ಸಿರುಗುಪ್ಪ ತಾಲೂಕಿಗೆ ಕರಾಳ ಸೋಮವಾರ, ಒಂದೇ ದಿನ 15 ಜನರಿಗೆ ಸೋಂಕು ಧೃಡ, ಒಂದು ಬಲಿ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕರೋನಾ ಸೋಂಕಿನ ರಣಕೇಕೆ ಜನರನ್ನು ತಲ್ಲಣಗೊಳಿಸಿದೆ. ಸಂಜೆಯ ವೇಳೆಗೆ 6ಜನರಿಗೆ ಸೊಂಕು ಧೃಡಪಟ್ಟಿದ್ದು ಈ ಪೈಕಿ ಒಬ್ಬರು ಮೃತಪಟ್ಟಿರುವ ವರದಿ ಪ್ರಕಟಗೊಂಡಿತ್ತು. ಆದರೆ ರಾತ್ರಿ ಬಂದ ವರದಿಯಲ್ಲಿ ತಾಲೂಕಿನ ಜನತೆಯನ್ನು ತಲ್ಲಣಗೊಳಿಸುವ ವರದಿ ಪ್ರಕಟಗೊಂಡಿದೆ.
ತಾಲೂಕಿನಲ್ಲಿ ಸೋಮವಾರ ಒಂದೇ ದಿನ ನಗರ ಸೇರಿದಂತೆ 16 ಪ್ರಕರಣಗಳು ಧೃಡಪಟ್ಟಿರುವ ವರದಿ ಜನತೆಯನ್ನು ತಲ್ಲಣಗೊಳಿಸುವಂತೆ ಮಾಡಿದೆ. (ಈ ಮೊದಲು ಒಬ್ಬ ವ್ಯಕ್ತಿ ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಮಾಹಿತಿ ನೀಡಲಾಗಿದೆ.) ಇನ್ನೂಳಿದವರ ಮಾಹಿತಿ.
ಸೋಂಕಿತರ ವಿವರ: ಕೆಂಚನಗುಡ್ಡ ತಾಂಡದ 5 ತಿಂಗಳ ಮಗು.
ಸಿರುಗುಪ್ಪದ 8ನೇ ವಾರ್ಡ್ 4 ವರ್ಷದ ಮಗು
ತಾಲೂಕಿನ ತೊಂಡೆಹಾಳು ಗ್ರಾಮದ ಆಶ್ರಯ ಕಾಲೋನಿಯ 11 ತಿಂಗಳು ಮಗು.
ಸಿರುಗುಪ್ಪದ 22ನೇ ವಾರ್ಡ್ನ 22 ವರ್ಷದ ಮಹಿಳೆ.
ಸಿರುಗುಪ್ಪದ 2ನೇ ವಾರ್ಡ್ನ 40 ವರ್ಷದ ಪುರುಷ
ಸಿರುಗುಪ್ಪದ 12ನೇ ವಾರ್ಡ್ನ 5 ವರ್ಷದ ಮಗು.
ಸಿರುಗುಪ್ಪದ 2ನೇ ವಾರ್ಡ್ನ 4 ವರ್ಷದ ಮಗು.
ತಾಲೂಕಿನ ಇಬ್ರಾಂಪುರ ಗ್ರಾಮದ 51 ವರ್ಷದ ವ್ಯಕ್ತಿ.
ತಾಲೂಕಿನ ಹಚ್ಚೊಳ್ಳಿ ಗ್ರಾಮದ 24 ವರ್ಷದ ಪುರುಷ
ತಾಲೂಕಿನ ಕೆ.ಬೆಳಗಲ್ಲು ಗ್ರಾಮದ ಕ್ವರ‍್ನೆಂಟೈನ್‌ನಲ್ಲಿದ್ದ ವ್ಯಕ್ತಿಯೊರ್ವನಿಗೆ ಸೋಂಕು ಧೃಡ ಪಡುವ ಮೂಲಕ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 38ಕ್ಕೆ ಏರಿದೆ ಈ ಪೈಕಿ ಮೂವರು ಗುಣಮುಖರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
(ಮಧ್ಯಹ್ನಾದ ವರದಿಯಲ್ಲಿ ತೆಕ್ಕಲಕೋಟೆ ಒಂದೇ ಕುಟುಂಬದ ತಂದೆ ಮಗನಿಗೆ ಕರೋನಾ ವಕ್ಕರಿಸಿದರೆ, ಸಿರುಗುಪ್ಪದಲ್ಲಿ ಎರೆಡು, ಹಾಗಲೂರು ಗ್ರಾಮದಲ್ಲಿ ಒಬ್ಬರಿಗೆ ಸೊಂಕು ಧೃಡಪಟ್ಟಿತ್ತು)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap