‘ಸಿರಿಗೇರಿ ಪೋಲಿಸ್ ಠಾಣೆ ಪೇದೆ ಈಗ ಸಬ್ ಇನ್ಸಪೆಕ್ಟರ್’ ಗ್ರಾಮೀಣ ಪ್ರತಿಭೆಯ ಉತ್ತಮ ಸಾಧನೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನ ಸಿರಿಗೇರಿ ಗ್ರಾಮದ ಪೋಲಿಸ್ ಠಾಣೆಯಲ್ಲಿ 2011ರಿಂದ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಯುವರಾಜ್ 2020ರ ಸೇವಾವಧಿಯ ಮೇಲ್ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಉತ್ತಮ ಸಾಧನೆಯ ಮೂಲಕ ಸಬ್ ಇನ್ಸಪೆಕ್ಟಟರ್ ಆಗಿ ನೇಮಕಗೊಳ್ಳುವ ಮೂಲಕ ಸಾದನೆ ತೋರಿದ್ದಾರೆ.
2011 ರಲ್ಲಿ ಸಿವಿಲ್ ಪೋಲಿಸ್ ಕಾನ್‌ಸ್ಟೇಬಲ್ ಆಗಿ ಸಿರಿಗೇರಿಯ ಪೋಲಿಸ್‌ಠಾಣೆಗೆ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿರುವ ಇವರು, ಮತ್ತಷ್ಠು ಮೇಲ್ದರ್ಜೆಗೆ ಹೋಗಬೇಕು ಎನ್ನವು ಮಹಾದಾಸೆಯಿಂದ ಈ ಯಶಸ್ಸು ಸಾಧಿಸಲು ಸಾದ್ಯವಾಗಿದೆ.
ತಾಲೂಕಿನ ಗಡಿಗ್ರಾಮ ಪುಟ್ಟ ಹಳ್ಳಿ ಬೈರಗಾಮದಿನ್ನಿ ಎನ್ನುವ ಕುಗ್ರಾಮದ ಕೆ. ಕಟ್ಟೆಪ್ಪ ಮತ್ತು ಅಂಬಮ್ಮ ದಂಪತಿಗಳ ಮಗನಾದ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿ, ರಾವಿಹಾಳ್ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ, ಸಿರುಗುಪ್ಪದ ಪ.ಪೂ .ಕಾಲೇಜಿನಲ್ಲಿ ಪಿಯುಸಿ, ಧಾರವಾಡ ವಿಶ್ವವಿಧ್ಯಾಲಯದ ದೂರಶಿಕ್ಷಣದಲ್ಲಿ ಬಿಎ ಪದವಿ ಹೊಂದಿದ್ದಾರೆ. ಡಿಎಡ್ ಶಿಕ್ಷಣ ಪಡೆದಿರುವ ಯುವರಾಜ್ ಶಿಕ್ಷಕನಾಗಲು ಕಾಯುತ್ತ ಕುಳಿತಿದ್ದ ವೇಳೆ ಕುಟುಂಬ ನಿರ್ವಹಣೆಗಾಗಿ ಕೆಲಸದ ಹುಡುಕಾಟದಲ್ಲಿ ಒಲಿದಿದ್ದು ಪೋಲಿಸ್ ಕಾನ್ಸ್ಟೇಬಲ್ ಹುದ್ದೆ, ಸ್ವತಃ ತಾಲೂಕಿನ ಸಿರಿಗೇರಿ ಪೋಲಿಸ್ ಠಾಣೆಯಲ್ಲಿ 2011 ರಿಂದ ಕೆಲಸ ಪ್ರಾರಂಭಿಸಿ ಮದ್ಯದಲ್ಲಿ 2017 ರಿಂದ 2019 ರವರಗೆ ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಅರಣ್ಯದಲ್ಲಿ ಎಎನ್‌ಎಫ್ ಆಗಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರಿಗಿದೆ.
ಪೋಲಿಸ್ ಸೇವೆಯಲ್ಲಿಯೇ ಇದ್ದುಕೊಂಡು ಉನ್ನತ ಹುದ್ದೆಗೆ ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದ ಇವರಿಗೆ ಸೇವೆಯ ಆಧಾರದಲ್ಲಿ ನಡೆಸಿದಿ ಉನ್ನತ ಹುದ್ದೆಗಳ ಪರೀಕ್ಷೆಗಳಲ್ಲಿ 2020 ರಲ್ಲಿ ರಿಜರ್ವ್ ಪೋಲಿಸ್ ವಿಭಾಗದಲ್ಲಿ ಪಿಎಸ್‌ಐ ಆಗಿ ಆಯ್ಕೆಗೊಂಡಿದ್ದಾರೆ. ಅಲ್ಲದೆ ಈ ಫಲಿತಾಂಶದ 2ತಿಂಗಳ ನಂತರ ಬಂದ ಸಿವಿಲ್ ವಿಭಾಗದಲ್ಲಿಯೂ ಪಿಎಸ್‌ಐ ಹುದ್ದೆ ಇವರಿಗೆ ಒಲಿದುಬಂದಿದೆ. ಈಗ ಸಿವಿಲ್ ಪೋಲಿಸ್ ಸಬ್ ಇನ್ಸಪೆಕ್ಟರ್ ಹುದ್ದೆಯನ್ನೇ ಆರಿಸಿಕೊಂಡಿರುವ ಯುವರಾಜ್ ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವದರೊಂದಿಗೆ ಉನ್ನತ ಶ್ರೇಣಿಯ ಹುದ್ದೆಯ ತುಡಿತದಲ್ಲಿದ್ದಾರೆ.
ಇವರ ಸತತ ಪರಿಶ್ರಮಕ್ಕೆ ಹಾಗು ಪಿಎಸ್‌ಐ ಹುದ್ದೆ ಸಾಧಿಸಲು ತಂದೆ-ತಾಯಿ ಆಶೀರ್ವಾದ ಕಾರಣವೆಂದು ಮತ್ತು ಪೇದೆ (ಪಿಸಿ) ಕರ್ತವ್ಯದಲ್ಲಿದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸಿದ ತಮ್ಮ ಮೇಲಧಿಕಾರಿಗಳಾದ ಸಿಪಿಐ ಕಾಳಿಕೃಷ್ಣ, ಪಿಎಸ್‌ಐ ಅಮರೇಗೌಡ, ಹೆಚ್‌ಪಿಸಿ ಕಟ್ಟೆಬಸಪ್ಪ, ತಮ್ಮ ವೃತ್ತಿಬಾಂಧವರು ಮತ್ತು ಗೆಳೆಯರಾದ ಗಂಗಾಧರ, ಅಂಬರೀಶ್, ರಾಮಿರೆಡ್ಡಿ, ಶ್ರೀನಿವಾಸ್, ಸಿರಿಗೇರಿ ಪೋಲಿಸ್ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕೆ.ಯುವರಾಜ್ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ. ಸಾಮಾನ್ಯ ಪೇದೆ ಹುದ್ದೆಯಿಂದ ಪಿಎಸ್‌ಐ ಹುದ್ದೆಯನ್ನು ಸಾಧಿಸಿದ ಇವರ ಸಾಧನೆಗೆ ಸಿರಿಗೇರಿ ಪ್ರಜ್ಞಾವಂತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap