ಶುಭ ಶನಿವಾರ ಇಂದು ಸಿರುಗುಪ್ಪದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.

ಸಿರಿನಾಡ ಸುದ್ದಿ ಸಿರುಗುಪ್ಪ: ತಾಲ್ಲೂಕಿನಲ್ಲಿ ನಿತ್ಯವೂ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಬೆಂಬಿಡದೆ ಕಾಡುತ್ತಿದ್ದ ಕಾರಣ ವೈರಸ್ ಭೀತಿ ಶನಿವಾರದಂದು ಯಾವುದೇ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶುಭ ಶನಿವಾರದ ಸಂಕೇತ ನೀಡಿದೆ.
ಕಳೆದ ಕೆಲ ದಿನಗಳಿಂದ ನಿತ್ಯ ಕರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಆತಂಕಕ್ಕೆ ಗುರಿ ಮಾಡಿದ್ದ ಕರೋನಾ ವೈರಸ್ ಇಂದು ಯಾವುದೇ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಜನತೆಗೆ ನೆಮ್ಮದಿಯ ಸಂಗತಿಯಾಗಿದೆ.
ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 60 ಪ್ರಕರಣಗಳು ಪತ್ತೆಯಾಗಿದ್ದು. ನಗರದಲ್ಲಿ 40 ಹಾಗೂ ಗ್ರಾಮೀಣ ಭಾಗದಲ್ಲಿ 20 ಸೋಂಕಿತರು ಪತ್ತೆಯಾಗಿದ್ದು ಈ ಪೈಕಿ 9 ಜನರು ಗುಣಮುಖರಾಗಿದ್ದಾರೆ 51 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ
ಬಳ್ಳಾರಿ ಕೊರೊನಾ ಅಪ್ಡೇಟ್
ಬಳ್ಳಾರಿಯಲ್ಲಿ ಇಂದು‌ 50 ಜನರಿಗೆ ಕೊರೊನಾ‌ ಸೊಂಕು ದೃಢಪಡುವುದರೊಂದಿಗೆ 1168ಕ್ಕೆ ಸೊಂಕಿತರ ಸಂಖ್ಯೆ ಏರಿಕೆ. ಸಾವುಗಳ ಸಂಖ್ಯೆ 34ಕ್ಕೆ ಸೀಮಿತವಾಗಿದ್ದು. ಇಂದು ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಇದುವರೆಗೆ 524 ಜನ ಗುಣಮುಖರಾಗಿ ಬಿಡುಗಡೆ. 610 ಸಕ್ರಿಯ ಪ್ರಕರಣಗಳು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap