ಸಿರುಗುಪ್ಪದಲ್ಲಿ ಅಂತರಾಷ್ಟಿçಯ ಯೋಗ ದಿನಾಚರಣೆ

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ಜೆಸ್ಕಂ ಕಛೇರಿಯ ಆವರಣದಲ್ಲಿ 6ನೇ ಅಂತರಾಷ್ಟಿçಯ ಯೋಗ ದಿನಾಚರಣೆ ಅಂಗವಾಗಿ ಶ್ರೀಕೃಷ್ಣ ಯೋಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಮಾಜಿಕ ಆಂತರದೊ0ದಿಗೆ ಸಾಮೂಹಿಕ ಯೋಗ ದಿನಾಚರಣೆ ಮಾಡಲಾಯಿತು
ಟ್ರಸ್ಟ್ನ ಅಧ್ಯಕ್ಷ ಬಿಕಾರಾಮಜೀ ಮಾತನಾಡಿ, ಪುರುಷರು ಮತ್ತು ಮಹೀಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಯೋಗಾಸನ ಮಾಡುವುದರಿಂದ ಕರೋನಾದಂತಹ ಮಹಾಮಾರಿ ಖಾಯಿಲೆಯನ್ನು ಬರದಂತೆ ಮುಂಜಾಗೃತೆ ವಹಿಸಬಹುದು, ಪ್ರತಿ ದಿನ ಬೆಳಗಿನ ಸಮಯದಲ್ಲಿ ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ದಿನಪೂರ್ತಿಯಾಗಿ ಉತ್ಸಹ ಉಲ್ಲಸದಿಂದ ಇರಬಹುದು, ಪ್ರಣಾಯಮವನ್ನು ನಿರಂತರ ಅಭ್ಯಾಸ ಮಾಡುವುದರಿಂದ ಊಸಿರಾಟದ ತೊಂದರೆ ನಿವಾರಿಸಬಹುದು. ಯೋಗವನ್ನು ಪ್ರತಿನಿತ್ಯ ಮಾಡುವುದರಿಂದ ಮಾನಸಿಕ, ದೈಹಿಕ ಸದೃಡತೆ ಮೂಡುವುದಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಧನಾತ್ಮಕ ಚಿಂತನೆ ಮೂಡುತ್ತದೆ, ಶಾಂತಿ ಸಂಯಮ ದೊರೆಯುತ್ತದೆ, ಎಂದು ತಿಳಿಸಿದರು.
ಉಪಾಧ್ಯಕ್ಷ ಆರ್.ಡಿ.ಉಮೇಶ, ಕಾರ್ಯದರ್ಶಿ ಶ್ರೀದೇವಿ, ಹಿರಿಯ ಮುಖಂಡರಾದ ವೆಂಕಟರಾಮರೆಡ್ಡಿ, ಗೋರವರ ಶ್ರೀನಿವಾಸ, ವೀರೇಶಗೌಡ, ಬಾಲಸುಬ್ಬಯ್ಯ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap