ಲಾಕ್ ಡೌನ್ ಸಮಯದಲ್ಲಿ ಕರ್ನಾಟಕದಲ್ಲಿ ನಡೆದಿವೆ 40 ಸಾವಿರ ಮದುವೆ, ಬಳ್ಳಾರಿಯಲ್ಲಿ ಅತ್ಯಧಿಕ!

ಬಳ್ಳಾರಿ: ಕೊರೋನಾ ಸೋಂಕಿನಿ0ದ ರಕ್ಷಿಸಿಕೊಳ್ಳಲು ಮಾರ್ಚ್ ತಿಂಗಳಿನಿ0ದ ಆರಂಭವಾದ ಲಾಕ್ ಡೌನ್ ಮಧ್ಯಭಾಗದಲ್ಲಿ ಸ್ವಲ್ಪ ಸಮಯ ಸಡಿಲಿಕೆ ನೀಡಿದ್ದರೂ ಮತ್ತೆ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಮುಂದುವರಿದಿದೆ.
ಆದರೆ ಈ ಸಮಯದಲ್ಲಿ ಮದುವೆ ಮಾಡಬೇಕೆಂದವರು, ಮದುವೆ ಆಗಬೇಕೆಂದವರು ಕಡಿಮೆ ಸಂಖ್ಯೆಯಲ್ಲಿ ಅತಿಥಿಗಳನ್ನು ಸೇರಿಸಿಯಾದರೂ ಮಾಡಿ ಮುಗಿಸಿದ್ದಾರೆ. ಸಾಮೂಹಿಕ ಮದುವೆ ಕಾರ್ಯಕ್ರಮಗಳು, ಬೃಹತ್ ಸಂಖ್ಯೆಯಲ್ಲಿ ಮದುವೆಗೆ ಜನ ಸೇರುವುದಕ್ಕೆ ಸರ್ಕಾರ ತಡೆ ನೀಡಿದರೂ ಕೂಡ ಮದುವೆ ದಾಖಲಾತಿಗಳ ಪ್ರಮಾಣ ಮಾತ್ರ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಕಡಿಮೆಯೇನೂ ಆಗಿಲ್ಲ ಎನ್ನುತ್ತದೆ ವರದಿ.
ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಕರ್ನಾಟಕ ಸರ್ಕಾರದ ದಾಖಲೆಗಳ ಪ್ರಕಾರ 40 ಸಾವಿರಕ್ಕೂ ಹೆಚ್ಚು ಮದುವೆಗಳಾಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು 12 ಸಾವಿರದಷ್ಟು ಮದುವೆಗಳು ನಡೆದಿವೆಯಂತೆ. ಸಾಮಾನ್ಯವಾಗಿ ಇತರ ಸಮಯಗಳಲ್ಲಾದರೆ ಬಹುತೇಕ ಮದುವೆಗಳು ದಾಖಲಾಗುವುದೇ ಇಲ್ಲ. ಆದರೆ ಈ ಬಾರಿ ಮದುವೆಗೆ ಮುನ್ನ ದಾಖಲಾತಿ ಮಾಡಿಕೊಳ್ಳಲೇಬೇಕಾಗಿದ್ದರಿಂದ ಅಂಕಿಅ0ಶ ಸಿಕ್ಕಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮದುವೆ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾ ವಿವಾಹ ದಾಖಲಾತಿ ಅಧಿಕಾರಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ವರ್ಷ ಲಾಕ್ ಡೌನ್ ನಿರ್ಬಂಧದಿAದಾಗಿ ರಿಜಿಸ್ಟರ್ ಮದುವೆ ಜಾಸ್ತಿಯಾಗಿದೆ. ಕಳೆದ ವರ್ಷ ಬಳ್ಳಾರಿಯಲ್ಲಿ 1,141 ಮದುವೆಗಳು ರಿಜಿಸ್ಟರ್ ಆಗಿದ್ದರೆ, ಕಳೆದ ಮೂರು ತಿಂಗಳಲ್ಲಿ 12,300 ಮದುವೆಗಳು ರಿಜಿಸ್ಟರ್ ಆಗಿವೆ ಎಂದು ಅಧಿಕಾರಿಗಳು ಸಂಖ್ಯೆಯ ಏರಿಕೆ ಬಗ್ಗೆ ಹೇಳುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ವಿಐಪಿ ಕುಟುಂಬದ ಮದುವೆಗಳು, ಬೃಹತ್ ಸಂಖ್ಯೆಯಲ್ಲಿ ಸೇರಿದ ಮದುವೆಗಳು ನೆರವೇರಿವೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಕೂಡ ಮದುವೆಗಳಾಗಿವೆ.
50 ಜನರನ್ನು ಸೇರಿಸಿ ಮದುವೆ ಮಾಡಲು ಯೋಚಿಸಿದ್ದೆವು. ಆದರೆ ಸಂಬAಧಿಕರ ಮಧ್ಯೆ ಭಿನ್ನಾಭಿಪ್ರಾಯ, ಅಸಮಾಧಾನ ಬೆಳೆಯಬಹುದು ಎಂದು ನಿಗದಿಪಡಿಸಿದ್ದ ದಿನಾಂಕವೇ ರಿಜಿಸ್ಟರ್ ಮದುವೆ ಮಾಡಿಸಲು ನಿರ್ಧರಿಸಿದೆವು. ಕೊರೋನಾ ಸಂಕಷ್ಟ ಮುಗಿದ ಮೇಲೆ ಎಲ್ಲರನ್ನೂ ಕರೆದು ಊಟ ಹಾಕಿಸುತ್ತೇವೆ ಎಂದು ಬಳ್ಳಾರಿಯ ನವದಂಪತಿ ಹೇಳುತ್ತಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap