ಸಾವಯವ ತೋಟಗಾರಿಕೆ ಬೆಳೆಗಾರರ ಮನವಿ ಗ್ರಾಮೀಣ ಬ್ಯಾಂಕ್ ಬಡ್ಡಿಮನ್ನಾಕ್ಕೆ ಸಿಎಂ ಕ್ರಮಕ್ಕೆ ಒತ್ತಾಯ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿನ ತೋಟಗಾರಿಕೆ ಬೆಳೆಸಾಲದ ಬಡ್ಡಿ ಮನ್ನಾ ಮಾಡಿದಂತೆಯೆ ರಾಜ್ಯದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆಗಾರರು ಮಾಡಿದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ಸಾವಯವ ತೋಟಗಾರಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತಂತೆ ತಹಸೀಲ್ದಾರ್ ಆಶಪ್ಪ ಪೂಜಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜಿ.ಪರಮೇಶ್ವರಪ್ಪ ಇವರಿಗೆ ಮನವಿ ಸಲ್ಲಿಸಿದರು. ಬಳಿಕ ಸಂಘದ ತಾಲೂಕು ಅಧ್ಯಕ್ಷ ಹೊಳಗುಂದಿ ಶೇಖರಪ್ಪ ಮಾತನಾಡಿ, ರಾಜ್ಯದಲ್ಲಿ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರು ಕಳೆದ ಹಲವು ವರ್ಷಗಳಿಂದಲೂ ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಲೆ ಕುಸಿತ, ಅಕಾಲಿಕ ಮಳೆ, ರೋಗಬಾಧೆ ಸೇರಿದಂತೆ ಹಲವು ಕಾರಣಗಳಿಂದ ಬೆಳೆಗಾರರ ಪರಿಸ್ಥಿತಿ ಸಾಲದ ಶೂಲೆಗೆ ಸಿಲುಕಿದೆ. ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಹಲವು ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಆದರೆ, ಸರಕಾರ ಕೇವಲ ಬೆಳೆಗಾರರು ಮಾಡಿದ ರಾಷ್ಟಿçÃಕೃತ ಬ್ಯಾಂಕ್‌ಗಳ ಮೇಲಿನ ಸಾಲದ ಬಡ್ಡಿ ಮನ್ನಾ ಮಾಡಲು ಮುಂದಾಗಿದೆ. ಇದರಿಂದಾಗಿ ರಾಜ್ಯದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಮಾಡಿದ ರೈತರ ಸಾಲದ ಬಡ್ಡಿ ಮೊತ್ತ ಏರಿಕೆಯಾಗುತ್ತಿದೆ. ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚೆಗೆ ಲಾಕ್‌ಡೌನ್ ವೇಳೆಯಲ್ಲೂ ಸೂಕ್ತ ಬೆಲೆ ಒದಗದೆ ಅಘಾತವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ಗ್ರಾಮೀಣ ಬ್ಯಾಂಕ್‌ಗಳಲ್ಲಿನ ತೋಟಗಾರಿಕೆ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಸಂಗದ ಕಾರ್ಯದರ್ಶಿ ಆರ್.ರೋಹಿತ್, ಪದಾಧಿಕಾರಿಗಳಾದ ಆರ್.ಶಂಕರಗೌಡ, ಶ್ರೀನಿವಾಸ ರಾಜು. ಧನರಾಜ, ಲೋಕೇಶ ಮುಂತಾದವರು ಮನವಿ ಸಲ್ಲಿಸಿದರು. ಮುಖಂಡರಾದ ನೀಲಕಂಠಪ್ಪ, ವೆಂಕಟರಾಮರಾಜು, ಮೈನಳ್ಳಿ ಕೊಟ್ರೇಶಪ್ಪ, ಇಟ್ಟಿಗಿ ಭರಮಣ್ಣ, ಲೋಕೇಶ, ನಾಗರಾಜ, ಡಿ.ಭಗವಾನ್, ಗಂಗಾಧರ ಮುಂತಾದವರಿದ್ದರು. ರಾಜ್ಯರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸAಗಯ್ಯ, ಗೋಣಿಬಸಪ್ಪ, ಸಿದ್ದನಗೌಡ ಮುಂತಾದವರು ಬೆಂಬಲ ವ್ಯಕ್ತಪಡಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap