ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ

ಸಿರಿನಾಡ ಸುದ್ದಿ, ಸಿರುಗುಪ್ಪ: ರೈತರಿಗೆ ವಾರ್ಷಿಕ ಬೆಳೆ ಬೆಳೆಯಲು ಅನುಕೂಲ ವಾಗುವಂತೆ ಬ್ಯಾಂಕ್ ವತಿಯಿಂದ ರೈತರಿಗೆ ೧ಲಕ್ಷ ೬೦ಸಾವಿರ ರೂ.ಗಳಿಂದ ೩ ಲಕ್ಷ ರೂಪಾಯಿ ವರೆಗೆ ಬೆಳೆ ಸಾಲ ವನ್ನು ಶೇ೪ರ ಬಡ್ಡಿದರದಲ್ಲಿ ಸಾಲ ಮರು ಪಾವತಿಸಲು ಹನ್ನೆರಡು ತಿಂಗಳು ಕಾಲವಕಾಶ ಇದ್ದು ನೇರವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ಗಳ ಮೂಲಕ ರೈತರು ಸಾಲ ಪಡೆಯ ಬಹುದಾಗಿದೆ ಎಂದು ತಾ.ಸಹಾಯಕ ಕೃಷಿ ನಿರ್ದೇಶಕ ಏನ್. ನಜೀರ್ ಅಹ್ಮದ್ ತಿಳಿಸಿದರು
ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕೃಷಿ ಇಲಾಖೆ ವತಿಯಿಂದ ರೈತ ಪಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಿ ಮಾತನಾಡಿ, ಕೇಂದ್ರ ಸರಕಾರ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ £ಧಿ ಯೋಜನೆ ಜಾರಿಗೆ ತಂದಿ ದ್ದು, ಈ ಯೋಜನೆಯಡಿ ರೈತ ಫಲಾನು ಭವಿಗಳ ಉಳಿತಾಯ ಖಾತೆಗಳಿಗೆ ನೇರವಾ ಗಿ ಕೇಂದ್ರದಿAದ ವಾರ್ಷಿಕ ಆರು ಸಾವಿರ ರೂಪಾಯಿ ಸಹಾಯಧನ ಹಾಗೂ ಸರ ಕಾರದ ನಾಲ್ಕು ಸಾವಿರ ರೂಪಾಯಿ ಒಟ್ಟು ಹತ್ತು ಸಾವಿರ ರೂಪಾಯಿ ರೈತರ ಆಧಾರ್ ಲಿಂಕ್ ಖಾತೆಗಳಿಗೆ ಜಮಾ ಆಗಿದೆ ಎಂದು ತಿಳಿಸಿದರು
ಬ್ಯಾಂಕಿನ ವ್ಯವಸ್ಥಾಪಕ ಸಲೀಂ ಮಾತನಾಡಿ, ರೈತರು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರೆಯುವ ಯೋಜನೆ ಯನ್ನು ಬಳಸಿಕೊಂಡು ಬ್ಯಾಂಕ್‌ನಿAದ ಅರ್ಥಿಕ ಸಾಲ ಸೌಲಭ್ಯದ ಲಾಭ ಪಡೆದು ಸಕಾಲದಲ್ಲಿ ಸಾಲವನ್ನು ಮರು ಪವಾತಿ ಸುವ ಮೂಲಕ ಯೊಜನೆಯ ಸದುಪ ಯೋಗ ಪಡಿಸಿಕೊಳಿ ಎಂದು ತಿಳಿ ಸಿದರು.
ಸಹಾಯಕ ಕೃಷಿ ಅಧಿಕಾರಿಗಳಾದ ಹೇಮ ಲ್ಯ ನಾಯಕ್ ಸೇರಿದಂತೆ ಗ್ರಾಮದ ರೈತರು ಇದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap