ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತ, ಮನೆಗಳಿಗೆ ನುಗ್ಗಿದ ನೀರು.

ಸಿರಿನಾಡ ಸುದ್ದಿ, ಬಳ್ಳಾರಿ: ಕಳೆದ ಮೂರ್ನಾಲ್ಕು ದಿನಗಳಿಂದಲೂ ಸುರಿದ ವಿಪರೀತ ಮಳೆಯಿಂದ ರೇಣುಕಾನಗರ ಸೇರಿದಂತೆ ಇನ್ನಿತರೆ ಕಾಲೊನಿಯ ಮನೆಗಳಿಗೆ ಮಳೆಯ ನೀರು ನುಗ್ಗಿ ನಿವಾಸಿಗಳ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.
ಇದು ಕೇವಲ ಒಂದು ನಗರಕ್ಕೆ ಸಂಬAದಿಸಿದ ತೊಂದರೆಯಲ್ಲ, ಮಹಾನಗರ ವ್ಯಾಪ್ತಿಯ ವಿವಿಧ ಕಾಲೊನಿಯ ನಿವಾಸಿಗಳು ರಾತ್ರಿಯಿಂದ ಮಳೆಯ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಕನಿಷ್ಠ ಜೀವನ ಸಾಗಿಸಲು ಹೆಣಗಾಡುವಂತಾಗಿದೆ. ನೀರು ನುಗ್ಗಿರೋದರಿಂದ ಮನೆಯೊಳಗಿನ ಅಗತ್ಯ ವಸ್ತುಗಳು ನೀರಿನಲ್ಲಿ ನೆನೆದು ನಿತ್ಯದ ಉಪಹಾರ ಮತ್ತು ಊಟದ ತಯಾರಿಗೂ ತೊಮದರೆ ಪಡುವಂತಾಗಿದೆ.
ಈ ಬಗ್ಗೆ ಸಮಸ್ಯೆ ತಿಳಿಸಲು ಅಧಿಕಾರಿಗಳ ಬಳಿ ತೆರಳಿದರೆ ನಿಮ್ಮ ಕಾಲೋನಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ಪಾಲಿಕೆಯಿಂದ ಪರವಾನಿಗೆ ಪಡೆದಿರಬೇಕು ಹಾಗೂ ವಾರ್ಷಿಕವಾಗಿ ಶುಲ್ಕ ಪಾವತಿಯಾಗಿರಬೇಕು, ಅವುಗಳನ್ನು ಪಾಲಿಸಿದಾಗ ಮಾತ್ರ ಪಾಲಿಕೆಯಿಂದ ನಿಮ್ಮ ಸಮಸ್ಯೆಗಳ ಬಗ್ಗೆ ಸಮರ್ಪಕ ಸೌಲಭ್ಯ ಒದಗಿಲಸಾಗುವುದು ಎಂದಿರುವುದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಹಾಲಿ ಜನಪ್ರತಿನಿಧಿಗಳಿಲ್ಲದೇ ಇರುವುದು ಈ ಅಧಿಕಾರಿ ವರ್ಗಕ್ಕೆ ಲಂಗುಲಗಾಮು ಇಲ್ಲದಂತಾಗಿದೆ. ಜನರ ಸಮಸ್ಯೆ ಆಲಿಸಲು ಪ್ರತಿನಿಧಿಗಳೇ ಬೇಕು ಎಂಬುದು ಸುಳ್ಳಲ್ಲ. ಅಧಿಕಾರಿ ವರ್ಗ ಜನರ ಸಮಸ್ಯೆಯನ್ನು ಆಲಿಸುವುದಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೇ ಆರು ತಿಂಗಳು ಕಳೆದರೂ ಸರ್ಕಾರ ಚುನಾವಣೆ ನಡೆಸುವ ಕುರಿತು ಇದುವರೆಗೆ ಚಿಂತಿಸಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap