‘ಸಿರಿಗೇರಿ ಎಸ್‌ಬಿಐ ಎಟಿಎಂ ತೊಂದರೆ ಹಣಕ್ಕಾಗಿ ಗ್ರಾಹಕರ ಪರದಾಟ’

ಸಿರಿನಾಡ ಸುದ್ದಿ ಸಿರಿಗೇರಿ: ಗ್ರಾಮದ ಎಸ್‌ಬಿಐ ಶಾಖೆಯ ಎಟಿಎಂ ಯಂತ್ರ ದುರಸ್ತಿಗೆ ಬಂದು ಕಳೆದ 8ದಿನಗಳಿಂದ ಎಟಿಎಂ ಸ್ತಗಿತಗೊಂಡಿದೆ. ಸಿರಿಗೇರಿಯ ಸಾವಿರಾರು ಗ್ರಾಹಕರು ಸುತ್ತಲಿನ ಗ್ರಾಮಗಳ ಸಾವಿರಾರು ಗ್ರಾಹಕರಿಗೆ ಇದೇ ಎಟಿಎಂ ಆಧಾರವಾಗಿದೆ. ಹಣ ಬಿಡಿಸಿಕೊಳ್ಳುವ, ಹಣ ಕಳುಹಿಸುವ ಕೆಲಸ ನಿತ್ಯವೂ ಗಜಿಬಿಜಿಯಿಂದಲೇ ನಡೆಯುತ್ತದೆ. ಈಗ ದುರಸ್ತಿಗೆ ಬಂದಿರುವುದರಿAದ ಗ್ರಾಹಕರ ಹಣದ ವ್ಯವಹಾರಕ್ಕೆ ಅಡಚಣೆಯಾಗಿದೆ. ಹಣವಿದ್ದವರ ಬಳಿ ಹಣ ಪಡೆದು ಅವರಿಗೆ ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಮೂಲಕ ಹಣ ರವಾನೆಯನ್ನು ವಿದ್ಯಾವಂತರು ಮಾಡುತ್ತಿದ್ದಾರೆ. ಕೆಲವರು ತಮ್ಮ ಹಣ ತಮಗೆ ಸಿಗದೇ ಪರದಾಡುತ್ತಿದ್ದಾರೆ.
ಅನಿವಾರ್ಯ ಕೆಲಸಕ್ಕೆ ಬ್ಯಾಂಕ್ ಒಳಗೆ ಹೋಗಿ ಹಣ ಬಿಡಿಸಿಕೊಳ್ಳಲು, ನಿತ್ಯವೂ ಬ್ಯಾಂಕ್ ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಕೊರೋನ ಲಾಕ್‌ಡೌನ್ ಸಮಯದಲ್ಲಿ ಸರ್ಕಾರದಿಂದ ಬಡವರ ಖಾತೆಗಳಿಗೆ ಬಿದ್ದ ಹಣವನ್ನು ಬಿಡಿಸಿಕೊಳ್ಳುವವರ ಗುಂಪು ಇನ್ನು ಕರಗಿಲ್ಲ, ಇದರ ಮದ್ದೆ ನರೇಗಾ ಯೋಜನೆಯಲ್ಲಿ ಕೂಲಿ ಮಾಡಿದ ಕೂಲಿಕಾರ್ಮಿಕರು ತಮ್ಮ ಖಾತೆಗೆ ಬಿದ್ದ ಹಣವನ್ನು ಬಿಡಿಸಿಕೊಳ್ಳಲು ಬ್ಯಾಂಕುಗಳ ಮುಂದೆ ಜಮಾಯಿಸುತ್ತಾರೆ. ಗ್ರಾಹಕರು ತಮ್ಮ ಇತರೆ ಬ್ಯಾಂಕ್ ವ್ಯವಹಾರಗಳನ್ನು ನಿಭಾಯಿಸಿಕೊಳ್ಳಲೂ ಕಷ್ಟವಾಗಿದೆ.
ಸಿರಿಗೇರಿಯಲ್ಲಿರುವ ಎಟಿಎಂ ಯಂತ್ರವು 3ತಿಂಗಳಿಗೆ, 4ತಿಂಗಳಿಗೆ ಕೈಕೊಡುವುದು ಸಾಮಾನ್ಯವಾಗಿದ್ದು ಇದರ ಬಿಡಿಭಾಗದ ವಸ್ತುಗಳು (ಸ್ಪೇರ್‌ಪಾರ್ಟ್ಸ್) ಬರೀ ಚನೈ, ಮುಂಬೈ, ಹೈದರಾಬಾದ್, ದೆಹಲಿಯಿಂದಲೇ ಬರಬೇಕಾಗಿರುವಂತಹ ವಸ್ತುಗಳೇ ಆಗಿವೆ. ಎಟಿಎಂ ಕೆಟ್ಟಾಗ ಕಂಪನಿಯ ಇಂಜಿನಿಯರ್ ಬರಬೇಕು, ಪರೀಕ್ಷಿಸಬೇಕು ಬಿಡಿಭಾಗ ತೆಗೆದು ಕಳುಹಿಸಬೇಕು, ಅದು ಬರುವವರೆಗೆ ಕಾಯಬೇಕು, ಬಂದ ಮೇಲೆ ಅಳವಡಿಸಬೇಕು ಇದು ಮೇಲಿಂದ ಮೇಲೆ ಕೆಡುತ್ತಿರುವುದರಿಂದ ಎಟಿಂ ಕೆಟ್ಟುನಿಂತಾಗ 10ರಿಂದ 15ದಿನ ಗ್ರಾಹಕರಿಗೆ ತಲೆಬಿಸಿಯಾಗುತ್ತದೆ.
ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ) ಶಾಖೆಯೂ ಇದ್ದು, ಹಲವಾರು ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿಗೆ ಎಟಿಎಂ ಅಳವಡಿಸಲು ಒಂದು ಮಳಿಗೆ ನೀಡುವಂತೆ ಬೇಡಿಕೆ ನೀಡಿದ್ದರೂ ಇಲ್ಲಿಯವರೆಗೆ ಒದಗಿಸಿಕೊಡಲು ಸಾಧ್ಯವಾಗಿಲ್ಲ. ಇನ್ನೊಂದು, ಮೊಗದೊಂದು ಎಟಿಎಂ ಗ್ರಾಮಕ್ಕೆ ಅತೀ ಅವಶ್ಯಕತೆ ಇದ್ದು ಎಸ್‌ಬಿಐ ನವರು 02 ಎಟಿಎಂ ಅಳವಡಿಸುವ ಮೂಲಕ, ಪಂಚಾಯಿತಿಯವರು ಕೆಜಿಬಿ ಶಾಖೆಯವರಿಗೆ ಸ್ಥಳಾವಕಾಶ ನೀಡುವ ಮೂಲಕ ಬ್ಯಾಂಕ್‌ಗಳಲ್ಲಿ ವ್ಯವಹರಿಸುವ ಸಾವಿರಾರು ಗ್ರಾಹಕರ ಸಮಸ್ಯೆ ನೀಗಿಸಲು ಮುಂದಾಗಬೇಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap