ಸಿರುಗುಪ್ಪದಲ್ಲಿ ಕರೋನಾ ರಣಕೇಕೆ ಸೋಂಕಿಗೆ ಇಬ್ಬರು ಬಲಿ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ದಿನದಿಂದಿ ದಿನಕ್ಕೆ ಹೆಚ್ಚುತ್ತಿರುವ ಕರೋನಾ ಸೋಂಕಿಗೆ ನಿತ್ಯವೂ ಕಂಗಾಲಾಗಿದ್ದ ಜನರಿಗೆ ಸೋಮವಾರ ಕರಾಳ ದಿನವಾಗಿ ಪರಿಣಮಿಸಿದೆ. ಒಂದೇ ದಿನ ತಾಲೂಕಿನ ಹಿರೇಹಾಳು ಗ್ರಾಮದ 31 ವರ್ಷ ವ್ಯಕ್ತಿ ಹಾಗೂ ನಗರದ ಹೌಸಿಂಗ್ ಬೋರ್ಡ್ನಲ್ಲಿ 62 ವರ್ಷದ ವ್ಯಕ್ತಿಯೊರ್ವ ಕೋವಿಡ್‌ಗೆ ಬಲಿಯಾಗಿರುವುದು ಜನರನ್ನು ಆತಂಕಕ್ಕೆ ಗುರಿಮಾಡಿದೆ.
ತಾಲೂಕಿನ ಹಿರೇಹಾಳು ಗ್ರಾಮದ 31 ವರ್ಷದ ವ್ಯಕ್ತಿಯೊರ್ವ ಆರೋಗ್ಯದಲ್ಲಿನ ಏರುಪೇರುನಿಂದಾಗಿ ಬಳ್ಳಾರಿಯ ವಿಮ್ಸ್ಗೆ ದಾಖಲಾಗಿದ್ದು, ಆ ವ್ಯಕ್ತಿಗೆ ಗಂಟಲ್ ಪರೀಕ್ಷೆಗೆ ನೀಡಿದ್ದ ಹಿನ್ನಲೆಯಲ್ಲಿ ಭಾನುವಾರ ಸೋಂಕು ಧೃಡಪಟ್ಟಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಮ್ಸ್ನಲ್ಲಿಯೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಬಳ್ಳಾರಿಯಲ್ಲಿಯೇ ಅಂತ್ಯಕ್ರೀಯೆ ಮಾಡಲಾಗಿದೆ.
ನಗರದ 15ನೇ ವಾರ್ಡ್ನ 62 ವರ್ಷದ ನಿವಾಸಿಯೊಬ್ಬರಿಗೆ ಸೋಂಕಿನ ಲಕ್ಷಣಗಳಿಂದಾಗಿ ಕಳೆದ ಮೂರು ದಿನಗಳ ಹಿಂದೆ ಸ್ಥಳೀಯ ಫೀವರ್ ಕ್ಲೀನಿಕ್‌ಗೆ ತೆರಳಿ ಗಂಟಲು ದ್ರವ ಪರೀಕ್ಷೆ ನೀಡಿದ್ದಾರೆ. ಆದರೆ 62 ವರ್ಷದ ವ್ಯಕ್ತಿಯೂ ಸೋಮವಾರ ಬೆಳಿಗ್ಗೆ ಮೃತನಾಗಿದ್ದಾನೆ. ಮಧ್ಯಹ್ನಾ ಬಂದ ವರದಿಯಲ್ಲಿ ಮೃತನಿಗೆ ಸೋಂಕು ಇರುವುದು ಧೃಡಪಟ್ಟಿದೆ. ಮೃತರ ಪ್ರಾಥಮಿಕ ಸಂಪರ್ಕದಲ್ಲಿದ್ದ 19 ಜನರನ್ನು ಕ್ವರ‍್ನೇಂಟೈನ್ ಮಾಡಲಾಗಿದ್ದು, ಸೋಂಕಿತನ ನಿವಾಸದ ಸುತ್ತಲೂ ಸೀಲ್‌ಡೌನ್ ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಾಲೂಕ ಆಡಳಿತ ಸಿಬ್ಬಂದಿಗಳು ಮೃತ ದೇಹವನ್ನು ವಶಕ್ಕೆ ಪಡೆದು ಸರಕಾರ ನಿಯಮದಂತೆ ಶವಸಂಸ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap