ಸಿರುಗುಪ್ಪದಲ್ಲಿ 2000ಗಡಿ ದಾಟಿದ ಕರೋನಾ ಸೋಂಕಿತರು, ಮಂಗಳವಾರ ಒಂದೇ ದಿನ 47 ಪ್ರಕರಣಗಳು ಪತ್ತೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕರೋನಾ ತನ್ನ ನಾಗಲೋಟ ಮುಂದುವರೆಸಿದ್ದು ತಾಲೂಕಿನಲ್ಲಿ ಕರೋನಾ ಸೊಂಕಿತರ ಸಂಖ್ಯೆ ಎರೆಡು ಸಾವಿರದ ಗಡಿ ದಾಟುವ ಮೂಲಕ ದಾಖಲೆ ನಿರ್ಮಿಸಿದೆ.
ಮಂಗಳವಾರದ ವರದಿಯಲ್ಲಿ ತಾಲೂಕಿನ ರುದ್ರಪಾದ ಗ್ರಾಮದಲ್ಲಿ ಒಂದೇ ದಿನ ಮೂವರಿಗೆ ಸೋಂಕು ತಗುಲಿದರೆ, ತೆಕ್ಕಲಕೋಟೆ, ಕುರುವಳ್ಳಿ ಗ್ರಾಮದಲ್ಲಿ ತಲಾ ಇಬ್ಬರಿಗೆ ಧೃಡಪಟ್ಟರೆ, ಮುದ್ದಟ್ಟನೂರು, ದಾಸಪುರ, ದೊಡ್ಡರಾಜಕ್ಯಾಂಪ್, ಕರೂರು, ಹಚ್ಚೊಳ್ಳಿ, ಬೊಮ್ಮಲಾಪುರ, ಕೆಂಚನಗುಡ್ಡ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ಧೃಡಪಡುವ ಮೂಲಕ ಗ್ರಾಮೀಣ ಭಾಗದಲ್ಲಿ ಒಟ್ಟು 14 ಪ್ರಕರಣಗಳು ಪತ್ತೆಯಾಗಿವೆ.
ಇನ್ನೂ ನಗರದ 8ನೇ ಮತ್ತು 12ನೇ ವಾರ್ಡ್ನಲ್ಲಿ ತಲಾ 5 ಜನರಿಗೆ ಸೋಂಕು ತಗುಲಿದರೆ, 10, 20, 21ನೇ ವಾರ್ಡ್ಗಳಲ್ಲಿ ತಲಾ 4 ಜನರಿಗೆ ಸೋಂಕು ಧೃಡಪಟ್ಟಿದೆ. 11ನೇ ವಾರ್ಡ್ನಲ್ಲ ಮೂವರಿಗೆ, 14ನೇ ವಾರ್ಡ್ನಲ್ಲಿ ಇಬ್ಬರಿಗೆ ಸೋಂಕು ವಕ್ಕರಿಸಿದರೆ. 9, 24, 22, 19, ಹಾಗೂ 1ನೇ ವಾರ್ಡ್ನಲ್ಲಿ ತಲಾ ಒಬ್ಬರಿಗೆ ಸೋಂಕು ಧೃಡಪಟ್ಟಿದೆ, ಇದರೊಂದಿಗೆ ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2034ಕ್ಕೆ ತಲುಪಿದೆ. ಈ ಪೈಕಿ ಇಲ್ಲಿಯವರೆಗೆ ಒಟ್ಟು 1612 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 402 ಜನರು ತಮ್ಮ ನಿವಾಸದಲ್ಲಿ, ಕೋರೋನಾ ಆರೈಕೆ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಲ್ಲಿಯವರೆಗೆ ತಾಲೂಕಿನಲ್ಲಿ ಒಟ್ಟು 21 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap