ಲಿಂಗಸೂಗೂರು ತಾಲೂಕಿನಲ್ಲಿ ಗೋಕಟ್ಟೆ ನಿರ್ಮಾಣ ಕಾಮಗಾರಿ

ಸಿರಿನಾಡ ಸುದ್ದಿ, ರಾಯಚೂರು: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಲಕ್ಷಿö್ಮಕಾಂತ ರೆಡ್ಡಿ ಅವರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿಶೇಷವಾಗಿ ಗ್ರಾಮೀಣಾ ಪ್ರದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಲಿಂಗಸುಗೂರು ತಾಲೂಕಿನಲ್ಲಿ ಒಟ್ಟು 34 ಗೋಕಟ್ಟೆಗಳು ಗುರುತಿಸಿರುವ ಪೈಕಿ 27 ಕಾಮಾಗಾರಿಗಳು ಪ್ರಗತಿಯಲ್ಲಿವೆ.
ಈ ಕಾಮಾಗಾರಿಯು ಆಮದಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕೋಮಲಾಪೂರು ಗ್ರಾಮದಲ್ಲಿ ಗೋಕಟ್ಟೆಯನ್ನು ನಿರ್ಮಿಸಲಾಗಿದೆ. ಕಾಮಾಗಾರಿಯಿಂದ ಕೋವಿಡ್-19ರ ಸಾಂಕ್ರಾಮಿಕ ಸೋಂಕಿನಿ0ದ ತತ್ತರಿಸಿದ ಜನರು ಜೀವನ ನಡೆಸಲು ದಿಕ್ಕು ತೋಚದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮದ ಕೂಲಿಕಾರರಿಗೆ ವರದಾನವಾಯಿತು. ಇದರ ಜೊತೆಗೆ ಮಳೆ ನೀರು ಸಂಗ್ರಹಿಸಲು ಗೋಕಟ್ಟೆ ಕಾಮಾಗಾರಿಯು ಸಹಕಾರವಾಗಿದೆ.
ಲಿಂಗಸೂಗೂರು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ್, ಸಂಯೋಜಕ ಬಾಲಪ್ಪ ಐಇಸಿ ಇವರು ಸ್ಥಳದಲ್ಲಿದ್ದು ಕಾಮಗಾರಿಯನ್ನು ಪರಿಶೀಲಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap