ರೈತರು ಸ್ವಯಂ ವೆಚ್ಚದಲ್ಲಿ ಕಾಲುವೆ ಸ್ವಚ್ಚತೆ ಕಾರ್ಯ. ಆಧಿಕಾರಿಗಳ ನಿರ್ಲಕ್ಷೆö್ಯಗೆ ರೈತರ ಆಕ್ರೋಶ.

ಸಿರಿನಾಡ ಸುದ್ದಿ, ಕುರುಗೋಡು: ಕಾಲುವೆಯ ಕೊನೆಭಾಗದ ರೈತರ ಜಮೀನಿಗಳಿಗೆ ಸಮರ್ಪಕ ನೀರು ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷೆö್ಯವಹಿಸಿದ್ದರಿಂದ ಬೇಸತ್ತ ರೈತರು ತಾವೇ ಖುದ್ದಾಗಿ ಯಂತ್ರಗಳನ್ನು ಬಳಸಿ ಕಾಲುವೆಯಲ್ಲಿನ ಹುಳು ತಗೆಯುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರಾ ಎಲ್.ಎಲ್.ಸಿ.ವಿತರಣೆ (ಸೋಮಲಾಪುರ ಬಳಿ) ಭಾಗದ ಸೂಗುರು ಮುಖ್ಯ ಕಾಲುವೆಯ ಕೊನೆಯ ಭಾಗದ (7 ರಿಂದ 8ಕಿ.ಲೋ) ಉದ್ದಕ್ಕೂ ತಳದಲ್ಲಿ ಪಾಚಿಗಟ್ಟಿ ಮಣ್ಣು ಸಂಗ್ರಹಣೆ ಅವರಿಸಿರು ಕಾಲುವೆ ಪಕ್ಕದ ಎರಡು ಕಡೆ ಜೋತು ಬಿದ್ದು ಮುಳ್ಳುಗಿಡ-ಗಂಟಿ ಬೆಳೆದಿರು ಪೊದೆ ಕೂಡಿದು,್ದ ಕಾರಣ ಕೊನೆ ಭಾಗದಲ್ಲಿನ ದೊಡ್ಡರಾಜು, ರಾಮಚಂದ್ರಪುರ, ಕ್ಯಾಂಪಿನ ಕೊನೆ ಭಾಗದ ನೂರಾರು ಎಕ್ಕರೆಗೆ ಬೆಳೆಗಳಿಗೆ ಉಳಿಸಿ ಕೊಳ್ಳಲು ಕಾಲುವೆ ಸ್ವಚ್ಚಕ್ಕೆ ಕೈ ಹಾಕಿರುವುದು ಗಮನರ್ಹವಾಗಿದೆ. ಕಳೆದ ಎರಡು-ಮೂರು ದಿನಗಳಿಂದ ಕಾಲವೆ ನೀರು ತಾತ್ಕಲಿಕವಾಗಿ ನಿಲುಗಡೆ ಮಾಡಿ ರಾತ್ರಿ – ಹಗಲು ರೈತರ ಶ್ರಮವಹಿಸಿದ್ದಾರೆ.
ಪ್ರತಿವರ್ಷ ಕಾಲುವೆ ಹೂಳು ತೆಗೆಲು ಕೊನೆ ಭಾಗದ ರೈತರು ಮುಂದಾಗಿದ್ದಾರೆ ಈ ಉಳಿನ ಬಗ್ಗೆ ಸಂಬ0ದಿಸಿದ ಆಧಿಕಾರಿಗಳಿಗೆ ಗಮನಕ್ಕೆ ಪ್ರತಿ ವರ್ಷ ತಂದರೂ ಯಾವುದೇ ಪ್ರತಿಕ್ರೀಯೆ ಸಹಕರಿಸದೇ ರೈತರಿ ನೋವಿನ ಸಂಗತಿಯಾಗಿದೆ ಎಂದು ದೊಡ್ಡರಾಜ ಕ್ಯಾಂಪ್‌ನ ಸೂರ್ಯನಾರಾಯಣ ರಾಜು ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಚಂದ್ರಪ್ಪ, ತಿರುಪತಿಯ್ಯ, ಶಿವರಾಮರಾಜು, ನಾರಾಯಣರಾಜು, ರಾಮ ಚಂದ್ರಕ್ಯಾ0ಪು, ಹಾಗೂ ತಿಮ್ಮನಕೇರಿ, ದೊಡ್ಡರಾಜು ಕ್ಯಾಂಪು. ಎಮ್ಮಿಗನೂರು, ಪ್ರಗತಿಪರ ರೈತರು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap