ಯುವ ಪರಿವರ್ತಕರ ಹುದ್ದೆ: ಅರ್ಜಿ ಅಹ್ವಾನ

ಬಳ್ಳಾರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಿಮ್ಹಾನ್ಸ್‍ನ ಜನ ಆರೋಗ್ಯ ಕೇಂದ್ರದ ಎಪಿಡೀಮಿಯಾಲಜಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಯುವಸ್ಪಂದನ ಕಾರ್ಯಕ್ರಮವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದ್ದು ಈ ಯೋಜನೆ ಮೂಲಕ ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳನ್ನು ಒದಗಿಸಲು ಯುವ ಸ್ಪಂದನ ಕೇಂದ್ರದಲ್ಲಿ ಗೌರವಧನದ ಆಧಾರದ ಮೇರೆಗೆ ಯುವ ಪರಿವರ್ತಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಹ ಯುವಕ ಮತ್ತು ಯುವತಿಯರು ಯಾವುದೇ ಪದವಿ ಹಾಗು ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿದ್ದು, 21 ರಿಂದ 35 ವರ್ಷಗಳ ವಯೋಮಿತಿ ಹೊಂದಿದ್ದು, ಕನ್ನಡ ಸ್ಪಷ್ಟವಾಗಿ ಮಾತನಾಡಲು, ಸಂವಹನ ಕಲೆ ಕೌಶಲ್ಯ ಹೊಂದಿರಬೇಕು ಹಾಗೂ ಸಮುದಾಯದಲ್ಲಿ ಕೆಲಸ ಮಾಡಿದವರಿಗೆ ಮೊದಲ ಆದ್ಯತೆ ಇದ್ದು ಅಗತ್ಯ ದಾಖಲಾತಿಗಳೊಂದಿಗೆ ಇದೇ ಸೆ.25ರೊಳಗೆ ಅರ್ಜಿಯನ್ನು ಬಿ.ಡಿ.ಎ.ಎ ಫುಟ್ ಬಾಲ್ ಮೈದಾನದ ಯುವಸ್ಪಂದನ ಕೇಂದ್ರಕ್ಕೆ ಸಲ್ಲಿಸುಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಬಿ.ಡಿ.ಎ.ಎ ಫುಟ್ ಬಾಲ್ ಮೈದಾನದಲ್ಲಿ ಇರುವ ಯುವಸ್ಪಂದನ ಕೇಂದ್ರ ದೂ: 08392-278827 ಹಾಗೂ ಕ್ಷೇತ್ರ ಸಂಪರ್ಕಾಧಿಕಾರಿಗಳಾದ ಸುನಿಲ್ ಕುಮಾರ್ ಎನ್.ಮೊ:9110809886 ಗೆ ಸಂಪರ್ಕಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap