ವಿವಿಧ ಸುಗ್ರೀವಾಜ್ಞೆ ಹಿಂಪಡೆಯುವ0ತೆ ಸಾಮೂಹಿಕ ಸಂಘಟನೆಗಳಿ0ದ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ.

ಸಿರಿನಾಡ ಸುದ್ದಿ, ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಿ0ದ ವಿವಿಧ ಸಂಘಟನೆಗಳ ಸಮೂಹಿಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೋಳಿಸಿರುವ ವಿವಿಧ ಸುಗ್ರೀವಾಜ್ಞೆಗಳನ್ನು ವಿರೋಧಿಸಿ ಐಕ್ಯ ಹೋರಾಟ ಬಂದ್‌ಗೆ ಪ್ರತಿಭಟನೆಯ ಮೂಲಕ ಸಾಮೂಹಿಕ ಪ್ರಗತಿಪರ ಸಂಘಟೆಗಳು ರಾಷ್ಟçಪತಿಗೆ ಗ್ರೇಡ್-2 ತಹಶೀಲ್ದಾರ ವಿಶ್ವನಾಥರ ಮೂಲಕ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ದಲಿತರ ವಿರೋಧಿಯಾದ, ಕಾಪೋರೇಟ್ ಕಂಪನಿಗಳ ಮತ್ತು ಶ್ರೀಮಂತರ ಪರವಾದ ಕಾನೂನುಗಳ ವಿರುದ್ದ ಐಕ್ಯ ಹೋರಾಟ ಕರ್ನಾಟಕ ಬಂದ್ ಪ್ರತಿಭಟನೆಯಲ್ಲಿ ಕರ್ನಾಟಕ ಭೂ ಸೂಧಾರಣಾ ತಿದ್ದುಪಡಿ, ಎ.ಎಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ವಿದ್ಯತ್ ಕಾಯ್ದೆ ತಿದ್ದುಪಡಿ, ಅಗತ್ಯ ಆಹಾರ ಸರಕುಗಳ ಕಾಯ್ದೆ ತಿದ್ದುಪಡಿ, ಕಾರ್ಮಿಕರ ಕಾಯ್ದೆಗಳ ತಿದ್ದುಪಡಿ ವಾಪಸ್ಸ್ ಪಡೆಯಬೇಕು, ಕಾನೂನು ಬಾಹಿರವಾಗಿ ಮುಚ್ಚಿರುವ ದೇಶನೂರು ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸುವ0ತೆ ಒತ್ತಾಯಿಸಿದರು.
ಈ ವೇಳೆ ಸಿಐಟಿಯು ಸಂಘಟನೆಯ ತಾಲೂಕ ಆಧ್ಯಕ್ಷೆ ಉಮಾದೇವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ದಲಿತರ ವಿರೋಧಿಯಾದ, ಕಾಪೋರೇಟ್ ಕಂಪನಿಗಳ ಮತ್ತು ಶ್ರೀಮಂತರ ಪರವಾದ ಕಾನೂನುಗಳ ವಿರುದ್ದ ಐಕ್ಯ ಹೋರಾಟ ಕರ್ನಾಟಕ ಬಂದ್ ಪ್ರತಿಭಟನೆಯಲ್ಲಿ ಕರ್ನಾಟಕ ಭೂ ಸೂಧಾರಣಾ ತಿದ್ದುಪಡಿ, ಎ.ಎಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ವಿದ್ಯತ್ ಕಾಯ್ದೆ ತಿದ್ದುಪಡಿ, ಅಗತ್ಯ ಆಹಾರ ಸರಕುಗಳ ಕಾಯ್ದೆ ತಿದ್ದುಪಡಿ, ಕಾರ್ಮಿಕರ ಕಾಯ್ದೆಗಳ ತಿದ್ದುಪಡಿ ವಾಪಸ್ಸ್ ಪಡೆಯಬೇಕು, ಕಾನೂನು ಬಾಹಿರವಾಗಿ ಮುಚ್ಚಿರುವ ದೇಶನೂರು ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸುವAತೆ ಒತ್ತಾಯಿಸಿದರು.
ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊರಡಿಸುವರುವ ಸುಗ್ರೀವಾಜ್ಞೆ ವಿರೋಧಿಸಿ ಹಮ್ಮಿಕೊಂಡಿದ್ದ ಕರ್ನಾಟಕ ಬಂದ್ ಪ್ರತಿಭಟನೆಯು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರೀಯೆ ನೀಡಿದ ಸಾರ್ವಜನಿಕರು. ಪ್ರತಿಭಟನಾ ಮೆರವಣಿಗೆಯ ವೇಳೆಯಲ್ಲಿ ಮಾತ್ರ ಅಂಗಡಿಗಳನ್ನು ಮುಚ್ಚಿದ್ದ ವ್ಯಾಪಾರಿಗಳು ಮೆರವಣಿಗೆ ಮುಂದೆ ಸಾಗಿದಂತೆ ಹಿಂಬದಿಯಲ್ಲಿ ತಮ್ಮ ವ್ಯಾಪಾರ ಪ್ರಾರಂಭಿಸಿದರು.
ಈ ವೇಳೆ ರೈತ ಸಂಘಟನೆಯ ಆರ್.ಮಾಧವರೆಡ್ಡಿ, ವಾ.ಹುಲುಗಯ್ಯ, ಸಿದ್ದರಾಮನಗೌಡ, ಅಡಿವೆಪ್ಪ, ರಾಮಕೃಷ್ಣ, ಲತೀಫ್‌ಖಾಜ, ಸೇರಿದಂತೆ ನಾನಾ ಸಂಘಟನೆಗಳ ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap