ರೈತರ ಸಮಸ್ಯೆಗೆ ರಾಜಕೀಯ ಮೆರೆತು ಸಹಕಾರ- ಟಿ.ಎಚ್.ಸುರೇಶಬಾಬು.

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಿರಿನಾಡ ಸುದ್ದಿ, ಕುರುಗೋಡು: ರೈತರ ಸಮಸ್ಯೆಗಳ ವಿಚಾರ ಬಂದಾಗ ಜೆಎನ್.ಗಣೇಶ್ ಮತ್ತು ಟಿಹೆಚ್.ಸುರೇಶ್ ಬಾಬು ಇಬ್ಬರು ಪಕ್ಷ ಮರೆತು ಸ್ನೇಹಿತರಾಗಿ ಒಗ್ಗಟ್ಟಿನಿಂದ ನಿಂತು ರೈತರಿಗೆ ಸಹಕಾರ ಮಾಡುತ್ತೇವೆ ಎಂದು ಮಾಜಿ ಶಾಸಕ ಟಿಹೆಚ್.ಸುರೇಶ್ ಬಾಬು ಕರೆ ನೀಡಿದರು.
ತಾಲೂಕಿನ ದಮ್ಮೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಹಕಾರಿ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್‌ರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಷೇತ್ರದಲ್ಲಿರುವ ನಮಗೆ ರಾಜಕೀಯ ವಿಚಾರ ಬಂದಾಗ ಮಾತ್ರ ರಾಜಕೀಯ ಮಾಡುತ್ತೇವೆ. ಆದರೆ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಯ ಸಮಯದಲ್ಲಿ ಇಬ್ಬರು ಸೇರಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಅಚ್ಚರಿ ಮೂಡಿಸಿದರು.
ನಂತರ ಶಾಸಕ ಜೆಎನ್.ಗಣೇಶ್ ಮಾತನಾಡಿ, ರಾಜಕೀಯನೇ ಬೇರೆ, ಕ್ಷೇತ್ರದ ಅಭಿವೃದ್ಧಿಯೇ ಬೇರೆ ಒಟ್ಟಾರೆ ರೈತರಿಗೆ ಒಳ್ಳೆಯದು ಆಗಬೇಕು. ಈಗ ತುಂಗಾಭದ್ರ ಜಲಾಶಯದಿಂದ ನೀರಿನ ತೊಂದರೆಯಾಗುವ ಸಾಧ್ಯತೆಗಳಿವೆ, ಆಗಾಗಿ ರೈತರಿಗೆ ನೀರಿನ ಅನುಕೂಲವಾಗುವಂತೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಇಬ್ಬರೂ ಸೇರಿ ಮಾಡುತ್ತೇವೆ ಎಂದರು. ದಮ್ಮೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆನೇಕ ರೈತರಿಗೆ ಸಹಾಯವಾಗುತ್ತದೆ ಮತ್ತು ಸಂಘದ ವತಿಯಿಂದ ಶಾಲೆಗಳಿಗೆ ಹಾಗೂ ಗ್ರಾಮಕ್ಕೆ ನೆರವು ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗೆ ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಜರುಗಲಿ ಎಂದರು.
ಪ್ರಾರAಭದಲ್ಲಿ ಸಂಘದ ಆವರಣದಲ್ಲಿ ಸಹಕಾರಿ ಪಿತಾಮಹ ಶ್ರೀ ಸಿದ್ದನಗೌಡ ಸಣ್ನರಾಮನಗೌಡ ಪಾಟೀಲ್ ರವರ ಪ್ರತಿಮೆ ಅನಾವರಣವನ್ನು ಶಾಸಕ ಜೆಎನ್.ಗಣೇಶ್ ಮತ್ತು ಮಾಜಿ ಶಾಸಕ ಟಿಹೆಚ್.ಸುರೇಶ್ ಬಾಬು ಇಬ್ಬರು ಸೇರಿ ನೆರೆವೇರಿಸಿದರು.
ತದನಂತರ ವೇದಿಕೆಯಲ್ಲಿ ಅಥಿತಿಗಳಿಗೂ ಹಾಗೂ ಸಂಘದ ಆಡಳಿತದ ಸದಸ್ಯರಿಗೂ ಹಾಗೂ ಸಿಬ್ಬಂದಿಗಳಿಗೂ ಸನ್ಮಾನಿಸಿ ಗೌರವಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಮಂಜುನಾಥ ರೆಡ್ಡಿ ಮಾತನಾಡಿ, ಶಾಸಕರು ಹಾಗೂ ಮಾಜಿ ಶಾಸಕರು ಒಂದೇ ವೇದಿಕೆಯನ್ನು ಹಂಚಿಕೊAಡು ಸಂಘಕ್ಕೆ ಸ್ನೇಹಿತರಂತೆ ಸಹಕಾರ ನೀಡುತ್ತೇವೆ ಎಂದು ತಿಳಿಸಿರುವುದು ಸಂತಸವಾಗಿದೆ ಎಂದರು.
ಸAಘದ ಮುಖ್ಯಕಾರ್ಯನಿರ್ವಹಕರಾದ ಎಸ್‌ಎಮ್.ರೇವಣಸಿದ್ದಯ್ಯ ಪ್ರಾಸ್ತವಿಕ ನುಡಿ ನುಡಿದರು.
ವೇದಿಕೆಯಲ್ಲಿ ತಾಪಂ. ಸದಸ್ಯೆ ಬಿ.ಸುಮಂಗಳ ತಿಮ್ಮಾರೆಡ್ಡಿ, ಸಹಕಾರ ಸಂಘದ ಉಪನಿಬಂಧಕರು ಡಾ.ಸುನೀತಾ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಐನಾಥರೆಡ್ಡಿ, ಎಪಿಎಂಸಿ ಅಧ್ಯಕ್ಷ ಬೇಸೆಜ್ ರೆಡ್ಡಿ, ಸಂಘದ ಉಪಾಧ್ಯಕ್ಷ ಡಿ.ಸುಗ್ರೀವಪ್ಪ, ಸಂಘದ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap