ಸಂಭ್ರಮದ ವರ ಮಹಾಲಕ್ಷಿö್ಮ ಪೂಜೆ

ಸಿರಿನಾಡ ಸುದ್ದಿ, ಹೂವಿನಹಡಗಲಿ: ಕೊರೋನಾ ಭಯದ ನಡುವೆಯೂ ತಾಲೂಕಿನಾದ್ಯಂತ ವರ ಮಹಾಲಕ್ಷಿö್ಮ ಪೂಜೆಯನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿ0ದ ಆಚರಿಸಿದರು.
ಪಟ್ಟಣ ಹಾಗೂ ತಾಲೂಕಿನ ಹೊಳಗುಂದಿ, ಸೋಗಿ, ಹೊಳಲು, ಹಿರೇಹಡಗಲಿ, ಕತ್ತೆಬೆನ್ನೂರು ಸೇರಿದಂತೆ ಹಲವಾರು ಗ್ರಾಮಗಳ ಮನೆಗಳಲ್ಲಿ ಬಾಳೆಕಂಬ, ಕಬ್ಬಿನ ಕೋಲು ಮತ್ತು ತೆಂಗಿನ ಗರಿಗಳಿಂದ ಮಂಟಪವನ್ನು ಮಾಡಿ, ಮಹಾಲಕ್ಷಿö್ಮಯನ್ನು ಕೂಡಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಶಾಸ್ತೊçÃಕ್ತವಾಗಿ ಪೂಜಿಸಿದರು.
ಪಟ್ಟಣದ 10ನೇ ವಾರ್ಡಿನ ಸೋಗಿ ವೀರಣ್ಣನವರ ಮನೆಯಲ್ಲಿ ವರ ಮಹಾಲಕ್ಷಿö್ಮ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು ಕಂಡು ಬಂದಿತು. ಪೂಜೆಗೆ ಬಂದ ಮಹಿಳೆಯರಿಗೆ ಕೈಗೆ ಸ್ಯಾನಿಟೈಜರ್ ನೀಡಿ, ಮಾಸ್ಕ್ ವಿತರಿಸಿ, ಉಡಿ ತುಂಬಿ ವರ ಮಹಾಲಕ್ಷಿö್ಮ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ವಿದ್ಯೆ, ಆರೋಗ್ಯ, ಧಾನ್ಯ, ಸಂತಾನ, ಸೌಂದರ್ಯ, ಸಂಪತ್ತು ಹೀಗೆ ಎಲ್ಲದಕ್ಕೂ ಅಧಿಪತಿಯಾದ ಮಹಾಲಕ್ಷಿö್ಮ ಪೂಜೆಯ ಸಂಪ್ರದಾಯವನ್ನು ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದಾರೆ ಎಂದು ಸೋಗಿ ಗಂಗಮ್ಮ ಹೇಳಿದರು. ರೋಗ-ರುಜಿನಗಳನ್ನು, ಕಷ್ಠ-ನಷ್ಠಗಳನ್ನು ದೂರಮಾಡಿ ಎಲ್ಲರಿಗೂ ಆರೋಗ್ಯವನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap