ಸಿಂಧನೂರು- ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಅದಲು-ಬದಲು, ಆತಂಕ

ಸಿರಿನಾಡ ಸುದ್ದಿ, ಸಿಂಧನೂರು: ತಾಲೂಕಿನ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಹಳೇ ವಿದ್ಯಾರ್ಥಿಗಳಿಗೆ ಕೊಡುವ ಪ್ರಶ್ನೆ ಪತ್ರಿಕೆಯನ್ನು ಹೊಸ ವಿದ್ಯಾರ್ಥಿಗಳಿಗೆ ಕೊಟ್ಟಿರುವ ಘಟನೆ ಶನಿವಾರ ನಡೆದಿದೆ.
ಗಣಿತ ವಿಷಯ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಬೇಕಿತ್ತು. ಆದರೆ ಈ ಹಿಂದೆ ಅನುತ್ತೀರ್ಣರಾಗಿ ಮರು ಪರೀಕ್ಷೆ ಬರೆಯಲು ಬಂದವರಿಗೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಹೊಸ ವಿದ್ಯಾರ್ಥಿಗಳಿಗೆ ನೀಡಲಾಗಿದೆ. 20 ವಿದ್ಯಾರ್ಥಿಗಳು ಈ ರೀತಿಯ ಪ್ರಶ್ನೆ ಪತ್ರಿಕೆ ಪಡೆದು, ಪ್ರಶ್ನೆ ನೋಡಿ ಉತ್ತರ ಬರೆಯಲಾಗದೆ ತಡಕಾಡಿದ್ದಾರೆ. ಈ ಕುರಿತಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪಾಲಕರ ಸಂದಾನಕ್ಕೆ ಮುಂದಾಗುದ್ದು ಆಕ್ರೋಶಕ್ಕೆ ಕಾರಣವಾಗಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap