ಮನೆ ಬಾಗಿಲಿಗೆ ಸೇವೆ ನೀಡುತ್ತಿರುವ ಬ್ಯಾಂಕ್ ಮಿತ್ರರು

ಸಿರಿನಾಡ ಸುದ್ದಿ, ಸಿಂಧನೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಜನರಿಗೆ ಬ್ಯಾಂಕ್ ಮಿತ್ರರಿಂದಾಗಿ ತುಂಬಾ ಅನುಕೂಲವಾಗಲಿದೆ.
ತಾಲೂಕಿನ ತಿಡಿಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 800ಕ್ಕೂ ಅಕ ಫಲಾನುಭವಿಗಳಿಗೆ ಸರಕಾರದ ನಾನಾ ಯೋಜನೆಗಳಡಿ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಬ್ಯಾಂಕ್ ಮಿತ್ರ ವಿಶ್ವನಾಥ ಮಸ್ಕಿಮಠ, ಮನೆಗೂ ತೆರಳಿ ಹಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರಷ್ಟೇ ಅಲ್ಲದೆ ಇನ್ನುಳಿದ ಬ್ಯಾಂಕ್‌ಗಳಲ್ಲೂ ಇರುವ ಪ್ರತಿನಿಗಳು ಕೆಲಸ ಮಾಡುತ್ತಿದ್ದು, ಜನರಲ್ಲಿ ಹರ್ಷ ಮೂಡಿಸಿದೆ. ಪ್ರತಿ ಬ್ಯಾಂಕ್‌ಗಳನ್ನು ಜನರಿಗೆ ಅನುಕೂಲವಾಗುವಂತೆ ಬ್ಯಾಂಕ್ ಮಿತ್ರರನ್ನು ನೇಮಕ ಮಾಡಲಾಗಿದೆ. ಈ ಸಿಬ್ಬಂದಿ ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರಿಗೆ ಸರಕಾರದಿಂದ ಬರುವ ಹಣವನ್ನು ಬಯೋಮೆಟ್ರಿಕ್ ತಂಬ್ ಮೂಲಕ ಪಾವತಿಸಬೇಕು. ಇವರ ಕಾರ್ಯ ಲಾಕ್‌ಡೌನ್‌ನ ಅನಾನುಕೂಲಗಳ ನಡುವೆಯೂ ಎಲ್ಲರ ಮನಗೆದ್ದಿದೆ. ಗರೀಬಿ ಕಲ್ಯಾಣ ಯೋಜನೆಯಡಿ ಜನಾಧನ ಖಾತೆಗೆ 500 ರೂಪಾಯಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ 2000, ನೊಂದಾಯಿತ ಕಾರ್ಮಿಕರಿಗೆ 2000 ರೂಪಾಯಿ ಹಾಗೆಯೇ ವೃದ್ದಾಪ್ಯ, ವಿಕಲಚೇತನರು, ವಿಧವಾ ವೇತನವು ಫಲಾನುಭವಿಗಳ ಖಾತೆಗೆ ಜಮೆ ಆಗಿದೆ. ಬ್ಯಾಂಕ್‌ಗಳಿಗೆ ಫಲಾನುಭವಿಗಳು ಆಧಾರ್‌ಲಿಂಕ್ ಮಾಡಿರುವುದರಿಂದ, ಬ್ಯಾಂಕ್ ಮಿತ್ರರು ಬಯೋಮೆಟ್ರಿಕ್ ಕೊಂಡೊಯ್ದು ಅದರಲ್ಲಿ ತಂಬ್ ಹಾಕಿಸಿಕೊಂಡು ನೇರವಾಗಿ ನಗದು ರೂಪದಲ್ಲಿ ಹಣ ನೀಡುತ್ತಿದ್ದಾರೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಹಳ್ಳಿಗರು ನಗರಕ್ಕೆ ಬಂದು ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ಬ್ಯಾಂಕ್ ಮಿತ್ರರು ಜನರ ಮನೆಗೆ ಹೋಗುತ್ತಿರುವುದು ವಿಶೇಷ ಎನಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap