“ರಾಕಿ ಎಂಬುದು ಕೇವಲ ಸಂಕೇತವಲ್ಲ ಅದೊಂದು ಅಣ್ಣ-ತಂಗಿ ಬಾಂಧವ್ಯದ ಬೆಸುಗೆ”- ಬಸವರಾಜ ಹೊಸಮನಿ

ಸಹೋದರ ಸಹೋದರಿಯರ ನಡುವೆ ಇರುವ ಪವಿತ್ರ ಬಾಂಧವ್ಯ ವರ್ಣಾತೀತ ಒಂದೇ ಹೊಟ್ಟೆಯಲ್ಲಿ ಹುಟ್ಟಿ ಒಂದೇ ರಕ್ತ ಹಂಚಿಕೊಂಡು ಬಂದ ಸಂಬಂಧ ರಕ್ತಸಂಬಂಧ ಎನಿಸಿಕೊಳ್ಳುತ್ತದೆ ಇಂತಹ ಒಂದು ಪವಿತ್ರ ಸಂಬಂಧಕ್ಕೆ ಹಿಂದೂಧರ್ಮದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ ಅಂತೆಯೇ ಶ್ರಾವಣ ಮಾಸದ ಮೊದಲ ಹಬ್ಬ ಹುಣ್ಣಿಮೆಯ ದಿನ ರಕ್ಷಾಬಂಧನ ಎನ್ನುವ ಹಬ್ಬವನ್ನು ಆಚರಿಸಲಾಗುವುದು ಈ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ ಈ ಹಬ್ಬ ಹೇಗೆ ಬಂತು? ಏಕೆ ಆಚರಿಸುತ್ತಾರೆ? ಎನ್ನುವ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ ಇವುಗಳಿಗೆ ವಿವಿಧ ಕಥೆ ಪುರಾಣಗಳ ಇತಿಹಾಸವಿರುವುದು ನಾವು ಕಾಣಬಹುದು
ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಹಣೆಗೆ ತಿಲಕವನ್ನಿಟ್ಟು ಸಹೋದರನ ಆಶೀರ್ವಾದವನ್ನು ಬೇಡುತ್ತಾರೆ ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬ ಇದಾಗಿದೆ
ರಕ್ಷಾ ಬಂಧನ ಹಬ್ಬವನ್ನು “ಯಜೂರ್ ಉಪಕರ್ಮ” ಎಂದು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಈ ದಿನಕ್ಕೆ ಮತ್ತೊಂದು ವಿಶೇಷವಿದೆ ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ರಕ್ಷಾಬಂಧನ ಅಥವಾ ರಾಕಿ ಹಬ್ಬವನ್ನು ಇದೀಗ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ಮನದಲ್ಲಿ ಮೂಡಿಸುತ್ತದೆ ರಕ್ಷಾಬಂಧನ ಆಚರಣೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿ ಎಡೆಗೆ ತನ್ನ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಿ ಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದ
“ಪೌರಾಣಿಕ ಹಿನ್ನೆಲೆ”
ಇಂದು ರಕ್ಷಾಬಂಧನವನ್ನು ಕೇವಲ ಒಡಹುಟ್ಟಿದ ಅಣ್ಣ ತಂಗಿಯರು ಮಾತ್ರ ಆಚರಿಸುವ ಹಬ್ಬ ವಾಗಿರಲಿ ಪ್ರತಿ ಹೆಣ್ಣು ಕೂಡ ತನ್ನ ರಕ್ಷಣೆಗಾಗಿ ತಾನು ನಂಬಿರುವ ಹಾಗೂ ವಿಶ್ವಾಸವಿರುವ ಗಂಡಿಗೆ ರಾಖಿ ಕಟ್ಟುವುದು ಸಾಮಾನ್ಯವಾಗುತ್ತಿದೆ ಈ ಬದಲಾವಣೆ ಹೊಸತೇನಲ್ಲ
“ಮಹಾಭಾರತದಲ್ಲಿ ಶ್ರೀಕೃಷ್ಣನ ರಾಜ್ಯದ ಪ್ರಜೆಗಳಿಗೆ ತೊಂದರೆ ನೀಡುತ್ತಿದ್ದ ರಾಜಾ ಶಿಶುಪಾಲನನ್ನು ಯುದ್ಧದಲ್ಲಿ ಕೊಂದ ನಂತರ ಆತನ ಬೆರಳಿನಲ್ಲಿ ರಕ್ತ ಸುರಿಯುತ್ತಿರುವುದನ್ನು ಕಂಡ ದ್ರೌಪದಿಯು ತನ್ನ ಸೀರೆಯ ಸೆರಗಿನ ಅಂಚನ್ನು ಹರಿದು ಆ ಬಟ್ಟೆಯನ್ನು ಶ್ರೀಕೃಷ್ಣನ ಮಣಿಕಟ್ಟಿಗೆ ಕಟ್ಟಿ ರಕ್ತಸ್ರಾವವನ್ನು ನಿಲ್ಲಿಸುತ್ತಾಳೆ ಈ ಗಳಿಗೆಯಲ್ಲಿ ಶ್ರೀಕೃಷ್ಣನ ದ್ರೌಪದಿಗೆ ಮೇಲಿರುವ ಅನುಕಂಪ ವಾತ್ಸಲ್ಯವನ್ನು ಆಕೆಯನ್ನು ತಂಗಿ ಎಂಬ ಭಾವದಿಂದ ನೋಡಿ ನಿನಗೆ ಕಷ್ಟ ಬಂದಾಗ ನಿನ್ನ ಸಹಾಯಕ್ಕೆ ಸದಾ ನಾನು ಇರುತ್ತೇನೆ ಎಂದು ಪ್ರಮಾಣ ಮಾಡುತ್ತಾನೆ ಅದರಂತೆ ಮುಂದೆ ಹಲವು ವರ್ಷಗಳ ತರುವಾಯ ಪಾಂಡವರ ಮತ್ತು ಕೌರವರ ನಡುವೆ ಮೋಸದ ಜೂಜಾಟದಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಪಾಂಡವರು ಸೋತ ಸಂದರ್ಭದಲ್ಲಿ ಕೌರವರ ನಾಯಕ ದುರ್ಯೋಧನ ಆಜ್ಞೆಯಂತೆ ಅವನ ತಮ್ಮ ದುಶ್ಯಾಸನ ದ್ರೌಪದಿಯ ವಸ್ತ್ರ ಪರಣ ಮಾಡಲು ಮುಂದಾಗುತ್ತಾನೆ ಆಗ ದ್ರೌಪದಿಯು ಶ್ರೀಕೃಷ್ಣ ನನ್ನ ಜಪಿಸಿ ಪ್ರಾರ್ಥನೆ ಮಾಡುತ್ತಾಳೆ ತಕ್ಷಣವೇ ಶ್ರೀಕೃಷ್ಣ ಆಕಿಗೆ ರಕ್ಷಾ ಕವಚವಾಗಿ ರಕ್ಷಣೆಯನ್ನು ನೀಡುತ್ತಾನೆ ಇದು ಅಣ್ಣನಾದವನು ತನ್ನ ತಂಗಿಯ ರಕ್ಷಣೆಗಾಗಿ ಸದಾ ಸಿದ್ಧನಿರುತ್ತಾನೆ ಎಂಬುದಕ್ಕೆ ಒಂದು ನಿದರ್ಶನ
“ರಕ್ಷಾಬಂಧನ ಆಚರಣೆಯ ಹಿಂದಿನ ಒಂದು ಕಥೆ”
ಒಮ್ಮೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಯುದ್ಧವಾಗುತ್ತದೆ ಯುದ್ಧದ ಸಮಯದಲ್ಲಿ ದೇವತೆಗಳು ಸೋಲುವ ಘಟ್ಟ ತಲುಪುತ್ತಾರೆ ಸೋಲುವ ಭೀತಿಯಿಂದ ಇಂದ್ರದೇವನ ಬೃಹಸ್ಪತಿಯ ಮೊರೆ ಹೋಗುತ್ತಾನೆ ಇಂದ್ರನ ಮೊರೆ ಕೇಳಿದ ಬೃಹಸ್ಪತಿ ದೇವರು ಇಂದ್ರನ ಪತ್ನಿ ಇಂದ್ರಾಣಿ ಗೆ ಸಲಹೆ ನೀಡುತ್ತಾನೆ ಬೃಹಸ್ಪತಿಯ ಸಲಹೆಯಂತೆ ಇಂದ್ರಾಣಿ ರೇಷ್ಮೆಯ ದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜಯದ ಸಂಕೇತವಾಗಿ ಇಂದ್ರನ ಕಟ್ಟುತ್ತಾಳೆ ನಂತರ ಇಂದ್ರ ಯುದ್ಧದಲ್ಲಿ ಜಯ ಸಾಧಿಸುತ್ತಾರೆ ಹಿನ್ನೆಲೆಯಲ್ಲಿ ರಜಪೂತರು ಯುದ್ಧ ಸಮಯದಲ್ಲಿ ಹೊರಡುವಾಗ ಗಂಡುಮಕ್ಕಳ ಹಣೆಗೆ ವೀರ ತಿಲಕವನ್ನಿಟ್ಟು ಗೆದ್ದು ಬನ್ನಿ ಎಂದು ಹಾರೈಸಿ ವಿಜಯದ ಸಂಕೇತವಾಗಿ ಬಲಗೈಗೆ ರೇಷ್ಮೆ ದಾರವನ್ನು ಕಟ್ಟಿ ಜಯ ಸಾಧಿಸಲೆಂದು ಹಾರೈಸುತ್ತಿದ್ದರು ಹಿಂದೂ ರಾಣಿಯರು ಸಹ ರಾಜನಿಗೆ ರಾಖಿಯನ್ನು ಕಟ್ಟಿ ಸಹೋದರತೆಯ ಸಂಬಂಧ ಬೆಳೆಸುತ್ತಿದ್ದರು ಇದರಂತೆ ರಾಕಿ ಭಾವನಾತ್ಮಕ ಸಂಕೇತವಾಗಿ ರಾಜರು ಸಹೋದರಿಯರ ರಕ್ಷಣೆಗೆ ನಿಲ್ಲುತ್ತಿದ್ದರು ಎಂದು ಕಾಲಕಳೆದಂತೆ ಸಂಪ್ರದಾಯವಾಗಿ ಬೆಳೆಯತೊಡಗಿ ರಕ್ಷಾಬಂಧನ ವಾಗಿದೆ
“ಶಾಂತಿನಿಕೇತನದಲ್ಲಿ ರಾಕಿ ಉತ್ಸವ”
ಇತ್ತೀಚಿಗೆ ಪಾದ್ರಿಗಳು ಭಕ್ತರಿಗೆ ಹೆಂಡತಿ ಗಂಡನಿಗೆ ಹುಡುಗಿ ಹುಡುಗನಿಗೆ ಶಿಷ್ಯರು ಗುರುಗಳಿಗೆ ರಾಖಿ ಕಟ್ಟುವ ಮೂಲಕ ತಮ್ಮ ರಕ್ಷಣೆ ಹಾಗೂ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಇಂತಹ ಒಂದು ಪ್ರಯತ್ನಕ್ಕೆ ರವೀಂದ್ರನಾಥ ಟಾಗೋರರು ಶಾಂತಿನಿಕೇತನದಲ್ಲಿ ಮಹೋತ್ಸವದಲ್ಲಿ ಉತ್ತೇಜನ ನೀಡಿದರು ಮಾನವರ ನಡುವೆ ಸಹೋದರ ಮನೋಭಾವ ಮಾನವೀಯತೆ ಹಾಗೂ ಉತ್ತಮ ಬಾಂಧವ್ಯ ಬೆಸೆಯಲು ಇರುವ ಮಾರ್ಗ ಇದೊಂದೆ ಎಂದು ಅವರು ನಂಬಿದ್ದರು ಅದರಂತೆ ಅಂದಿನಿಂದ ನೆರೆಹೊರೆಯವರು ಸ್ನೇಹಿತರು ಹಾಗೂ ಸಂಬಂಧಿಗಳ ನಡುವೆಯೂ ರಾಖಿ ಕಟ್ಟುವ ಆಚರಣೆಗೆ ಹೆಚ್ಚು ಒತ್ತು ನೀಡಿದರು
“ಹುಡುಗಾಟದ ಆಚರಣೆ ಯಾಗುತ್ತಿರುವ ರಕ್ಷಾಬಂಧನ”
ಇತ್ತೀಚಿನ ದಿನಗಳಲ್ಲಿ ರಕ್ಷಾಬಂಧನ ಎಂಬುದು ಹುಡುಗಾಟಿಕೆಯ ವಸ್ತುವಾಗಿ ಬಳಸಲಾಗುತ್ತದೆ ಸಹಶಿಕ್ಷಣ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಹುಡುಗಿಯರು ಹುಡುಗರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ತಾತನಿಗೆ ರಾಖಿ ಕಟ್ಟುವುದು ಹಾಗೂ ಹುಡುಗನೊಬ್ಬ ಪ್ರೇಮಿ ಸುವುದಾಗಿ ಹೇಳಿದಾಗ ಇಷ್ಟವಿಲ್ಲದಿದ್ದರೆ ಆತನ ಮನಸ್ಸಿಗೆ ನೋವಾಗದಂತೆ ನಾಜೂಕಾಗಿ ಆತನ ಕೈಗೆ ರಾಖಿ ಕಟ್ಟುವ ಮೂಲಕ ಪ್ರೇಮವನ್ನು ತಿರಸ್ಕರಿಸಿ ನಾವಿಬ್ಬರೂ ಅಣ್ಣ- ತಂಗಿಯ ರಾಗಿ ಸ್ನೇಹಿತರಾಗಿ ಇರೋಣ ಎಂದು ಹೇಳುವ ಹುಡುಗರು ಚುಡಾಯಿಸಿದರೆ ಆತನಿಗೆ ರಾಖಿ ಕಟ್ಟಿ ಬೆದರಿಸುವ ಮಟ್ಟಕ್ಕೆ ರಕ್ಷಾಬಂಧನ ತಲುಪಿದೆ ಇಷ್ಟಾದರೂ ಸಹ ರಕ್ಷಾ ಬಂಧನ ಹಬ್ಬ
ತನ್ನ ಪಾವಿತ್ರತೆ ಕಳೆದುಕೊಳ್ಳದೆ ಒಳ್ಳೆಯ ರೀತಿಯಲ್ಲಿ ಹೆಣ್ಣಿನ ರಕ್ಷಣೆಗೆ ನಿಂತಿರುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ
ಇನ್ನೂ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ಈ ರಕ್ಷಾ ಬಂಧನ ಹಬ್ಬ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಆಚರಣೆಯಲ್ಲಿದೆ ಯಾವುದೇ ಜಾತಿ ಭೇದ ಭಾವ ವೆನ್ನುವ ಅಡೆತಡೆಗಳಿಲ್ಲದೆ ಪ್ರತಿಯೊಬ್ಬರೂ ಆಚರಿಸಬಹುದಾದ ಹಬ್ಬವೇ ರಕ್ಷಾಬಂಧನ
ರಕ್ಷ ಎಂದರೆ ರಕ್ಷಿಸು ಹಾಗೂ ಬಂಧನ ಎಂದರೆ ಬಾಂಧವ್ಯ ಅಥವಾ ಬದ್ಧತೆ ಹೀಗೆ ಒಡಹುಟ್ಟಿದ ಅಣ್ಣ ತಂಗಿ ನಡುವಿನ ಸಂಬಂಧ ಇರಲೆಂದು ಹಾಗೂ ಅಣ್ಣನಾದವನು ತನ್ನ ರಕ್ಷಣೆಗೆ ಇರಬೇಕೆಂದು ಆಶಿಸಿ ತಂಗಿ ಅಣ್ಣನಿಗೆ ಕಟ್ಟುವ ದಾರವೇ ರಕ್ಷಾ ಬಂಧನ
ಜೀವನದಲ್ಲಿ ಸದ್ಗುಣಿ ಆಗಿ ಬದುಕಲು ಅಥವಾ ಜೀವನ ಸಾಗಿಸಲು ಒಂದು ಧಾರ್ಮಿಕ ರೀತಿನೀತಿಗಳು ಇರುತ್ತವೆ ಅನುಗುಣವಾಗಿಯೇ ತಮ್ಮ ಕೆಲಸ ಜವಾಬ್ದಾರಿ ಹಾಗೂ ಪಾಲನೆಯನ್ನು ಮಾಡಿದರೆ ಬದುಕು ಉತ್ತಮವಾಗುತ್ತದೆ ಎಂದು ಹೇಳುತ್ತಾರೆ ನಿಯಮಗಳನ್ನು ಪಾಲನೆ ಮಾಡಿದರೆ ಶಿವನ ಅನುಗ್ರಹಕ್ಕೆ ಒಳಗಾಗುತ್ತಾರೆ ಎಂದು ಋಷಿಮುನಿಗಳು ಹೇಳುತ್ತಾರೆ
ಈ ಹಬ್ಬ ಪುರಾತನಕಾಲದಿಂದಲೂ ವಿವಿಧ ಕಥೆಯ ಹಿನ್ನೆಲೆಯಲ್ಲಿ ಹಾಗೂ ವಿಶೇಷ ಸಂಗತಿಗಳಾಗಿ ಆಚರಿಸಲಾಗುತ್ತದೆ ಈ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವುದು ನಮ್ಮ ಕರ್ತವ್ಯ ಅಂತೆಯೇ ಸಹೋದರ ಸಹೋದರಿಯರ ನಡುವೆ ಪ್ರೀತಿ ವಿಶ್ವಾಸ ನಂಬಿಕೆ ಪರಸ್ಪರ ರಕ್ಷಣೆಯ ಭದ್ರತಾ ಭಾವನೆ ನೀಡುವುದು ಇಬ್ಬರ ಕರ್ತವ್ಯವಾಗಬೇಕು ಆಗಲೇ ಆಚರಣೆ ಹಾಗೂ ಹಬ್ಬಕ್ಕೂ ಒಂದು ಮಹತ್ವದ ಅರ್ಥ ದೊರೆಯುವುದು ಹಾಗೆಯೇ
ಆತ್ಮೀಯರೇ ಒಂದು ವಿಶೇಷ ಸೂಚನೆ ಮತ್ತು ಮನವಿ ಈ ಬಾರಿ ಮಾರುಕಟ್ಟೆಯಲ್ಲಿ ಸಿಗುವ ಚೀನಾ ನಿರ್ಮಿತ ರಾಖಿಗಳನ್ನು ಖರೀದಿಸದೆ ಭಾರತದಲ್ಲಿಯೇ ತಯಾರಿಸಿದ ರಾಖಿಗಳನ್ನು ಖರೀದಿಸೋಣ ಸ್ವದೇಶಿ ಮಂತ್ರವನ್ನ ಎಲ್ಲರೂ ಪಾಲಿಸೋಣ
ಎಲ್ಲಾ ಸಹೋದರ ಸಹೋದರಿಯರಿಗೆ ರಕ್ಷಾಬಂಧನ ಹಬ್ಬದ ಶುಭಾಶಯಗಳು
ಧನ್ಯವಾದಗಳು ಜೈ ಹಿಂದ್
ಬಸವರಾಜ ಹೊಸಮನಿ
ಶಿಕ್ಷಕರು ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆ ನವನಗರ ಮರ್ಲಾನಹಳ್ಳಿ
ತಾ. ಕಾರಟಗಿ ಜಿ. ಕೊಪ್ಪಳ
8095149169

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap