ವಿಜಯನಗರ ಜಿಲ್ಲೆ: ಬಿಜೆಪಿ ಶಾಸರಿಗೆ ಗೋತ್ತ್ತಿಲ್ಲ- ಅಲ್ಲಂ ಲೇವಡಿ

ಸಿರಿನಾಡ ಸುದ್ದಿ, ಎಮ್ಮಿಗನೂರು: ಗ್ರಾಮದ ಶ್ರೀಅಂಜಿನೇಯ ದೇವಸ್ಥಾನದ ಗುರುವಾರ ಸಮುದಾಯ ಭವನ ಉದ್ಟಾಟನೆಯನ್ನು ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ನೇರೆವೇರಿಸಿದರು
ಗ್ರಾಮದಲ್ಲಿ ೫ ಲಕ್ಷವೆಚ್ಚದ ಸಮುದಾಯ ಭವನ ಉದ್ಟಾಟನೆ ನೆರವೇರಿಸಿ ಮತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರು ಕ್ಯಾಬಿನೆಟ್‌ಲ್ಲಿ 31 ವಿಜಯನಗರ ಜಿಲ್ಲಾ ಘೋಷಣೆ ಮಾಡಿರಿವುದು ಬಿಜೆಪಿ ಶಾಸಕ ನಾಯಕರಿಗೆ ಗೋತ್ತ್ತಿಲ್ಲ ಎಂದು ಲೇವಡಿ ಮಾಡಿದರು. ಹಾಗೂ ಜಿಲ್ಲಾ ರಚನೆಯಲ್ಲಿ ಗ್ರಾಮ ಮಟ್ಟದಿಂದ ತಾಪಂ ಜಿಪಂ ಎಲ್ಲಾರನ್ನು ವಿಶ್ವಾಸ ತೆಗೆದು ಕೊಳ್ಳದೇ ರಾತ್ರೋರಾತ್ರಿ ಏಕಎಕಿ ನಿರ್ಧರ ತೆಗೆದು ಕೊಳ್ಳುವ ಮೂಲಕ ಸರಕಾರ ಅವಸರದ ನಿರ್ಧಾರ ಕೈಗೊಂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು
ಈ ವೇಳೆ ಸೇವಾ ಟ್ರಸ್ಟ ಅದ್ಯಕ್ಷ ಪಿ.ವೆಂಕಾರೆಡ್ಡಿ, ಉಪಾಧ್ಯಕ್ಷ ಬಿ.ವೆಂಕಟರಾಮರೆಡ್ಡಿ, ಮುಖಂಡರಾದ ಜಿ.ನಾಗಿರೆಡ್ಡಿ, ಡಿ.ಸೀತಾರಾಮರೆಡ್ಡಿ, ಎನ್.ಸೂಗಪ್ಪ, ಬಿ.ಸಾದಶಿವಪ್ಪ, ವೇಣುಗೋಪಾಲ್ ಆಚಾರಿ, ಪಿ.ನಾಗರಾಜ ಶಟ್ಟಿ, ರಾಮನಾಯ್ಡ, ಕರಿಬಸವನಗೌಡ, ಕೇಶವರೆಡ್ಡಿ, ವೈ.ಆಶಥ್‌ರೆಡ್ಡಿ, ಜಿಪಂ. ಸದಸ್ಯೆ ಎ.ಬನಶಂಕರಿ ವಿರೇಂದ್ರರೆಡ್ಡಿ, ತಾಪಂ ಸದಸ್ಯ ವೆಂಕಟರಾಮರಾಜು, ಹಾಗೂ ಸೇವಾ ಟ್ರಸ್ಟ ಸದಸ್ಯರು, ಗ್ರಾಪಂ ಸದಸ್ಯರು, ಇತರರು ಇದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap