ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ರೈತ ಸಂಘ ವಿರೋಧ.

ಸಿರಿನಾಡ ಸುದ್ದಿ, ಹೂವಿನಹಡಗಲಿ: ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡದೇ ಯಥಾ ಸ್ಥಿತಿ ಕಾಪಾಡುವ ಮೂಲಕ ಸಣ್ಣ ರೈತರ ಹಿತ ಕಾಯಬೇಕು ಎಂದು ಕರ್ನಾಟಕ ರಾಜ್ಯ ಹಸಿರು ರೈತ ಸಂಘದ ಸದಸ್ಯರು ಹೂವಿನಹಡಗಲಿಯಲ್ಲಿ ಆಗ್ರಹಿಸಿದರು.
ಇಲ್ಲಿನ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ವಿಜಯಕಮಾರ್ ಅವರಿಗೆ ಮನವಿ ಸಲ್ಲಿಸಿದ ರೈತ ಸಂಘದ ಸದ್ಯರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಾಮಾನ್ಯ ರೈತರಿಗೆ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ಶ್ರೀಮಂತರು, ರಾಜಕಾರಣಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗಲಿದೆ. ಹಣವಂತರು ಸಣ್ಣ ರೈತರಿಗೆ ಆಮಿಷವೊಡ್ಡಿ ಅವರ ಭೂಮಿಯ ಹಕ್ಕನ್ನು ಕಸಿದುಕೊಳ್ಳುವ ಅಪಾಯ ಹೆಚ್ಚಿದೆ ಎಂದು ತಿಳಿಸಿದರು.
ಸರ್ಕಾರ ಯಾವುದೇ ಕಾರಣಕ್ಕೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು. ರೈತರ ಹಿತ ಕಡೆಗಣಿಸಿ ಕಾಯ್ದೆಗೆ ತಿದ್ದಪಡಿ ತಂದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಅಂಚಿ ಮಂಜುನಾಥ, ಎಂ.ಗAಗಾಧರ, ಟಿ.ರಾಮರೆಡ್ಡಿ, ಎ.ವಿರೂಪಾಕ್ಷಿ, ಎನ್.ಸಿದ್ದಪ್ಪ, ಅಂಕ್ಲಿ ಸಿದ್ದಪ್ಪ, ಎಂ.ನವೀನ್ ಇತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap