ಸಹಕಾರಿ ಅಭಿವೃದ್ಧಿಗೆ ಗ್ರಾಹಕ ಸಹಕಾರವೇ ಮುಖ್ಯ – ಹೆಚ್.ಎಜೆ.ಹನುಮಂತಯ್ಯ.

ಸಿರಿನಾಡ ಸುದ್ದಿ, , ಸಿರುಗುಪ್ಪ: ಸಹಕಾರಿ ತತ್ವದ ಮೇಲೆ ಸಾಮಾನ್ಯ ವರ್ಗದ ಜನರಿಗೆ ಅತಿ ಕಡಿಮೆ ಸಮಯದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಗ್ರಾಹಕರ ಸಹಕಾರವೇ ಮುಖ್ಯ ಎಂದು ಬ್ಯಾಂಕ್‌ನ ಅಧ್ಯಕ್ಷ ಎಚ್.ಜೆ.ಹನುಮಂತಯ್ಯಶೆಟ್ಟಿ ತಿಳಿಸಿದರು.
ನಗರದ ಪ್ರತಿಷ್ಠಿತ ವಿಷ್ಣುವಿಲಾಸ್ ಸಹಕಾರಿ ನಿ.ದ 9ನೇ ವಾರ್ಷಿಕೋತ್ಸವ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಅಭಿವೃದ್ಧಿಗೆ ಗ್ರಾಹಕರು ತಾವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿಯ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಸಿರುಗುಪ್ಪದಲ್ಲಿ ಪ್ರಾರಂಭಗೊ0ಡ ಸಹಕಾರಿ, ಕಳೆದ ವರ್ಷ ಬಳ್ಳಾರಿಯಲ್ಲಿ ನೂತನ ಶಾಖೆ ಪ್ರಾರಂಭಗೊAಡರೆ, ಮುಂದಿನ ದಿನಗಳಲ್ಲಿ ಹೊಸಪೇಟೆ ಹಾಗೂ ರಾಯಚೂರು ನಗರಗಳಲ್ಲಿ ಶಾಖೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುವುದರ ಜತೆಗೆ ರಕ್ತದಾನ ಶಿಬಿರದಲ್ಲಿ ಸಕ್ರೀಯವಾಗಿ ಕರ್ತವ್ಯ ನಿರ್ವಹಿಸಿದ ಸರಕಾರಿ ಆಸ್ಪತ್ರೆಯ ಪ್ರವೀಣ್‌ಕುಮಾರ್ ಮಸ್ಕಿಯವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ರಾಜ್ಯ ಆರ್ಯವೈಶ್ಯ ಮಂಡಳಿ ನಿಗಮದ ನಾಮನಿರ್ದೇಶಕರನ್ನಾಗಿ ಸರಕಾರ ಬ್ಯಾಂಕ್‌ನ ಅಧ್ಯಕ್ಷ ಎಚ್.ಜೆ.ಹನುಮಂತಯ್ಯಶೆಟ್ಟಿಯವರನ್ನು ನೇಮಕಗೊಳಿಸಿರುವ ಹಿನ್ನಲೆಯಲ್ಲಿ ಬ್ಯಾಂಕ್‌ನ ಸದಸ್ಯರು ಹಾಗೂ ಸಾರ್ವಜನಿಕರು ಸನ್ಮಾನಿಸಿದರು.
ಈ ವೇಳೆ ಬ್ಯಾಂಕ್‌ನ ಲೆಕ್ಕಪರಿಶೋಧಕ ಕೆ.ನಾಗನಗೌಡ, ಸಹಕಾರಿಯ ಸದಸ್ಯ ಮಧುಸೂಧನ್‌ಶೆಟ್ಟಿ, ಬ್ಯಾಂಕ್‌ನ ವಕೀಲ ವೈ.ವಿರೇಶ, ಬ್ಯಾಂಕ್‌ನ ವ್ಯವಸ್ಥಾಪಕ ಅನಿಲ್‌ಕುಮಾರ್ ಸೇರಿದಂತೆ ಬ್ಯಾಂಕ್‌ನ ನಿರ್ದೇಶಕರು ಹಾಗೂ ಗ್ರಾಹಕರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap