ಸಿರುಗುಪ್ಪದಲ್ಲಿ ಸೋಮವಾರ ಒಂದೇ ದಿನ ಮತ್ತೇರೆಡು ಪ್ರಕರಣ ಪತ್ತೆ, ಮತ್ತಷ್ಟು ಆತಂಕದಲ್ಲಿ ನಗರದ ಜನತೆ

ಸಿರಿನಾಡ ಸುದ್ದಿ ಸಿರುಗುಪ್ಪ: ನಗರದ 18ನೇ ವಾರ್ಡ್ನ 65 ವರ್ಷದ ವ್ಯಕ್ತಿಯರ್ವವನಿಗೆ ಹಾಗೂ 8 ನೇ ವಾರ್ಡಿನ 30 ವರ್ಷದ ಮಹಿಳೆಯೊಬ್ಬರಿಗೆ ಸೋಮವಾರ ಸೊಂಕು ಧೃಡಪಟ್ಟಿದೆ.
18ನೇ ವಾರ್ಡ್ನ ಡ್ರೆöÊವರ್ ಕಾಲೋನಿ ನಿವಾಸಿ ಕೆಲ ದಿನಗಳಿಂದ ಸೊಂಕಿನ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ನೇರವಾಗಿ ಬಳ್ಳಾರಿಯ ವಿಮ್ಸ್ಗೆ ತೆರಳಿದ್ದಾನೆ. ಅಲ್ಲಿ ಈ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ಪಡೆದು ನಂತರ ಅತನನ್ನು ಅಲ್ಲಿಯೇ ದಾಖಲಿಸಿಕೊಂಡಿದ್ದಾರೆ. ಸೋಮವಾರ ಆ ವ್ಯಕ್ತಿಗೆ ಸೊಂಕು ಧೃಡಪಟ್ಟ ಹಿನ್ನಲೆಯಲ್ಲಿ, ಅ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಕ್ವರ‍್ನಟೈನ್‌ಗೆ ಕಳುಹಿಸಲಾಗಿದೆ.
8ನೇ ವಾರ್ಡ್ನ ನಿವಾಸಿ ಮಹಿಳೆಯೊಬ್ಬರಿಗೆ ಯಾರೊಂದಿಗೆ ಸಂಪರ್ಕ ಇಲ್ಲದೆ ಇದ್ದಾಗ್ಯೂ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ. ಈ ಮಹಿಳೆಯು ಸೊಂಕಿನ ಸ್ವಲ್ಪ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಪರೀಕ್ಷೆಗೆ ಕಳೆದ ಮೂರು ದಿನಗಳ ಹಿಂದೆ ಗಂಟಲು ದ್ರವ ಪಡೆಯಲಾಗಿತ್ತು. ಇದೀಗಾ ಸೊಂಕು ಧೃಡಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ವ್ಯಕ್ತಿಯೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 9ಕ್ಕ ಏರಿದ್ದು, ತಾಲ್ಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12ಕ್ಕೆ ಏರಿದೆ ಈ ಪೈಕಿ ಮೂವರು ಗುಣಮುಖರಾಗಿ ವಾಪಸ್ ಆಗಮಿಸಿರುವುದು ನೆಮ್ಮದಿಯ ಸಂಗತಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap