ಸುರಿದ ಭಾರೀ ಮಳೆಗೆ ಕಚ್ಚಾ ಮನೆಗಳು ಜಖಂ..!

ಸಿರಿನಾಡ ಸುದ್ದಿ, ಸಂಡೂರು: ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ ನೂರಾರು ಕಚ್ಚಾ ಮನೆಗಳು ಜಖಂಗೊAಡಿದ್ದು, ಕೆಲ ಮನೆಗಳು ಭಾಗಶಃ ಕುಸಿದು ಬಿದ್ದರೆ ಉಳಿದ ಮನೆಗಳು ಬಹುತೇಕ ಕುಸಿದಿವೆ.
ಸಂಡೂರು ತಾಲೂಕಿನ ನಾನಾ ಗ್ರಾಮಗಳಲ್ಲಿನ ಸುಮಾರು 38 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಂಡೂರು ಹೋಬಳಿಯ ತಾರಾನಗರದಲ್ಲಿ 2, ತೋರಣಗಲ್ಲು ಹೋಬಳಿಯ ವಿಠಲಾಪುರದಲ್ಲಿ 7, ರಾಮಸಾಗರ ಹಾಗೂ ಅಂತಾಪುರದಲ್ಲಿ 3, ರಾಜಾಪುರ, ನಾಗಲಾಪುರ ಹಾಗೂ ಮೆಟ್ರಿಕಿಯಲ್ಲಿ ತಲಾ2, ಬನ್ನಿಹಟ್ಟಿ, ಸುಲ್ತಾನಪುರದಲ್ಲಿ ತಲಾ ಒಂದೊAದು ಹಾಗೂ ಚೋರನೂರು ಹೋಬಳಿಯ ಸಿ.ಕೆ.ಹಳ್ಳಿ ಯಲ್ಲಿ ೪, ಅಂಕಮನಾಳು, ತೊಣಸಿಗೆರೆ ಹಾಗೂ ಕಾಟಿನಕಂಬದಲ್ಲಿ ತಲಾ ೨, ಶ್ರೀರಾಮಶೆಟ್ಟಿಹಳ್ಳಿ, ಹೊಸ ಜೋಗಿಕಲ್ಲು, ಬಿ.ಗೊಲ್ಲರ ಹಟ್ಟಿ ಹಾಗೂ ಬಂಡ್ರಿಯಲ್ಲಿ ತಲಾ ಒಂದು ಮನೆಗಳು ಹಾನಿ ಗೀಡಾಗಿವೆ.
ಸಂಡೂರು, ಚೋರನೂರು ಹಾಗೂ ಕುರೇಕುಪ್ಪ ಮಳೆ ಮಾಪನ ಕೇಂದ್ರಗಳಲ್ಲಿ ಭಾನುವಾರ, ಸೋಮವಾರದಂದು ಕ್ರಮವಾಗಿ 12.6 ಮಿ.ಮೀ,57.3ಮಿ.ಮೀ ಹಾಗೂ 15.3ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಇನ್ನೂ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನ ಹಳ್ಳಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿ, ಸಿರುಗುಪ್ಪ- ಹೊಸ ಪೇಟೆ ತಾಲೂಕಿನಾದ್ಯಂತ ಭಾಗಶಃ ಹಾಗೂ ಬಹುತೇಕ ಬಿದ್ದು ಕಚ್ಚಾ ಮನೆಗಳ ಅಂಕಿ- ಸಂಖ್ಯೆಯೊ0ದೇ ಬಾಕಿಯಿದೆ. ಕಳೆದ ಬಾರಿ ಭಾಗಶಃ ಮತ್ತು ಬಹುತೇಕ ಬಿದ್ದಿರುವ ಮನೆಗಳಿಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡುವಲ್ಲಿ ಕಾರ್ಯ ಪ್ರವೃತ್ತವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap