ವರದಿಯ ಎಡವಟ್ಟು ಸೊಂಕಿತನಿಗೆ ಗೊಂದಲ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದಲ್ಲಿ ದಿನದಿಂದ ದಿನಕ್ಕೆ ಕೋರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದಡೇ ವರದಿ ನೀಡುವಲ್ಲಿ ಸರಕಾರ ಮಾಡುವ ಎಡವಟ್ಟುಗಳ ಮೂಲಕ ಜನರನ್ನು ಮತ್ತಷ್ಠು ಗೊಂದಲಕ್ಕೆ ಸಿಲುಕಿಸುತ್ತಿವೆ. ಮೊಬೈಲ್‌ಗೆ ಬಂದ ಸಂದೇಶದಲ್ಲಿ ನ್ಯಾಗಿಟಿವ್, ವೈದ್ಯರಿಗೆ ಬಂದ ವರದಿಯಲ್ಲಿ ಪಾಜಿಟಿವ್ ಗೊಂದಲ ಮೂಡಿಸಿದ ವರದಿ ಕಂಗಾಲದ ಯುವಕ.
ಸೋಂಕಿನ ಲಕ್ಷಣಗಳ ಹಿನ್ನಲೆಯಲ್ಲಿ ನಗರದ ಕರಿಬಸಪ್ಪ ಲೇಓಟ್‌ನ 11 ವರ್ಷದ ಯುವಕನೊರ್ವ ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವ ಪರೀಕ್ಷಗೆ ನೀಡಿ ಬಂದಿದ್ದಾನೆ. ಸೋಮವಾರ ಬೆಳಿಗ್ಗೆ ಯುವಕನ ಮೋಬೈಲ್‌ಗೆ ನಿಮ್ಮ ಗಂಟಲು ದ್ರವ ಪರೀಕ್ಷಾ ವರದಿ ನ್ಯಾಗಟೀವ್ ಎಂದು ಬಂದಿದೆ ಎನ್ನುವ ಸಂದೇಶದ ಮೂಲಕ ಯುವಕ ನೆಮ್ಮದಿಯ ಉಸಿರು ಬಿಟ್ಟಿದ್ದಾನೆ.
ಆದರೆ ಸಂಜೆಯಾಗುತ್ತಿದ್ದ0ತೆ ತಾಲೂಕ ಆಡಳಿತಕ್ಕೆ ಬಂದ ವರದಿಯಲ್ಲಿ ಇದೇ ಯುವಕನಿಗೆ ಕರೋನಾ ಪಾಜಿಟಿವ್ ಬಂದಿದ್ದು, ಐಸೋಲೇಷನ್‌ಗೆ ಕರೆತರಲು ಹೋಗಿದ್ದಾರೆ. ಈ ವೇಳೆ ಯುವಕ ತನ್ನ ಮೊಬೈಲ್ ಸಂದೇಶವನ್ನು ತೋರಿಸಿದ್ದಾನೆ. ಜತೆಗೆ ನನಗೆ ಬಂದಿರುವ ವರದಿಯೇ ಸರಿಯಾಗಿದ್ದು, ನಿಮ್ಮ ವರದಿಯ ಬಗ್ಗೆ ಪರಿಶೀಲಿಸಿ ಎಂದು ಮನೆಯವರೊಂದಿಗೆ ಚರ್ಚಿಸಿದಬೇಕಾದ ಅನಿವಾರ್ಯತೆ ತಾಲೂಕ ಆಡಳಿತಕ್ಕೆ ಬಂದೊದಗಿದೆ.
ಇದು ಎರಡನೇ ಬಾರಿ ಎಡವಟ್ಟು: ಈ ಹಿಂದೆಯೂ ಓರ್ವ ಯುವತಿ ವರದಿಯನ್ನು ಸಹ ಇದೇ ರೀತಿ ನೀಡಿ ಗೊಂದಲಕ್ಕೆ ಕಾರಣವಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap