ವಿಕಾಸ ಬ್ಯಾಂಕಿನಿ0ದ“ವಿಕಾಸಆರೋಗ್ಯ ಬಂಧು”ಗು0ಪು ಆರೋಗ್ಯ ವಿಮೆ ಯೋಜನೆಯಆರಂಭ !

ಕೋವಿಡ್-19 ಸೇರಿದಂತೆ ಪೂರ್ವ ಅಸ್ತಿತ್ವದ ಎಲ್ಲಾ ಕಾಯಿಲೆಗಳಿಗೂ ಅನ್ವಯ.
ಸಿರಿನಾಡ ಸುದ್ದಿ, ಹೊಸಪೇಟೆ: ಸದಾ ಹೊಸತನಗಳಿಂದಲೇ ಸುದ್ದಿಯಲ್ಲಿರುವ ವಿಕಾಸ ಬ್ಯಾಂಕ್ ಕೋವಿಡ್ 19 ಸೇರಿದಂತೆ ಪೂರ್ವ ಅಸ್ತಿತ್ವದ ಎಲ್ಲ ಕಾಯಿಲೆಗಳನ್ನು ಒಳಗೊಂಡ ವಿನೂತ£“ವಿಕಾಸ ಆರೋಗ್ಯ ಬಂಧು” ಗುಂಪು ಆರೋಗ್ಯ ವಿಮೆಯೋಜನೆಯನ್ನು ಇಫ್ ಕೋಟೋಕಿಯೊ ವಿಮಾ ಸಂಸ್ಥೆ ಸಹಯೋಗದೊಂದಿಗೆ ಲೋಕಾಪರ್ಣೆ ಮಾಡುತ್ತಿದೆ ಎಂದು ವಿಕಾಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.
ಶುಕ್ರವಾರ ಬ್ಯಾಂಕ್ ನಲ್ಲಿ ಆಯೋಜಿಸಿದ್ದ ವಿಡಿಯೋ ನೇರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ವಿಕಾಸ ಆರೋಗ್ಯ ಬಂಧು” ಹೆಸರಿನಲ್ಲಿ ಆರಂಭವಾಗಲಿರುವ ಈ ವಿಮೆ ಸದ್ಯದ ಕೋವಿಡ್ 19 ಸೇರಿದಂತೆ ಈ ಹಿಂದೆ ಗ್ರಾಹಕ ಹೊಂದಿರುವ ಎಲ್ಲ ಪೂರ್ವ ಅಸ್ತಿತ್ವದ ಕಾಯಿಲೆಗಳಿಗೂ ಅನ್ವಯವಾಗುವಂತೆ ಈಯೋಜನೆಯನ್ನು ರೂಪಿಸಲಾಗಿದೆ ತಕ್ಷಣದಿಂದಲೇ ಜಾರಿಯಾಗುವಂತೆ ತನ್ನ ಎಲ್ಲ ಶಾಖೆಗಳ ಗ್ರಾಹಕರು ಈಯೋಜನೆಯ ಲಾಭ ಪಡೆಯಬಹುದು ಎಂದು ತಿಳಿಸಿದರು.
ಈ ಯೋಜನೆಯ ಲಾಭ ಪಡೆಯುವ ಗ್ರಾಹಕರು 18 ರಿಂದ 65 ವರ್ಷ ಒಳಗಿನವರಾಗಿರಬೇಕು. ಪೂರ್ವ ಅಸ್ತಿತ್ವದ ಎಲ್ಲ ಕಾಯಿಲೆ ಒಳಗೊಂಡAತೆ ಕೋವಿಡ್ 19 ಕಾಯಿಲೆಗೆ ವಾರ್ಷಿಕರೂ. 2346 ಸಂದಾಯ ಮಾಡುವ ಮೂಲಕ 3 ಲಕ್ಷವಿಮೆ ಪಡೆಯಬಹುದಾಗಿದೆ ಎಂದು ಅವರು ವಿವರಿಸಿದರು.
“ಕರೋನಾ ಕವಚ್”, ವೈಯುಕ್ತ ವಿಮೆ, ಜೀವ ವಿಮೆ, ವ್ಯಾಪಾರ ವಿಮೆ ಹಾಗೂ ವಾಹನ ವಿಮಾ ಸೌಲಭ್ಯಗಳು ಬ್ಯಾಂಕ್‌ನಲ್ಲಿ ಲಭ್ಯವಿದ್ದು ಗ್ರಾಹಕರು ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಆರೋಗ್ಯ ವಿಮೆಗಳನ್ನು ಪಡೆಯುವ ಮೂಲಕ ಸುರಕ್ಷಿತ ಜೀವನಕ್ಕೆ ಅಣಿಯಾಗುವಂತೆ ಕೋರಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap