ಮಾರುಕಟ್ಟೆ ಸೆಸ್ ರದ್ದು ಮಾಡುವಂತೆ ಆಗ್ರಹ

ಸಿರಿನಾಡ ಸುದ್ದಿ, ಕೊಟ್ಟೂರು: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿಸುವ ರೈತರ ಉತ್ಪನ್ನಗಳ ಮೇಲೆ ವಿಸುವ ಸೆಸ್‌ನ್ನು ಪೂರ್ಣವಾಗಿ ರದ್ದುಪಡಿಸುವಂತೆ ಒತ್ತಾಯಿಸಿ ಪಟ್ಟಣದ ಎಪಿಎಂಸಿ ವರ್ತಕರು ಮಂಗಳವಾರ ಮಾರುಕಟ್ಟೆಯ ವರ್ತಕರು ಸಮಿತಿಯ ಉಪ ಕಾರ್ಯದರ್ಶಿ ಬಸವರಾಜಗೆ ಮನವಿ ಸಲ್ಲಿಸಿದರು.
ಪಟ್ಟಣದ ಶ್ರೀ ಕೊಟ್ಟೂರೇಶ್ವರ ದಲ್ಲಾಲರು ಮತ್ತು ಖರೀದಿದಾರರ ಸಂಘದ ನೇತೃತ್ವದಲ್ಲಿ ಪ್ರಾಂಗಣದಿAದ ಹೊರಗೆ ರೈತರಿಂದ ವರ್ತಕರು ನೇರವಾಗಿ ಉತ್ಪನ್ನಗಳನ್ನು ಖರೀದಿಸುವ ಕುರಿತಾಗಿ ಇತ್ತೀಚಿಗೆ ಸರಕಾರ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಆದರೆ ಹೊಸ ಕಾಯಿದೆ ಅನ್ವಯ ನೇರ ಖರೀದಿಸುವವರಿಗೆ ಯಾವುದೇ ಸೆಸ್ ವಿದಿಸುತ್ತಿಲ್ಲ. ಆದರೆ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿಸುವ ಉತ್ಪನ್ನಗಳ ಮೇಲೆ ಮೊದಲಿದ್ದ ಶೇ.೧.೫ರ ಸೆಸ್‌ನ್ನು ಶೇ.೧ಕ್ಕೆ ಇಳಿಸಿದ್ದಾರೆ. ಇದರಿಂದ ಪ್ರಾಂಗಣದಲ್ಲಿ ಉತ್ಪನ್ನಗಳಿಗೆ ಸೂಕ್ತ ಧಾರಣೆ ಸಿಗದಿರಲು ಸಾಧ್ಯವಿದೆ. ಅಲ್ಲದೇ ಸರಕಾರದ ಎಪಿಎಂಸಿ ಕಾಯಿದೆಯಲ್ಲಿಯೇ ವರ್ತಕರಿಗೆ ತಾರತಮ್ಯ ನೀತಿ ಜಾರಿ ಮಾಡಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿಸುವ ಉತ್ಪನ್ನಗಳ ಮೇಲೆ ಯಾವುದೇ ಸೆಸ್ ಹಾಕದಂತೆ ನಿಯಮ ಜಾರಿ ಮಾಡಬೇಕು. ಈ ಹಿನ್ನಲೆಯಲ್ಲಿ ಸರಕಾರದ ತಾರತಮ್ಯ ನೀತಿ ವಿರೋಸಿ ಮತ್ತು ಸೆಸ್ ಪೂರ್ಣ ರದ್ದು ಮಾಡುವಂತೆ ಒತ್ತಾಯಿಸಿ ಜೂ.೧೭ರಿಂದ ಅರ್ನಿಷ್ಟಾವವರೆಗೆ ಮಾರುಕಟ್ಟೆ ವಹಿವಾಟು ಬಂದ್ ಮಾಡಲಾಗುವುದು ಎಂದು ವರ್ತಕರು ಎಚ್ಚರಿಸಿದ್ದಾರೆ.
ಸಂಘದ ಅಧ್ಯಕ್ಷ ಪತ್ತಿಕೊಂಡ ಗಣೇಶಪ್ಪ, ಉಪಾಧ್ಯಕ್ಷ ಮಹೇಂದ್ರಕುಮಾರ್ ಜೈನ್, ಕಾರ್ಯದರ್ಶಿ ಬಿ.ಎಸ್.ವೀರೇಶ, ಖಜಾಂಚಿ ಎಸ್.ಗುರುಶಾಂತಪ್ಪ, ವರ್ತಕರಾದ ಪಿ.ಶಂಭುನಾಥ, ಕಾಮಶೆಟ್ಟಿ ಕೊಟ್ರೇಶ, ರಾಂಪುರದ ವಿವೇಕಾನಂದ, ಪ್ರಭಾಕರ ಶೆಟ್ಟಿ, ಚಾಪಿ ಚಂದ್ರಪ್ಪ, ಜನಾರ್ಧನ, ಕಾರ್ತೀಕ, ಅನಿಲ್‌ಕುಮಾರ್ ಜೈನ್, ಪ್ರಶಾಂತ, ಜೇಠಮಲ್ ಸೇರಿ ಅನೇಕರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap