ವೇಮನ ಜಯಂತಿ ಅಚರಣೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ಬಿ.ಸಿ.ಎಂ. ಇಲಾಖೆ ವತಿಯಿಂದ ನಡೆದ ವೇಮನ ಜಯಂತಿ ನಿಮಿತ್ತ ತಹಶೀಲ್ದಾರ್ ಎಸ್.ಬಿ.ಕೂಡಲಿಗಿ ಯೋಗಿ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಸರ್ವಜ್ಞರಂತೆ ಆಂದ್ರದಲ್ಲಿ ವೇಮನನವರು ಜನರಿಗೆ ತಮ್ಮ ಅದ್ಬುತವಾದ ವಚನಗಳಿಂದ ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋದವರು. ಆಂದ್ರದ ನೆಲ್ಲೂರಿನಲ್ಲಿ ಜನಿಸಿದ ವೇಮನರು ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮರಿಂದ ಪ್ರೇರಿತರಾಗಿ ವೈರಾಗ್ಯವನ್ನು ಹೊಂದಿ ಮನುಕುಲಕ್ಕೆ ಆದರ್ಶವಾಗುವಂತ ಅನೇಕ ತತ್ವಪದಗಳನ್ನು, ಕೃತಿಗಳನ್ನು ನೀಡಿ ಅವುಗಳ ಮೂಲಕ ಮನುಕುಲದ ಪರಿವರ್ತನೆಗೆ ದಾರಿ ತೋರಿದರು. ಅವರ ರಚನೆಗಳು ವಿಶಿಷ್ಟವಾಗಿದ್ದು, ಬದುಕಿನ ಕಟುಸತ್ಯಗಳನ್ನು ನಮಗೆ ತಿಳಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಸಿ.ಎಂ. ಇಲಾಖೆ ಅಧಿಕಾರಿ ಶ್ಯಾಮಪ್ಪ, ಸಿ.ಡಿ.ಪಿ.ಒ. ರಾಮಕೃಷ್ಣನಾಂiÀiಕ, ರೆಡ್ಡಿ ಜನಸಂಘದ ಕಾರ್ಯದರ್ಶಿ ಪ್ರಭಾಕರರೆಡ್ಡಿ, ಮುಖಂಡರಾದ ಮಲ್ಲಿಕಾರ್ಜುನರೆಡ್ಡಿ, ಸಂಜೀವರೆಡ್ಡಿ, ಚಂದ್ರಮೌಳಿರೆಡ್ಡಿ, ವಿರುಪಾಕ್ಷರೆಡ್ಡಿ, ಜನಾರ್ಧನರೆಡ್ಡಿ ಸೇರಿದಂತೆ ಇತರರು ಇದ್ದರು.