ವೈದ್ಯರನ್ನೂ ಗೌರವಿಸೋಣ ವೈದ್ಯರ ದಿನಾಚರಣೆಯ ಶುಭಾಶಯಗಳು- ಡಾ||ಕೆ.ಶಿವರಾಜ ಎಮ್.ಡಿ.

ಯಾವುದೇ ವೃತ್ತಿಯಲ್ಲಿ ಎಲ್ಲರೂ ಪರಿಪೂರ್ಣ ಅಲ್ಲ. ಅದೇ ರೀತಿ ಡಾಕ್ಟರುಗಳೆಲ್ಲರೂ ಪರಿಪೂರ್ಣ ಅಂತ ನಾನು ಸಮರ್ತಿಸಲ್ಲ. ಆದರೆ ಸಾವಿರಲ್ಲಿ ಒಬ್ಬ ಮಾಡುವ ಅಜಾಗರೂಕತೆ, ತಪ್ಪನ್ನು ಹೇಳುವಾಗ ಎಲ್ಲರನ್ನೂ ಆಕ್ರಮಿಸುವ ರೀತಿಯಲ್ಲಿ ಹೇಳಿ ಸಮರ್ಪಣಾ ಮನೋಭಾವದ ಡಾಕ್ಟರುಗಳನ್ನು ನಿರುತ್ಸಾಹಗೊಳಿದಿರಿ.
ತಡರಾತ್ರಿ ತನಕ ರೋಗಿಗಳನ್ನು ನೋಡುವ ಮತ್ತು ತನ್ನ ನಿತ್ಯದ ದಿನಚರಿಯಲ್ಲಿ 200 ಕ್ಕಿಂತಲೂ ಅಧಿಕ ರೋಗಿಗಳನ್ನು ನೋಡುವ ಒಬ್ಬ ವೈದ್ಯರಲ್ಲಿ” ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಏಕೆ ತೆಗೆದುಕೊಳ್ಳಬಾರದು?” ಎಂದು ಕೇಳಿದಾಗ, ನನಗೆ ದುಡ್ಡಿನ ಕೊರತೆಯಿಲ್ಲ, ಇದು ನನ್ನ ವೃತ್ತಿ ಆದ್ದರಿಂದ ನನ್ನನ್ನು ನಂಬಿ ಬಂದ ಈ ರೋಗಿಗಳನ್ನು ನೋಡದೆ ಕಳುಹಿಸಲು ಆಗುವುದಿಲಲ್ಲ”ಎಂದರು.
ತಮ್ಮ ಜೀವನದ ಅರ್ಧಕ್ಕಿಂತ ಅಧಿಕ ಆಯಸ್ಸನ್ನು ಒಬ್ಬ ಯುವ ವೈದ್ಯ, ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಧ್ಯಾಭ್ಯಾಸ ಮಾಡಲು ಕಳೆಯುತ್ತಾನೆ. ಆ ಬಳಿಕ ರಾತ್ರಿ-ಹಗಲೆನ್ನದೆ ಸಮಾಜ ಸೇವೆಯ ರೀತಿಯಲ್ಲಿ ರೋಗಿಗಳನ್ನು ಶುಷ್ರೂಶೆ ಮಾಡುತ್ತಾರೆ. ಕೆಲವು ವೈದ್ಯರು ಪರಿಸ್ಥಿತಿಗೆ ಅನುಸಾರವಾಗಿ, ರಾತ್ರಿ ಆಸ್ಪತ್ರೆಗೆ ಬಂದು ಕೂಡ ಶುಷ್ರೂಶೆ ಮಾಡುತ್ತಾರೆ. ಇವೆಲ್ಲ ಖಂಡಿತವಾಗಿಯೂ ದುಡ್ಡಿನ ಆಸೆಗೆ ಅಂತ ಹೇಳಲಾಗದು.
”ನಮ್ಮ ಜನ, ಯಾರಿಗೂ ತೋರಿಸದ ದೇಹದ ಅಂಗಾಗಳನ್ನು ಯಾವುದೇ ಮುಜುಗರಯಿಲ್ಲದೆ ವೈದ್ಯರಿಗೆ ತೋರಿಸುತ್ತಾರೆ. ಇದು ನಂಬಿಕೆ.
ಕೆಲವು ಸಂದರ್ಭಗಳಲ್ಲಿ ದುಡ್ಡಿಲ್ಲದ ಕಡು-ಬಡವರಿಗೆ ದುಡ್ಡು ತಗೊಳ್ಳದೆ ವಿನಾಯಿತಿ ಕೊಡುತ್ತಾರೆ. ಇದು ಮಾನವೀಯತೆ.
ಸಾದಾರಣ ಮನುಷ್ಯರು ತಮ್ಮ ವೃತ್ತಿಗೆ ಉಪಯೋಗಿಸುವುದಕ್ಕಿಂತ ಅಧಿಕ ಸಮಯ ವೈದ್ಯರುಗಳು ಉಪಯೋಗಿಸುತ್ತಾರೆ ಇದು ಸಮರ್ಪಣೆ”.
ವೈದ್ಯರು ಹಣ ಮಾಡುವವರು ಎಂಬ ಅಪವಾದಗಳು ಇದ್ದರೂ ಅವರಿಗೂ ಸಮಾಜದಲ್ಲಿ ನಿಮ್ಮ ಹಾಗೆ ಜೀವಿಸಲು ಕುಟುಂಬ ಬೇಕು, ಮನೆ ಬೇಕು, ಮಕ್ಕಳಿಗೆ ವಿಧ್ಯಾಬ್ಯಾಸ ಬೇಕು, ಸಮಯಕ್ಕೆ ಮನೆಗೆ, ಆಸ್ಪತ್ರೆಗೆ ತಲುಪಲು ವಾಹನ ಬೇಕು, ಚಾರಿಟಿ ಚಟುವಟಿಕೆಗಳಿಗೆ, ಬಡರೋಗಿಗೆ ವಿನಾಯಿತಿ ಕೊಡಬೇಕಾದರೆ ತಾನು ಸ್ವಯಂ ಆರ್ಥಿಕವಾಗಿ ಸುಧಾರಿಬೇಕು. ಅಲ್ಲದೆ ಸಾವಿರದಲ್ಲಿ ಒಬ್ಬ ಇದಕ್ಕಿಂತ ಭಿನ್ನವಾಗಿದ್ದಲ್ಲಿ ವೈದ್ಯರುಗಳನ್ನು ಆ ಪಟ್ಟಿಯಲ್ಲಿ ಸೇರಿಸಬಾರದು. ವೈದ್ಯರನ್ನು ದೇವರಂತೆ ಪೂಜಿಸುವುದು ಬೇಡ ಕನಿಷ್ಟ ಪಕ್ಷ ಅವರನ್ನು ಮಾನವರಂತೆ ಕಾಣಿರಿ.
ನಾವೆಲ್ಲರು ವೈದ್ಯರು
ನಮ್ಮ ವೃತ್ತಿ ಧರ್ಮದ ಬಗ್ಗೆ ನಮಗೆ ಅಭಿಮಾನವಿದೆ.
ವೈದ್ಯರನ್ನೂ ಗೌರವಿಸೋಣ
ಡಾ||ಕೆ.ಶಿವರಾಜ ಎಮ್.ಡಿ.
ಮಕ್ಕಳ ತಜ್ಞರು
ಸಹನಾ ಮಕ್ಕಳ ಆಸ್ಪತ್ರೆ
ಸಿಂಧನೂರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap