ರವಿ ಬೆಳಗೆರೆಗೆ ಶ್ರದ್ಧಾಂಜಲಿ, ನುಡಿ ನಮನ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಿರಿನಾಡ ಸುದ್ದಿ, ಕುರುಗೋಡು: ತಮ್ಮದೇ ಶೈಲಿಯ ಬರಹಗಳಿಂದ ಅಪಾರ ಓದುಗಾರರನ್ನು ಸಂಪಾದಿಸಿ, ಅಕ್ಷರ ಮಾಂತ್ರಿಕ, ಗಾರುಡಿಗ ಎಂದೇ ಪ್ರಸಿದ್ದಿ ಪಡೆದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಬರಹಗಳು ಚಿರಸ್ಮರಣೀಯ ಎಂದು ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವೀರಭದ್ರಗೌಡ ತಿಳಿಸಿದರು.
ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿನ ವಿದ್ಯಾ ವಸತಿ ಶಾಲೆಯ ಆವರಣದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಮ್ಮಿಕೊಂಡಿದ್ದ ಖ್ಯಾತ ಬರಹಗಾರ ಹಾಗೂ ಸಾಹಿತಿ ರವಿ ಬೆಳಗೆರೆಗೆ ನುಡಿ ನಮನ ಸಂತಾಪ ಸಭೆಯಲ್ಲಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬ್ಲಾಕ್ ಮತ್ತು ವೈಟ್ ನ ಮೂಲಕ ಭೂಗತ ಲೋಕದ ರಹಸ್ಯ ಬಿಚ್ಚಿಟ್ಟು ಬೆರಗು ಮೂಡಿಸಿದ್ದು. ಯುವ ಮನಸ್ಸುಗಳಿಗೆ ಓ ಮನಸ್ಸೆ ಪಾಕ್ಷಿಕ ಪತ್ರಿಕೆಯಿಂದ ಅನೇಕ ಓದುಗಾರರನ್ನು ಸೃಷ್ಠಿಸಿದ ಮಹಾನ್ ಖ್ಯಾತ ಮೇಧಾವಿ ಬರಹಗಾರ ನಮ್ಮಿಂದ ದೂರವಾಗಿರಬಹುದು, ಆದರೆ ಅವರ ಬರಹಗಳು ಇನ್ನೂ ಜೀವಂತವಾಗಿರುತ್ತವೆ.
ಪತ್ರಕರ್ತ ಜಾನೂರು ರಾಜಸಾಬ್ ಮಾತನಾಡಿ, ರವಿ ಬೆಳಗೆರೆ ಸೃಷ್ಟಿಸಿದ ಬರಹದ ಅಲೆಗೆ ಎಷ್ಟೋ ಯುವ ಜನರು ಓದುಗಾರರಾಗಿ ಹಾಗೂ ಪತ್ರಿಕೋದ್ಯಮತ್ತ ಸುಳಿದಿರುವುದು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯಾಗಿದೆ. ಇಂತಹ ಖ್ಯಾತ ಪತ್ರಕರ್ತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.
ಮೊದಲಿಗೆ ದಿ|| ರವಿ ಬೆಳಗೆರೆ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ಪೂಜೆ ಸಲ್ಲಿಸಿ, ಮೌನ ಆಚರಣೆ ನಡೆಸಿ, ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಮಾರೆಪ್ಪ, ಎಂ.ಅಣ್ಣಯ್ಯ ಸ್ವಾಮಿ, ಎನ್.ಸಿದ್ದಪ್ಪ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಮುಷ್ಟಗಟ್ಟೆ ಭೀಮನಗೌಡ, ಶಿಕ್ಷಕ ಬಸವನಗೌಡ, ಹುಲಗಪ್ಪ ಹಾಗೂ ಇತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap