ಸರ್ಕಾರ ನೀಡುವ ಮಾಶಾಶನ ಅರ್ಹರಿಗೆ ತಲುಪಿಸಲು ಶ್ರಮವಹಿಸಿ: ಆರ್. ಅಶೋಕ್

ಸಿರಿನಾಡ ಸುದ್ದಿ, ರಾಯಚೂರು: ಬಡವರು, ಅಸಹಾಯಕರು, ವಿಧವೆಯರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ವಿವಿಧ ರೀತಿಯ ಮಾಶಾಸನಗಳನ್ನು ನೀಡುತ್ತಿದ್ದು, ಅದಕ್ಕಾಗಿ ಪ್ರತಿವರ್ಷ 7 ಸಾವಿರ ಕೋಟಿ ರೂ.ಗಳ ಹಣವನ್ನು ಮೀಸಲಿರಿಸಿದೆ. ಅದನ್ನು ಅರ್ಹರಿಗೆ ತಲುಪಿಸುವಲ್ಲಿ ಕಂದಾಯ ಇಲಾಖೆಯ ಪ್ರಾಮುಖ್ಯತೆ ಹೆಚ್ಚಿನದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಜಿಲ್ಲೆಯ 2.42 ಲಕ್ಷಕ್ಕೂ ಹೆಚ್ಚಿನ ಪಿಂಚಿಣಿದಾರರಿದ್ದು, ಅವರೆಲ್ಲರ ಆಧಾರ್ ಲಿಂಕ್ಅನ್ನು ಮುಂದಿನ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಇದರಿಂದ ಬೋಗಸ್ ಪಿಂಚಣಿದಾರರನ್ನು, ಅವ್ಯವಹಾರ ಹಾಗೂ ಮೋಸವನ್ನು ತಡೆಗಟ್ಟಬಹುದು ಎಂದರು.
60 ವರ್ಷ ಪೂರ್ಣಗೊಂಡು ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಹಿರಿಯ ನಾಗರೀಕರನ್ನು ಗುರುತಿಸಿ ಸ್ವಯಂ ಪ್ರೇರಿತರಾಗಿ ಅವರಿಂದ ಅರ್ಜಿ ಪಡೆದು ಮಾಸಶಾಸನವನ್ನು ನೀಡಲು ಜಿಲ್ಲೆಯಲ್ಲಿ ಕ್ರಮ ವಹಿಸಬೇಕು, ಈಗಾಗಲೇ ಈ ಪ್ರಾಯೋಗಿಕ ಯೋಜನೆಯನ್ನು ಬಳ್ಳಾರಿ ಹಾಗೂ ಉಡುಪಿಯಲ್ಲಿ ಆರಂಭಿಸಲಾಗಿದೆ. 60 ವರ್ಷ ಪೂರ್ಣಗೊಂಡಿರುವವರ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರ ಪಡೆದು ಅರ್ಹರಿಗೆ ಸರ್ಕಾರದಿಂದ ನೀಡಲಾಗುವ ಪಿಂಚಣಿ ಒದಗಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಂಚೆ ಮೂಲಕ ವಿತರಿಸಲಾಗುವ ಮಾಸಶಾಸನ ಕೆಲವರಿಗೆ ಲಭ್ಯವಾಗುತ್ತಿಲ್ಲವೆಂದು ದೂರುಗಳಿದ್ದು, ಎಲ್ಲರಿಗೂ ಕಡ್ಡಾಯವಾಗಿ ಬ್ಯಾಂಕ್ ಖಾತೆಯ ಮೂಲಕವೇ ಪಾವತಿಸಬೇಕು. ಕೆಲವೂಮ್ಮೆ ಸಾವೀಗಿಡಾದವರಿಗೆ ಪಿಂಚಣಿ ಮೊತ್ತ ಪಾವತಿಯಾಗಿತಿದ್ದು, ಅಂತಹವರನ್ನು ಗುರುತಿಸಬೇಕು, ಮರಳಿ ಅವರ ಖಾತೆಯಿಂದ ಹಣವನ್ನು ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಲ್ಲೂ ಕಡ್ಡಾಯವಾಗಿ ಸ್ಮಶಾನಗಳನ್ನು ನಿರ್ಮಿಸಿಕೊಡಬೇಕು, ಯಾವುದೇ ಜಾತಿ, ಧರ್ಮ ಅಲ್ಲಿ ಬರಬಾರದು, ಅದು ಸಾರ್ವಜನಿಕ ಆಸ್ತಿಯಾಗಿರಬೇಕು, ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲಿ ಖಾಸಗಿಯಾಗಿ ಖರೀದಿಸಿ, ಸರ್ಕಾರಿ ಸ್ಥಳದಲ್ಲಿ ತಹಶೀಲ್ದಾರರು, ಸಹಾಯಕ ಆಯುಕ್ತರು ನೀಡಿರುವ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳು ಕೂಡಲೇ ಅನುಮತಿ ನೀಡಿ ಸ್ಮಶಾನ ನಿರ್ಮಿಸಿಕೊಡಬೇಕು, ರಾಯಚೂರು ನಗರದೊಳಗೆ ಜಾಗವಿಲ್ಲದಿದ್ದರೆ, ಆಸು ಪಾಸಿನಲ್ಲಿ ಲಭ್ಯವಿರುವ ಸ್ಥಳದಲ್ಲಿ ರುದ್ರಭೂಮಿಯನ್ನು ನಿರ್ಮಿಸಿಕೊಡಬೇಕೆಂದು ಅವರು ತಾಕೀತು ಮಾಡಿದರು.
ಸರ್ಕಾರ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಭೂಮಿಯನ್ನು ಕಂದಾಯ ಇಲಾಖೆ ಸರ್ಕಾರದ ಜಮೀನುಗಳನ್ನು ಗುರುತಿಸಿ ನೀಡಬೇಕು.ಜಿಲ್ಲೆಯಲ್ಲಿಒತ್ತುವರಿಯಾಗಿರುವ ಜಮೀನುಗಳನ್ನು ತೆರವುಗೊಳಿಸಬೇಕು, ಪೌತಿ, ಪೋಡಿಯನ್ನು ಕೂಡಲೇ ಮಾಡಿಕೊಡಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಪರಸ್ಪರ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಮಾಸ್ಕ್ ಧರಿಸಬೇಕು, ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಹೆಚ್ಚು ಜನರು ಸೇರುವ ಸ್ಥಳದಲ್ಲಿ ಪರಿಶೀಲಿಸಿ ದಂಡ ವಿಧಿಸಬೇಕು. ಕೆಲವು ದೇಶಗಳಲ್ಲಿ ಈಗಾಗಲೇ ಕೋವಿಡ್-19ನ ಎರಡನೇ ಅವೃತಿ ಕಂಡುಬAದಿದ್ದು, ಅದು ಗಂಭೀರವಾಗಿದೆ, ಹಾಗಾಗಿ ನಾಗರೀಕರು ಅತಿ ಎಚ್ಚರದಿಂದ ಇರಬೇಕು, ಕೋವಿಡ್ನಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 1.5 ಸಾವಿನ ಪ್ರಮಾಣ ವರದಿಯಾಗಿದ್ದು, ಈ ಇದು ಇನ್ನೂ ಕಡಿಮೆಯಾಗಬೇಕು ಎಂದರು.
ಜಿಲ್ಲೆಯ ವಿವಧಡೆ ಮಳೆ ಬರುತ್ತಿದ್ದು, ರೈತರ ಬೆಳೆ ಹಾನಿ ಕುರಿತು ಸಮೀಕ್ಷೆಯನ್ನು ಎಚ್ಚರಿದಿಂದ ನಿರ್ವಹಿಸಬೇಕು. ಸರ್ಕಾರ ರೈತರ ಪರವಾಗಿದ್ದು, ಬೆಳೆ ಹಾನಿಯಾದವರಿಗೆ ಕೂಡಲೆ ಪರಿಹಾರ ಒದಗಿಸಲು ಜಿಲ್ಲಾಡಳಿತ ಚುರುಕಾಗಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
ಶಾಸಕರಾದ ಡಾ. ಶಿವರಾಜ ಪಾಟೀಲ್, ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಖಂ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಿö್ಮÃಕಾಂತ ರೆಡ್ಡಿ ಅವರು ವೇದಿಕೆಯಲ್ಲಿ ಇದ್ದರು.
ಸಭೆಯಲ್ಲಿ ಸಹಾಯಕ ಆಯುಕ್ತರು, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.