತ್ತು ವಿವಿಧ ಫೈನಾನ್ಸ್ ಕಂಪನಿಗಳಿ0ದ ಪಡೆದ ಕಿರುಸಾಲವನ್ನು ಬಡ್ಡಿಸಹಿತ ಮನ್ನಾ ಮಾಡುವಂತೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ತಾಲೂಕು ಪದಾಧಿಕಾರಿಗಳು ತಹಸೀಲ್ ಕಛೇರಿ ಎದುರು ಧರಣಿ ಸೋಮವಾರ ನಡೆಸಿದರು.
ಸಂಘಟನೆ ಖಜಾಂಚಿ ಸರ್ದಾರ್ ಹುಲಿಗೆಮ್ಮ ಮಾತನಾಡಿ, ಕೊರೊನಾದಿಂದಾಗಿ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯ ಮೂಲ ಉದ್ದೇಶಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಇಂತಹ ದುಸ್ಥಿತಿಯಲ್ಲಿ ಬ್ಯಾಂಕ್‌ಗಳು, ಸಹಕಾರ ಸಂಘಗಳು ಮತ್ತು ಮೈಕ್ರೋಫೈನಾನ್ಸ್ ಕಂಪನಿಗಳು ಸಾಲವಸೂಲಿಯ ಕಿರುಕುಳ ನೀಡುತ್ತಿರುವುದು ದುರಂತದ ಸಂಗತಿಯಾಗಿದೆ. ಕೂಡಲೆ ಮಹಿಳಾ ಸಂಘಗಳು ಪಡೆದ ಸಾಲವನ್ನು ಬಡ್ಡಿರಹಿತ ಮನ್ನಾ ಮಾಡುವಂತೆ ಸರಕಾರ ಆದೇಶ ಹೊರಡಿಸಬೇಕು. ಪ್ರಮುಖವಾಗಿ ಸಾಲವಸೂಲಿ ಹಿಂಸೆ ನೀಡುತ್ತಿರುವ ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೊರೊನಾ ಪೀಡತರಿಗೆ ಸರಕಾರವೇ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ತಾಲೂಕು ಕಾರ್ಯದರ್ಶಿ ಜಿ.ಸರೋಜಮ್ಮ ಮಾತನಾಡಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಬೇಕು. ಕಚ್ಚಾ ಸಾಮಾಗ್ರಿಗಳನ್ನು ಪೂರೈಸುವ ಜತೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಶೂನ್ಯ ಬಡ್ಡಿಧರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಅಗತ್ಯವಾದರೆ ಖಾಸಗಿ ಆಸ್ಪತ್ರೆಗಳನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷೆ ಜಿ.ರತ್ನಮ್ಮ ಪುರಸಭೆ ಮುಖ್ಯಾಧಿಕಾರಿ ಕೃಷ್ಣನಾಯ್ಕಗೆ ಮನವಿ ಸಲ್ಲಿಸಿದರು. ಬಳಿಕ ತಹಸೀಲ್ ಕಚೇರಿಗೆ ತೆರಳಿ ಉಪತಹಸೀಲ್ದಾರ್ ಶಿವಕುಮಾರಗೌಡಗೆ ಮನವಿ ಸಲ್ಲಿಸಿದರು. ಸಂಘಟನೆಯ ಮುಖಂಡರಾದ ಬಿ.ರೇಣುಕಾ, ಬಿ.ರಾಜೇಶ್ವರಿ, ಟಿ.ಸಾವಿತ್ರಿ, ಸವಿತಾ, ಪೆದ್ದಮ್ಮ , ಜಿ.ಹುಲಿಗೆಮ್ಮ, ಶಾಹಿನ, ನಸ್ರೀನ್ ಮುಂತಾದವರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap