ಸಿರುಗುಪ್ಪದಲ್ಲಿ ತ್ರಿಶತಕ ದಾಟಿದ ಸೋಂಕಿತರ ಸಂಖ್ಯೆ. ಶನಿವಾರ ಒಟ್ಟು 22 ಜನರಿಗೆ ಸೋಂಕು ಧೃಡ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ನಿತ್ಯವೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಾಣುವ ಮೂಲಕ ಶನಿವಾರ ನಗರದಲ್ಲಿ 16 ಹಾಗೂ ಗ್ರಾಮೀಣ ಭಾಗದಲ್ಲಿ 6 ಜನರಿಗೆ ಸೋಂಕು ಧೃಡ ಪಡುವ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಫೀವರ್ ಕ್ಲೀನಿಕ್‌ನಲ್ಲಿ ಶನಿವಾರ ಕರೋನಾ ಲಕ್ಷಣಗಳು ಉಳ್ಳ ಶಂಕಿತ 21 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿ ಈ ಪೈಕಿ 13 ಜನರಿಗೆ ಸೋಂಕು ಇರುವುದು ಧೃಡಪಟ್ಟರೆ, ನಗರದಲ್ಲಿ 15 ವರ್ಷದ ಬಾಲಕನೊರ್ವನಿಗೆ ಸೋಂಕು ಧೃಡಪಟ್ಟಿದೆ. ಜತೆಗೆ ನಗರದಲ್ಲಿ ಇಂದು ಜಿಲ್ಲಾಡಳಿತ ಅದೇಶದಂತೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಇಬ್ಬರಿಗೆ ಕರೋನಾ ಸೋಂಕು ಇರುವುದು ಧೃಡಪಟ್ಟಿದೆ. ಇದರೊಂದಿಗೆ ತಾಲೂಕಿನಲ್ಲಿ ಕರೋನಾ ವಾರಿಯರ‍್ಸ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೂ ಸೋಂಕು ತಗಲುವ ಮೂಲಕ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಬಂಡ್ರಾಳ್ ಕ್ಯಾಂಪ್‌ನಲ್ಲಿ ಒಬ್ಬರಿಗೆ ಸೋಂಕು ಧೃಡಪಟ್ಟರೆ, ದರೂರು ಕ್ಯಾಂಪ್‌ನಲ್ಲಿ ಒಬ್ಬರಿಗೆ ಸೋಂಕು ವಕ್ಕರಿಸಿದೆ. ತಾಲೂಕಿನ ಪಟ್ಟಣ ಪಂಚಾಯ್ತಿ ತೆಕ್ಕಲಕೋಟೆಯಲ್ಲಿ ನಾಲ್ಕು ಜನರಿಗೆ ಕರೋನಾ ಸೋಂಕು ಧೃಡಪಡುವ ಮೂಲಕ ನಿತ್ಯವೂ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಇನ್ನೂ ಶುಕ್ರವಾರದ ವರದಿಯಲ್ಲಿ ಸ್ಥಳೀಯ ಪೊಲೀಸ್ ಠಾಣಾ ಪಿಎಸ್‌ಐಗೆ ಕರೋನಾ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ಠಾಣೆಗೆ ಬ್ಯಾರಿಕೇಡ್‌ನಿಂದ ನಿರ್ಬಂಧಿಸಿ ಸಾರ್ವಜನಿಕರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ.
ತಾಲೂಕಿನಲ್ಲಿ ಈ ವರೆಗೆ ಒಟ್ಟು 308 ಸೋಂಕಿತರಾಗಿದ್ದರೆ, ಈ ಪೈಕಿ 163 ಜನರು ಗುಣಮುಖರಾಗಿರುವುದು ಸಂತಸ ಸಂಗತಿಯಾದರೆ, ಇನ್ನೂ 145 ಜನರು ಚಿಕಿತ್ಸೆ ಪಡೆಯುತ್ತಿದ್ದು ತಾಲೂಕಿನಲ್ಲಿ ಒಟ್ಟು 8 ಜನರು ಕರೋನಾಗೆ ಬಲಿಯಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap